400 ರನ್‌ಗಳ ಟೆಸ್ಟ್ ರೆಕಾರ್ಡ್ ಮುರಿಯಬಲ್ಲ ಭಾರತದ ಯುವ ಆಟಗಾರರನ್ನು ಹೆಸರಿಸಿದ ಬ್ರಿಯಾನ್ ಲಾರಾ
ಜುಲೈ 12 ಶುಕ್ರವಾರ, ವೆಸ್ಟ್ ಇಂಡೀಸ್‌ನ ಮಾಜಿ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಅವರು, ತಾವು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಡಿದ 400 ರನ್‌ಗಳ ಗರಿಷ್ಠ ಸ್ಕೋರ್‌ನ ವಿಶ್ವ ದಾಖಲೆಯನ್ನು ಮುರಿಯಲಿರುವ ಟೀಮ್ ಇಂಡಿಯಾದ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ.
ಇತ್ತೀಚೆಗಿನ ಕ್ರಿಕೆಟ್‌ನಲ್ಲಿ ಅನುಭವಿಗಳೊಂದಿಗೆ ಯುವ ಬ್ಯಾಟರ್‌ಗಳು ಜೊತೆಗೂಡಿ ಟೆಸ್ಟ್‌ನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ. ಹೀಗಾಗಿ ತಮ್ಮ ದೀರ್ಘಕಾಲದ 400 ರನ್‌ಗಳ ವಿಶ್ವ ದಾಖಲೆಯನ್ನು ಶೀಘ್ರವೇ ಮುರಿದರೆ ಅಚ್ಚರಿ ಇಲ್ಲ ಎಂದು ಲಾರಾ ಹೇಳಿದ್ದಾರೆ.

ಲಾರಾ ವಿಶ್ವ ದಾಖಲೆ
ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಅಂಡ್ ಟೊಬಾಗೊ ಮೂಲದ ಬ್ರಿಯಾನ್ ಲಾರಾ ಟೆಸ್ಟ್ ಕ್ರಿಕೆಟ್ ಮಹತ್ತರವಾದ ಸಾಧನೆ ಮಾಡಿದ್ದಾರೆ. ಇಂದಿಗೂ ಲಾರಾ ಮಾಡಿರುವ ವಿಶ್ವದಾಖಲೆಯನ್ನು ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವಾಗಿಲ್ಲ.
2004ರಲ್ಲಿ ಎಂಟಗಾದ ಸೇಂಟ್ ಜಾನ್ಸ್‌ನಲ್ಲಿರುವ ರೀಕ್ರಿಯೇಷನ್ ಗ್ರೌಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ
ಇಂಗ್ಲೆಂಡ್ ಎದುರು ಬ್ರಿಯಾನ್ ಲಾರಾ 400 ರನ್‌ಗಳನ್ನು ಬಾರಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್ ಒಂದರಲ್ಲಿ ಬ್ಯಾಟರ್ ಒಬ್ಬರು ಕಲೆ ಹಾಕಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಈ ಮೂಲಕ ಲಾರಾ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದಕ್ಕೂ ಮುನ್ನ 1994 ರಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವೊಂದರಲ್ಲಿ ಲಾರಾ ಅಜೇಯ 501 ರನ್ ಬಾರಿಸಿ ಭಾರಿ ಸದ್ದು ಮಾಡಿದ್ದರು. ಇಂದಿಗೂ ಈ ದಾಖಲೆಗಳನ್ನು ಮುರಿಯುವುದು ಅಸಾಧ್ಯ ಎಂದೇ ಕ್ರಿಕೆಟ ವಲಯದಲ್ಲಿ ನಂಬಲಾಗದೆ.
ಅಕ್ಟೋಬರ್ 2003ರಲ್ಲಿ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 380 ರನ್‌ಗಳನ್ನು ಗಳಿಸಿದಾಗ ಲಾರಾ ದಾಖಲೆ ಮುರಿಯುವ ಸನಿಹವಿದ್ದರೂ, ಸಾಧ್ಯವಾಗಲಿಲ್ಲ. ಇದಾದ ಬಳಿಕ 2019ರಲ್ಲಿ ಅಡಿಲೇಡ್ ಓವಲ್‌ನಲ್ಲ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಡೇವಿಡ್ ವಾರ್ನರ್ ಕೂಡ 335 ರನ್‌ಗಳನ್ನು ಬಾರಿಸಿದ್ದರು.
ಈ ಇನ್ನಿಂಗ್ಸ್ ಸಂದಭದಲ್ಲಿ ವಾರ್ನರ್ ಔಟ್ ಆಗುವ ಮುನ್ನ ಆಸೀಸ್ ನಾಯಕ ಟಿಮ್ ಪೇನ್, ಸ್ಪೋಟಕ ಬ್ಯಾಟರ್ ವಾರ್ನರ್ ಅವರಿಗೆ ಲಾರಾ ದಾಖಲೆ ಮುರಿಯವು ಅವಕಾಶವಿದೆ ಎಂದು ಹೇಳಿದ್ದರು. ಆದರೆ ವಾರ್ನರ್ ದುರದೃಷ್ಟವಶಾತ ವಿಕೆಟ್ ಕಳೆದುಕೊಂಡರು. ಇದೀಗ ವಾರ್ನರ್ 2023ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ವಿಶ್ವ ದಾಖಲೆಯನ್ನು ಮುರಿಯಲಿರುವ ಭಾರತೀಯರು
ಬ್ರಿಯಾನ್ ಲಾರಾ ಅವರು ತಾವು ಮಾಡಿದ 400 ರನ್‌ಗಳ ಗರಿಷ್ಠ ಸ್ಕೋರ್‌ನ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾದ ಯುವ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಮುರಿಯುವ ಸಾಮರ್ಥ್ಯವಿದೆ. ಸರಿಯಾದ ಅವಕಾಶ ಮತ್ತು ಸನ್ನಿವೇಶ ಸಿಕ್ಕಿದ್ದೇ ಆದರೆ ಈ ಇಬ್ಬರು ಬ್ಯಾಟರ್‌ಗಳು ವಿಶ್ವ ದಾಖಲೆ ನಿರ್ಮಿಸಬಲ್ಲರು ಎಂದು ಹೇಳಿದ್ದಾರೆ.
ಅಲ್ಲದೆ ಇಂಗ್ಲೆಂಡ್ ತಂಡದಲ್ಲೂ ಆಕ್ರಮಣಕಾರಿ ಆಟಗಾರರಿದ್ದು, ಜ್ಯಾಕ್ ಕ್ರಾಲಿ ಮತ್ತು ಹ್ಯಾರಿ ಬ್ರೂಕ್ ಅವರನ್ನು ಕೂಡ ವಿಶ್ವ ದಾಖಲೆ ಮುರಿಯಲಿರುವ ಸ್ಪರ್ಧಿಗಳಾಗಿ ಭವಿಷ್ಯ ನುಡಿದ್ದಾರೆ.
ನನ್ನ ಸಮಕಾಲೀನರಲ್ಲಿ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಇಂಜಮಾಮ್-ಉಲ್-ಹಕ್, ಸನತ್ ಜಯಸೂರ್ಯ ಅವರಲ್ಲಿಯೂ ಈ ಸಾಮರ್ಥ್ಯವಿತ್ತು. ಈ ಆಟಗಾರರು 300ಕ್ಕೂ ಹೆಚ್ಚು ರನ್ ಗಳಿಸಿದರು ಕೂಡ ವಿಶ್ವದಾಖಲೆಯನ್ನು ಮರಿಯಲ ಸಾಧ್ಯವಾಗಲಿಲ್ಲ ಎಂದು ಡೇಲ ಮೇಲ್ ಸಂದರ್ಶನದಲ್ಲಿ ಲಾರಾ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications