Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಪೃಥ್ವಿ ಶಾಗೆ ಟೈಫಾಯ್ಡ್‌ ಜ್ವರ ಇದೆ ಎಂದ ರಿಷಭ್ ಪಂತ್

Prithvi shaw

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಓಪನಿಂಗ್ ಬ್ಯಾಟರ್ ಪೃಥ್ವಿ ಶಾ ಈಗಾಗಲೇ ಅನಾರೋಗ್ಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದಿದ್ದು, ಆತನ ಆರೋಗ್ಯದ ಕುರಿತಾಗಿ ನಾಯಕ ರಿಷಭ್ ಪಂತ್ ಅಪ್‌ಡೇಟ್ ನೀಡಿದ್ದಾರೆ.

ರಾಜಸ್ತಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಪಂದ್ಯ ಜಯಗಳಿಸಿದ ರಿಷಭ್ ಪಂತ್ ಪಡೆ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ರಾಜಸ್ತಾನ್ ನೀಡಿದ್ದ 161ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಆರಂಭಿಕ ಬ್ಯಾಟರ್ ಶ್ರೀಕರ್ ಭರತ್ ಶೂನ್ಯಕ್ಕೆ ಔಟಾದ್ರೂ ಸಹ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್‌ ಜೋಡಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭರ್ಜರಿ ಗೆಲುವು ತಂದುಕೊಟ್ಟಿತು.

ವಾರ್ನರ್ ಅಜೇಯ 52 ರನ್ ಗಳಿಸಿದ್ರೆ, ಮಿಚೆಲ್ ಮಾರ್ಷ್‌ 62 ಎಸೆತಗಳಲ್ಲಿ 89 ರನ್ ಸಿಡಿಸಿ ಔಟಾಗಿದ್ದಲ್ಲದೆ ತಂಡಕ್ಕೆ ಗೆಲುವು ತಂದುಕೊಟ್ಟರು. ಡೆಲ್ಲಿ 18.1 ಓವರ್‌ನಲ್ಲಿಯೇ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

DC

ಪಂದ್ಯದ ಬಳಿಕ ಪೃಥ್ವಿ ಶಾ ಆರೋಗ್ಯದ ಕುರಿತು ಮಾತನಾಡಿರುವ ರಿಷಭ್ ಪಂತ್, ಪೃಥ್ವಿ ಶಾ ಆಸ್ಪತ್ರೆಗೆ ಜ್ವರದ ಹಿನ್ನಲೆಯಲ್ಲಿ ದಾಖಲಾಗಿದ್ದರು. ಆದ್ರೆ ವೈದ್ಯರು ಇತ್ತೀಚಿಗೆ ತಿಳಿಸಿದಂತೆ ಆತನಿಗೆ ಟೈಫಾಯ್ಡ್ ರೀತಿಯಲ್ಲಿ ಜ್ವರ ಕಾಣಿಸಿಕೊಂಡಿದೆ ಎಂದಿದ್ದಾರೆ.

"ನಾವು ಅವನನ್ನು ಪಂದ್ಯದಲ್ಲಿ ಮಿಸ್ ಮಾಡಿಕೊಂಡಿದ್ದೇವೆ, ಆದರೆ ನಾವು ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅವನಿಗೆ ಟೈಫಾಯಿಡ್ ಇದೆ ಅಥವಾ ಅಂತಹದ್ದೇನಾದರೂ ಇರಬಹುದು ಎಂದು ವೈದ್ಯರು ನನಗೆ ಹೇಳಿದರು" ಎಂದು ಪಂತ್ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡುತ್ತಾ ಹೇಳಿದರು.

Virat Kohli ಅವರ ವಿಶೇಷ ಸಂದರ್ಶನ ಮಾಡಿದ Danish Sait | Oneindia Kannada

ಪೃಥ್ವಿ ಶಾ ಕೊನೆಯ ಬಾರಿಗೆ ಡೆಲ್ಲಿ ಕ್ಯಾಪಿಟಲ್ಸ್ ಮೇ 1ರಂದು ಲಕ್ನೋ ಸೂಪರ್ ಜೈಂಟ್‌ ವಿರುದ್ಧದ ಪಂದ್ಯದಲ್ಲಿ ಆಡಿದ್ರು.

Story first published: Thursday, May 12, 2022, 17:48 [IST]
Other articles published on May 12, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+