ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವ ತನಕ ಕುಂಬ್ಳೆ ಕೋಚ್!
ಲಂಡನ್, ಜೂನ್ 12: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವ ತನಕ ಅನಿಲ್ ಕುಂಬ್ಳೆ ಅವರೇ ಮುಖ್ಯ ಕೋಚ್ ಆಗಿ ಮುಂದುವರೆಯಲಿದ್ದಾರೆ.
ಕೊಹ್ಲಿ ಪಡೆ ಕೆರಿಬಿಯನ್ ಪ್ರವಾಸ
ಜೂನ್ ತಿಂಗಳ ಅಂತ್ಯಕ್ಕೆ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾಕ್ಕೆ ಹೊಸ ಕೋಚ್ ನೇಮಕಾತಿಗಾಗಿ ಸಂದರ್ಶನ ಆರಂಭವಾಗಿರುವ ಬೆನ್ನಲ್ಲೇ, ಇಂಥದ್ದೊಂದು ಸುದ್ದಿಯನ್ನು ಸೋಮವಾರ(ಜೂನ್ 12)ದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಡಳಿತ ಅಧಿಕಾರಿ ವಿನೋದ್ ರಾಯ್ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಒಂದು ವರ್ಷದ ಅವಧಿಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಅವರ ಕಾರ್ಯಾವಧಿ ಚಾಂಪಿಯನ್ಸ್ ಟ್ರೋಫಿ ನಂತರ ಮುಗಿಯಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತವು ಸೆಮಿಫೈನಲ್ ಹಂತಕ್ಕೇರಿದ್ದು, ಜೂನ್ 15ರಂದು ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಜೂನ್ 18ರಂದು ಫೈನಲ್ ನಡೆಯಲಿದೆ.
In Pics : ಶ್ರೀಲಂಕಾದ ಸೆಮೀಸ್ ಕನಸು ಭಗ್ನಗೊಳಿಸಿದ ಪಾಕಿಸ್ತಾನ
ಈ ನಡುವೆ ಹೊಸ ಕೋಚ್ ಆಯ್ಕೆಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಸಚಿನ್, ಸೌರವ್ ಹಾಗೂ ಲಕ್ಷ್ಮಣ್ ಅವರಿರುವ ಕ್ರಿಕೆಟ್ ಸಮಿತಿ ಹೇಳಿದೆ.ಹೀಗಾಗಿ, ಕುಂಬ್ಳೆ ಅವರು ಇನ್ನೊಂದು ಪ್ರವಾಸಕ್ಕೆ ಸಜ್ಜಾಗಬಹುದಾಗಿದೆ.
ಜೂನ್ 18 ರಂದು ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಮುಗಿಸಿದ ಬಳಿಕ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಜೂನ್ 23ರಿಂದ ಜುಲೈ 9ರ ತನಕ ವಿಂಡೀಸ್ ಪ್ರವಾಸದಲ್ಲಿ ಐದು ಏಕದಿನ ಪಂದ್ಯಗಳ ಸರಣಿ ಹಾಗೂ ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಉಭಯ ತಂಡಗಳು ಆಡಲಿವೆ. ಮೊದಲ ಏಕದಿನ ಪಂದ್ಯ ಜೂನ್ 23ರಂದು ನಡೆಯಲಿದೆ.(ಒನ್ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications