ಟಿ20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ 3 ತಂಡಗಳನ್ನು ಹೆಸರಿಸಿದ ಬ್ರ್ಯಾನ್ ಲಾರಾ

ಕಳೆದ ವರ್ಷ ಏಕದಿನ ವಿಶ್ವಕಪ್ ನಡೆದು ಏಕದಿನದಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ಮೊತ್ತ ಮೊದಲ ಬಾರಿಗೆ ಸಾಮ್ರಾಟನಾಗಿ ಮಿಂಚಿದೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು ಯಾರಾಗಲಿದ್ದಾರೆ ವಿಶ್ವ ಚಾಂಪಿಯನ್ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿದೆ.
ಈ ಮಧ್ಯೆ ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಿಗ್ಗಜ ಬ್ರ್ಯಾನ್ ಲಾರಾ ಯಾರು ವಿಶ್ವ ಚಾಂಪಿಯನ್ ಆಗಬಹುದು ಎಂಬ ವಿಚಾರವಾಗಿ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬ್ರ್ಯಾನ್ ಲಾರಾ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ ಮೂರು ತಂಡಗಳನ್ನು ಹೆಸರಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಯಾವ ತಂಡಗಳಿಗೆ ಗೆಲ್ಲುವ ಸಾಮರ್ಥ್ಯವಿದೆ ಎಂದು ಹೇಳುವ ಜೊತೆಗೆ ಬ್ರ್ಯಾನ್ ಲಾರಾ ಅದಕ್ಕೆ ಪೂರಕವಾದ ಕಾರಣಗಳನ್ನೂ ಕೂಡ ನೀಡಿದ್ದಾರೆ.

ಲಾರಾ ಹೇಳಿದ ಮೊದಲ ತಂಡ
ಬ್ರ್ಯಾನ್ ಲಾರಾ ಹೆಸರಿಸಿದ ಮೊದಲ ತಂಡ ಬೇರೆ ಯಾವುದೂ ಅಲ್ಲ. ಅದು ಟೀಮ್ ಇಂಡಿಯಾ. ಟೀಮ್ ಇಂಡಿಯಾ ಬಲಿಷ್ಠವಾಗಿದ್ದು ಈ ಬಾರಿ ಗೆಲ್ಲುವ ಸಾಧ್ಯತೆಯಿದೆ ಎಂದಿದ್ದಾರೆ. ಟೀಮ್ ಇಂಡಿಯಾ ಟಿ20ಯಲ್ಲಿ ಮುನ್ನಡೆಯುತ್ತಿರುವ ವೇಗವನ್ನು ನೋಡಿದರೆ ಟೀಮ್ ಇಂಡಿಯಾ ಗೆಲ್ಲಲಿದೆ ಎಂದಿದ್ದಾರೆ ಬ್ರ್ಯಾನ್ ಲಾರಾ

ನ್ಯೂಜಿಲೆಂಡ್ ವಿರುದ್ಧ ಕ್ಲೀನ್ ಸ್ವೀಪ್
ಟೀಮ್ ಇಂಡಿಯಾ ಟಿ20ಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಕಳೆದ ನ್ಯೂಜಿಲೆಂಡ್ ವಿರುದ್ಧ ನ್ಯೂಜಿಲೆಂಡ್ ತವರುನೆಲದಲ್ಲಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾ ಐದು ಟಿ20 ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗುತ್ತು. ಈ ಮೂಲಕ ವಿಶ್ವಕಪ್‌ಗೆ ಮುನ್ನ ಇತರ ತಂಡಗಳಿಗೆ ಎಚ್ಚರಿಕೆಯನ್ನು ರವಾನಿಸಿತ್ತು.

ಆಸ್ಟ್ರೇಲಿಯಾಗೆ ಮತ್ತೊಂದು ಅವಕಾಶ
ಟಿ20 ವಿಶ್ವಕಪ್‌ನ ಚಾಂಪಿಯನ್ ಆಗಲು ಆಸ್ಟ್ರೇಲಿಯಾಗೆ ಈ ಬಾರಿ ಅತ್ಯುತ್ತಮ ಅವಕಾಶವ ಇದೆ ಎಂದು ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ. ಆಸ್ಟ್ರೇಲಿಯಾ ಗೆಲ್ಲಲು ಲಾರಾ ಹೇಳಿದ ಮತ್ತೊಂದು ಪ್ರಮುಖ ಕಾರಣವನ್ನೂ ಕೊಟ್ಟಿದ್ದಾರೆ.

ಆಸಿಸ್ ಆತಿಥ್ಯದಲ್ಲಿ ನಡೆಯಲಿದೆ ವಿಶ್ವಕಪ್
ಟಿ20 ವಿಶ್ವಕಪ್‌ನ ಚಾಂಪಿಯನ್ ಆಗಲು ಆಸ್ಟ್ರೇಲಿಯಾಗೆ ಈ ಬಾರಿ ಅತ್ಯುತ್ತಮ ಅವಕಾಶವ ಇದೆ ಎಂದು ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ. ಆಸ್ಟ್ರೇಲಿಯಾ ಗೆಲ್ಲಲು ಲಾರಾ ಹೇಳಿದ ಮತ್ತೊಂದು ಪ್ರಮುಖ ಕಾರಣವನ್ನೂ ಕೊಟ್ಟಿದ್ದಾರೆ.

ಲಾರಾ ಹೇಳಿದ ಮತ್ತೊಂದು ತಂಡ
ವೆಸ್ಟ್ ಇಂಡೀಸ್ ಮಾಜಿ ನಾಯಕ ಬ್ರ್ಯಾನ್ ಲಾರಾ ಈ ಬಾರಿ ವಿಶ್ವಕಪ್ ಗೆಲ್ಲುವ ಸಾಧ್ಯತೆಯಿರುವ ಮತ್ತೊಂದು ತಂಡ ವೆಸ್ಟ್‌ಇಂಡೀಸ್ ಎಂದಿದ್ದಾರೆ. ವೆಸ್ಟ್ ಇಂಡೀಸ್ ತಂಡ ಸಾಕಷ್ಟು ಅಸ್ಥಿರತೆಯನ್ನು ಹೊಂದಿರುವ ತಂಡ. ಇದುವೇ ಅದರ ಬಲವೂ ಹೌದು ಎಂದಿದ್ದಾರೆ.

ಎಲ್ಲಾ ತಂಡಗಳು ವಿಂಡೀಸ್ ತಂಡಕ್ಕೆ ಭಯಪಡುತ್ತವೆ
ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಇತರ ತಂಡಗಳು ಭಯಪಡುತ್ತವೆ ಎಂದಿದ್ದಾರೆ ಲಾರಾ. ಅದಕ್ಕೆ ವೆಸ್ಟ್‌ಇಂಡೀಸ್ ತಂಡದ ಅಸ್ಥಿರ ಪ್ತದರ್ಶನವೇ ಕಾರಣ ಎಂದಿದ್ದಾರೆ. ಹಾಲಿ ಚಾಂಪಿಯನ್ನರೂ ಆಗಿರುವ ವಿಂಡೀಸ್ ಈ ಬಾರಿ ತನ್ನ ಅಸ್ಥಿರ ಪ್ರದರ್ಶನದ ಮಧ್ಯೆಯೂ ಚಾಂಪಿಯನ್ ಆಗುವ ಸಂಭವ ಇದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications