IPL 2022: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಡೆಲ್ಲಿ ಓಪನರ್ ಪೃಥ್ವಿ ಶಾ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓಪನಿಂಗ್ ಬ್ಯಾಟರ್ ಪೃಥ್ವಿ ಶಾ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದು, ಟೈಫಾಯ್ಡ್‌ನಿಂದ ಗುಣಮುಖರಾಗಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿರುವ ಶಾ ಇನ್ನೂ ಚೇತರಿಕೆಗೆ ಸಮಯ ಬೇಕಾಗಿರುವುದರಿಂದ ಈ ಸೀಸನ್‌ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದು ಅನುಮಾನ ಮೂಡಿಸಿದೆ.
ಈ ಕುರಿತಾಗಿ ಅಧಿಕೃತವಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಟ್ವಿಟ್ಟರ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದು, ''ದೆಹಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಟೈಫಾಯಿಡ್‌ನಿಂದ ಬಳಲುತ್ತಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಡಿಸಿ ವೈದ್ಯಕೀಯ ತಂಡದಿಂದ ನಿಗಾ ವಹಿಸುತ್ತಿರುವಾಗ ಶಾ ಅವರು ಪ್ರಸ್ತುತ ಚೇತರಿಸಿಕೊಳ್ಳುತ್ತಿರುವ ತಂಡದ ಹೋಟೆಲ್‌ಗೆ ಮರಳಿದ್ದಾರೆ.'' ಎಂದು ಟ್ವೀಟ್ ಮಾಡಿದೆ.
ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್‌ನ ಮತ್ತೊಬ್ಬ ಓಪನರ್ ಡೇವಿಡ್ ವಾರ್ನರ್ ಜೊತೆಗೆ ಸ್ಫೋಟಕ ಓಪನಿಂಗ್ ನೀಡುವ ಮೂಲಕ ತಂಡಕ್ಕೆ ಆಧಾರವಾಗಿದ್ದರು. ಪವರ್‌ಪ್ಲೇ ಓವರ್‌ಗಳಲ್ಲಿ ಡೆಲ್ಲಿ ತಂಡಕ್ಕೆ ಆಧಾರವಾಗುತ್ತಿದ್ದ ಪೃಥ್ವಿ ಶಾ ಇನ್ನಿಂಗ್ಸ್ ನಂತರದಲ್ಲಿ ರಿಷಭ್ ಪಂತ್, ರೋವ್ಮನ್ ಪೊವೆಲ್ ಉತ್ತಮ ಫಿನಿಶಿಂಗ್ ನೀಡಲು ಸಾಧ್ಯವಾಗುತ್ತಿತ್ತು.
ಆದ್ರೀಗ ಪೃಥ್ವಿ ಶಾ ಮುಂದಿನ ಪಂದ್ಯಕ್ಕೆ ಲಭ್ಯವಾಗುತ್ತಾರೋ ಅಥವಾ ಇಲ್ಲವೋ ಎಂಬ ಯಾವುದೇ ಮಾಹಿತಿ ಇಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 12 ಪಂದ್ಯಗಳಲ್ಲಿ ತಲಾ ಆರು ಗೆಲುವು ಮತ್ತು ಸೋಲನ್ನ ಕಂಡಿದೆ. ಹೀಗಿರುವಾಗ ಡೆಲ್ಲಿ ಪ್ಲೇ ಆಫ್ ತಲುಪಿದ್ದಲ್ಲಿ ಪೃಥ್ವಿ ಶಾ ಅವರ ಕೊಡುಗೆಯ ಅವಶ್ಯಕತೆ ತಂಡಕ್ಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications