ಕನ್ನಡ ಚಲನಚಿತ್ರ ಕಪ್ 2023: ದಿನಾಂಕ, ಸ್ಥಳ ಬದಲಾವಣೆ; ಕ್ರಿಸ್ ಗೇಲ್, ಲಾರಾ, ರೈನಾ, ಗಿಬ್ಸ್ ಭಾಗಿ

ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಕ್ರಿಕೆಟ್ ಪಂದ್ಯಾವಳಿಯ ಮೂರನೇ ಆವೃತ್ತಿಯನ್ನು ಆಡಲಾಗುವುದು ಎಂದು ಖ್ಯಾತ ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಇದರಲ್ಲಿ ಆರು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದು, ಕೆಸಿಸಿ ಪಂದ್ಯಾವಳಿಗೆ ಇನ್ನಷ್ಟು ಮೆರಗು ನೀಡಲಿದ್ದಾರೆ.
ಕೆಲವೇ ದಿನಗಳ ಹಿಂದೆ ನಡೆದ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಫೆಬ್ರವರಿ 11 ಮತ್ತು 12ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಇದೀಗ, ದಿನಾಂಕ ಮತ್ತು ಸ್ಥಳ ಎರಡೂ ಬದಲಾವಣೆಯಾಗಿದೆ.
ಗುರುವಾರ, ಜನವರಿ 26ರ ಸಂಜೆ ಕೆಸಿಸಿ ಪಂದ್ಯಾವಳಿಗಾಗಿ ನಡೆದ ಆಟಗಾರರ ವಿಸ್ತೃತ ಹರಾಜು ಸಂದರ್ಭದಲ್ಲಿ, ತಂಡಗಳ ಮಾಲೀಕರು, ನಾಯಕರು ಮತ್ತು ಆಟಗಾರರನ್ನು ನಿರ್ಧರಿಸಲಾಯಿತು.
ಇನ್ನು ಫೆಬ್ರವರಿ 24 ಮತ್ತು 25ರಂದು ಎರಡು ದಿನಗಳ ಕಾಲ ಟಿ10 ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿದೆ.
ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಗಂಗ ವಾರಿಯರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್, ವಿಜಯನಗರ ಪೇಟ್ರಿಯಾಟ್ಸ್, ಒಡೆಯರ್ ಚಾರ್ಜರ್ಸ್ ಮತ್ತು ಹೊಯ್ಸಳ ಈಗಲ್ಸ್ ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಕಿಚ್ಚ ಸುದೀಪ್, ಶಿವರಾಜಕುಮಾರ್, ಧನಂಜಯ, ಉಪೇಂದ್ರ, ಧ್ರುವ ಸರ್ಜಾ ಮತ್ತು ಗಣೇಶ್ ಅವರಂತಹ ಸ್ಟಾರ್ ನಾಯಕರನ್ನು ಹೊಂದಿರುವ ತಂಡಗಳಿಗೆ ತಲಾ ಒಬ್ಬರು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರರು ಸೇರ್ಪಡೆಯಾಗಿದ್ದಾರೆ.

ಕೆಸಿಸಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾಗಿ
ಈ ಬಾರಿ ಕೆಸಿಸಿ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರಾದ ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ಸುರೇಶ್ ರೈನಾ, ಸುಬ್ರಮಣ್ಯಂ ಬದರಿನಾಥ್, ಹರ್ಷಲ್ ಗಿಬ್ಸ್ ಮತ್ತು ತಿಲಕರತ್ನೆ ದಿಲ್ಶಾನ್ ಆಡುತ್ತಿದ್ದಾರೆ. ಗಿಬ್ಸ್ ಮತ್ತು ದಿಲ್ಶಾನ್ ಈ ಹಿಂದೆಯೂ ಟೂರ್ನಿಯಲ್ಲಿ ಆಡಿದ್ದರು.
ಕ್ರಿಸ್ ಗೇಲ್ ಅವರು ಕಿಚ್ಚ ಸುದೀಪ್ ನಾಯಕತ್ವದ ಹೊಯ್ಸಳ ಈಗಲ್ಸ್ ತಂಡದ ಪಾಲಾಗಿದ್ದರೆ, ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ ಅವರು ಶಿವರಾಜಕುಮಾರ್ ತಂಡದ ಪರ ಆಡಲಿದ್ದಾರೆ.
"ಟಿ10 ಪಂದ್ಯಗಳು ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆಯನ್ನು ನೀಡಲು ಉತ್ತಮ ಸ್ವರೂಪವಾಗಿದೆ. ಕೆಸಿಸಿ ನನ್ನ ಕನಸಾಗಿತ್ತು ಮತ್ತು ಇದರಲ್ಲಿ ಸೇರುವ ಪ್ರತಿಯೊಬ್ಬರೂ ನನ್ನ ಚಲನಚಿತ್ರ ಕುಟುಂಬದ ಭಾಗವಾಗಿದ್ದಾರೆ," ಎಂದು ಸುದೀಪ್ ಹೇಳಿದರು.

ಕನ್ನಡ ಚಿತ್ರರಂಗದ ಹಲವು ಆಟಗಾರರು ಭಾಗಿ
ಕೆಸಿಸಿ ಪಂದ್ಯಾವಳಿಯಲ್ಲಿ ಆಲ್‌ರೌಂಡರ್‌ಗಳಾ ತ್ರಿವಿಕ್ರಮ್, ಚಂದನ್ ಗೌಡ, ಗರುಡ ರಾಮ್, ಅನುಪ್ ಭಂಡಾರಿ, ನಿರೂಪ್ ಭಂಡಾರಿ, ಸುನೀಲ್ ರಾವ್, ಲೂಸ್ ಮಾದ ಯೋಗಿ ಸೇರಿದಂತೆ ಚಲನಚಿತ್ರ ನಿರ್ದೇಶಕರಾದ ಪವನ್ ಒಡೆಯರ್ ಮತ್ತು ಸಿಂಪಲ್ ಸುನಿ ಸೇರಿದಂತೆ ಹಲವು ನಟರು ಆಡಲಿದ್ದಾರೆ.
ಎರಡು ದಿನಗಳ ಟೂರ್ನಿಯಲ್ಲಿ ಕೇವಲ ಕ್ರಿಕೆಟ್‌ಗೆ ಸಂಬಂಧಿಸಿದ್ದಲ್ಲದೆ, ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಮುಂದಿನ ದಿನಗಳಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸುದೀಪ್ ತಿಳಿಸಿದರು.
ಎರಡು ಅಗ್ರ ತಂಡಗಳು ಫೆಬ್ರವರಿ 25ರ ಸಂಜೆ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್
ಫೆಬ್ರವರಿ 24ರಂದು ನಡೆಯುವ ಪಂದ್ಯಗಳು
ಗಂಗಾ ವಾರಿಯರ್ಸ್ vs ಹೊಯ್ಸಳ ಈಗಲ್ಸ್
ಹೊಯ್ಸಳ ಈಗಲ್ಸ್ vs ಒಡೆಯರ್ ಚಾರ್ಜರ್ಸ್
ಕದಂಬ ಲಯನ್ಸ್ vs ರಾಷ್ಟ್ರಕೂಟ ಪ್ಯಾಂಥರ್ಸ್
ಫೆಬ್ರವರಿ 25ರಂದು ನಡೆಯುವ ಪಂದ್ಯಗಳು
ವಿಜಯನಗರ ಪೇಟ್ರಿಯಾಟ್ಸ್ vs ಕದಂಬ ಲಯನ್ಸ್
ಗಂಗಾ ವಾರಿಯರ್ಸ್ vs ಒಡೆಯರ್ ಚಾರ್ಜರ್ಸ್
ರಾಷ್ಟ್ರಕೂಟ ಪ್ಯಾಂಥರ್ಸ್ vs ವಿಜಯನಗರ ಪೇಟ್ರಿಯಾಟ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications