ಸಚಿನ್ ತೆಂಡೂಲ್ಕರ್‌ಗೆ ಕೊಹ್ಲಿಯನ್ನು ಹೋಲಿಸಿ ಲಾರಾ ಹೇಳಿದ ಮಾತು!
ವೆಸ್ಟ್ ಇಂಡೀಸ್‌ನ ದಂತಕತೆ ಬ್ರಿಯಾನ್ ಲಾರಾ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಪಟ್ಟಿಯಿಂದ ಹೊರಗಿಟ್ಟು ನೋಡಲು ಸಾಧ್ಯವೇ ಇಲ್ಲ. ಒಂದೇ ಕಾಲಘಟ್ಟದಲ್ಲಿ ಕ್ರಿಕೆಟ್ ಲೋಕವನ್ನು ಆಳಿದ ಈ ಇಬ್ಬರು ಆಟಗಾರರು ವೈಯಕ್ತಿಕವಾಗಿ ಅತ್ಯಾಪ್ತ ಸ್ನೇಹಿತರೂ ಹೌದು. ಇದೀಗ ತನ್ನ ಸ್ನೇಹಿತ ಸಚಿನ್ ತೆಂಡೂಲ್ಕರ್‌ಗೆ ಪ್ರಸಕ್ತ ಶ್ರೇಷ್ಟ ಆಟಗಾರ ವಿರಾಟ್ ಕೊಹ್ಲಿಯನ್ನು ಹೋಲಿಸಿ ಹೇಳಿಕೆ ನೀಡಿದ್ದಾರೆ.
ಹೌದು.. ಬ್ರಿಯಾನ್ ಲಾರಾ ಹೇಳಿಕೆಯನ್ನು ನೀಡಿರೋದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ. ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬ್ರಿಯಾನ್ ಲಾರಾ ವಿರಾಟ್ ಕೊಹ್ಲಿಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ದಂತಕತೆ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ರಿಯಾನ್ ಲಾರಾ ಈ ಸಂದರ್ಭದಲ್ಲಿ ತಾನೇನಾದರೂ ವಿರಾಟ್ ಕೊಹ್ಲಿಗೆ ಎದುರಾಳಿ ತಂಡದ ನಾಯಕನಾಗಿ ಇದ್ದಿದ್ದರೆ ಸಚಿನ್ ತೆಂಡೂಲ್ಕರ್ ಬಗ್ಗೆ ಯಾವ ರೀತಿಯಾಗಿ ತಲೆಕೆಡಿಸಿಕೊಂಡಿದ್ದನೋ ಅದೇ ರೀತಿ ಇರುತ್ತಿದ್ದೆ ಎಂಬ ಮಾತನ್ನು ಹೇಳಿದ್ದಾರೆ.

ತೆಂಡೂಲ್ಕರ್ ಸರ್ವಶ್ರೇಷ್ಠ;
ಈ ಸಂದರ್ಭದಲ್ಲಿ ಸಚಿನ ್ತೆಂಡೂಲ್ಕರ್ ಅವರ ಅನೇಕ ದಾಖಲೆಗಳನ್ನು ಮುರಿಯುವ ಸಾಮರ್ಥ್ಯವನ್ನು ಕೊಹ್ಲಿ ಹೊಂದಿದ್ದಾರೆ ಎಂಬುದನ್ನು ಕೂಡ ಹೇಳಿದ್ದಾರೆ ಬ್ರಿಯಾನ್ ಲಾರಾ. ಆದರೆ ಲಾರಾ ಅವರು ಅವರು ಇದೇ ಸಂದರ್ಭದಲ್ಲಿ ತೆಂಡೂಲ್ಕರ್ ದಾಖಲೆಯನ್ನು ಮುರಿದಾಕ್ಷಣ ತೆಂಡೂಲ್ಕರ್ ಅವರ ಘನತೆ ಕಡಿಮೆಯಾಗುವುದಿಲ್ಲ. ಆ ರೀತಿ ಭಾವಿಸುವುದೂ ತಪ್ಪು. ಆತ ಯಾವ ಕಾಲಕ್ಕೂ ಸರ್ವಶ್ರೇಷ್ಠ ಆಟಗಾರ ಎಂಬುದನ್ನು ಹೇಳಿದ್ದಾರೆ.

ತಾನು ವಿವಿಯನ್ ರಿಚರ್ಡ್‌ಗಿಂತ ಶ್ರೇಷ್ಟನಲ್ಲ;
ಇದೇ ಸಂದರ್ಭದಲ್ಲಿ ಲಾರಾ ತಾನು ಸರ್ ವಿವಿಯನ್ ರಿಚರ್ಡ್ ಅವರ ದಾಖಲೆಯನ್ನು ಮುರಿದೆ ಎಂದಾಕ್ಷಣ ಅವರಿಗಿಂತ ತಾನು ಶ್ರೇಷ್ಟ ಎಂದಲ್ಲ. ಅವರ ಆಟದ ವೈಖರಿಯನ್ನು ನೋಡಿಕೊಂಡೇ ಆಡಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂಬ ಮಾತನ್ನು ಹೇಳಿದ್ದಾರೆ.
735 ನಾಟೌಟ್ : ವಾರ್ನರ್ ಭೇಟಿ ಬಳಿಕ ಲಾರಾ ಹೀಗಂದಿದ್ದೇಕೆ?

ಕೊಹ್ಲಿಗೂ ತೆಂಡುಲ್ಕರ್ ಬಗ್ಗೆ ಅಪಾರ ಗೌರವ;
ಇದೇ ರೀತಿ ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ಅನುಸರಿಸಿದ ಕಾರಣದಿಂದಲೇ ಈ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ. ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಬಗ್ಗೆ ಸಾಕಷ್ಟು ಗೌರವ ಇಟ್ಟುಕೊಂಡಿರುವ ಆಟಗಾರ ಎಂದು ಹೇಳಿಕೆ ನೀಡಿದ್ದಾರೆ.

ತನ್ನ ದಾಖಲೆ ರೋಹಿತ್ ಮುರಿಯುತ್ತಾರೆ;
ಇತ್ತೀಚೆಗಷ್ಟೇ ಬ್ರಿಯಾನ್ ಲಾರಾ ತನ್ನ ದಾಖಲೆಯಯನ್ನು ಮುರಿಯಲು ರೋಹಿತ್ ಶರ್ಮಾ ಹಾಗೂ ಯುವ ಆಟಗಾರ ಪೃಥ್ವಿ ಶಾ ಅವರಿಗೆ ಮುರಿಯುವ ಅವಕಾಶ ಇದೆ ಎಂಬ ಮಾತನ್ನು ಹೇಳಿದ್ದರು. ಇದೀಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications