Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುರಳೀಧರನ್ ದಾಖಲೆ ಮುರಿಯುವಂತೆ ಅಶ್ವಿನ್ ಬೆನ್ನುತಟ್ಟಿದ ಹಾಗ್

Brad Hogg backs R Ashwin to break Muttiah Muralitharans record

ಸಿಡ್ನಿ: ಶ್ರೀಲಂಕಾ ಕ್ರಿಕೆಟ್ ದಂತಕತೆ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿ 800 ಟೆಸ್ಟ್ ವಿಕೆಟ್‌ಗಳ ವಿಶ್ವದಾಖಲೆಯಿದೆ. ಈ ದಾಖಲೆ ಮುರಿಯೋದು ಸುಲಭದ ಮಾತಲ್ಲ. ಆದರೆ ಈ ವಿಶ್ವದಾಖಲೆ ಮುರಿಯಲು ಭಾರತೀಯ ಬೌಲರ್ ಆರ್‌ ಅಶ್ವಿನ್ ಅವರಿಂದ ಸಾಧ್ಯ ಎಂದು ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧವಾಗಿರುವ ಭಾರತೀಯ ತಂಡದಲ್ಲಿ ಆರ್‌ ಅಶ್ವಿನ್ ಕೂಡ ಇದ್ದಾರೆ. ಇಂಗ್ಲೆಂಡ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಆಡಲಿದೆ.

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸದ್ಯ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ 14 ಪಂದ್ಯಗಳಲ್ಲಿ 70 ವಿಕೆಟ್ ಪಡೆದಿದ್ದರೆ, ಅಶ್ವಿನ್ 13 ಪಂದ್ಯಗಳಲ್ಲಿ 67 ವಿಕೆಟ್ ಪಡೆದಿದ್ದಾರೆ. ಇನ್ನು ಫೈನಲ್‌ನಲ್ಲಿ 4 ವಿಕೆಟ್ ಪಡೆದರೆ ಕಮಿನ್ಸ್ ದಾಖಲೆ ಬದಿಗೆ ಸರಿಯಲಿದೆ.

'ನನಗನ್ನಿಸುತ್ತದೆ, ಅಶ್ವಿನ್ 42ರ ಹರೆಯದ ವರೆಗೂ ಟೆಸ್ಟ್ ಕ್ರಿಕೆಟ್ ಆಡುತ್ತಾರೆ. ನನ್ನ ಪ್ರಕಾರ ಅಶ್ವಿನ್‌ಗೆ ಮುಂದೆ ಬ್ಯಾಟಿಂಗ್ ಕಷ್ಟ ಅನ್ನಿಸಬಹುದು. ಆದರೆ ಬೌಲಿಂಗ್‌ನಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಕನಿಷ್ಠ 600 ವಿಕೆಟ್ ಆದರೂ ಅಶ್ವಿನ್ ಪಡೆಯುತ್ತಾರೆ ಎಂದು ನನಗನ್ನಿಸುತ್ತದೆ,' ಎಂದು ಹಾಗ್ ಹೇಳಿದ್ದಾರೆ. 34ರ ಹರೆಯದ ಅಶ್ವಿನ್ ಸದ್ಯ ಟೆಸ್ಟ್‌ನಲ್ಲಿ 409 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Friday, May 28, 2021, 0:21 [IST]
Other articles published on May 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+