ಬ್ರಿಯಾನ್ ಲಾರಾ: ನಿಕೋಲಸ್ ಪೂರನ್ ನಿವೃತ್ತಿಗೆ ಕ್ರಿಕೆಟ್ ಮಂಡಳಿಯೇ ಹೊಣೆ
ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ್ರಿಯಾನ್ ಲಾರಾ, ಕ್ರಿಕೆಟ್ ಮಂಡಳಿಯ ವಿರುದ್ಧ ಹರಿಹಾಯ್ದಿದ್ದಾರೆ. ವೆಸ್ಟ್ ಇಂಡೀಸ್ ತಂಡದ ನಿಕೋಲಸ್ ಪೂರನ್ ಅವರ ನಿವೃತ್ತಿಯ ಬಗ್ಗೆ ಲಾರಾ ಮಾತನಾಡಿದ್ದಾರೆ. ಪೂರನ್ ವೃತ್ತಿ ಜೀವನದಲ್ಲಿ ಉನ್ನತ ಫಾರ್ಮ್‌ನಲ್ಲಿದ್ದಾಗಲೇ ವಿದಾಯ ಹೇಳಿದರು. ಆದರೆ ಅವರು ವಿಶ್ವದಾದ್ಯಂತ ಬೇರೆ ಬೇರೆ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಇವರಲ್ಲಿ ಇನ್ನು ಅಂತಾರಾಷ್ಟ್ರೀಯ ಪಂದ್ಯಗಳನ್ನುಆಡುವ ಕ್ಷಮತೆ ಇತ್ತು ಎಂದು ಲಾರಾ ಅಭಿಪ್ರಾಯ ಪಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಮೂರನೇ ಟೆಸ್ಟ್ ಪಂದ್ಯದಲ್ಲಿ 27 ರನ್‌ಗಳಿಗೆ ಆಲೌಟ್ ಆಗಿದ್ದರು. ಈ ಬಗ್ಗೆ ಮಾತನಾಡಿದ್ದ ಲಾರಾ, ಆಟಗಾರರು ಟಿ20 ಕ್ರಿಕೆಟ್‌ನಿಂದ ಆಟಗಾರರ ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೇರೆ ಲೀಗ್‌ಗಳಲ್ಲಿ ಆಡುತ್ತಾರೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ನ ಫಿಲ್ ಟಫ್ನೆಲ್, ಡೇವಿಡ್ ಲಾಯ್ಡ್, ಮೈಕೆಲ್ ವಾಘನ್ ಮತ್ತು ಅಲಸ್ಟೈರ್ ಕುಕ್ ಅವರೊಂದಿಗೆ ಪಾಡ್‌ಕ್ಯಾಸ್ಟ್‌ನಲ್ಲಿ ದಿಗ್ಗಜ ಆಟಗಾರ ಬ್ರಿಯಾನ್ ಲಾರಾ, "ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಆಕ್ರಮಣಕಾರಿ ಆಟಗಾರ. ಇವರು ತಮ್ಮ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಅವರು ಈ ನಿರ್ಧಾರ ಏಕೆ ತೆಗೆದುಕೊಂಡಿದ್ದಾರೆ ಎಂದು ನನಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ಲಾರಾ ಹೇಳಿದ್ದೇನು?
ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಇಂತಹ ಆಟಗಾರರನ್ನು ನೊಡಿರುತ್ತೀರಾ. ಪೂರನ್ ಅವರಂತಹ ಆಕ್ರಮಣಕಾರಿ ಆಟದ ಮನೋಭಾವ ಹೊಂದಿದ್ದು, ಅವರಿಗೆ ಯಾವಗ ಏನು ಮಾಡಬೇಕು ಎಂಬುದರ ಬಗ್ಗೆ ಚೆನ್ನಾಗಿ ಅರಿವಿರುತ್ತದೆ. ವಿಶ್ವದಲ್ಲಿ 5 ರಿಂದ 6 ಟಿ20 ಲೀಗ್‌ಗಳು ನಡೆಯುತ್ತವೆ. ಈ ಲೀಗ್‌ನಲ್ಲಿ ಆಡುವ ಮೂಲಕ ಆಟಗಾರರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ ಎಂದು ಬ್ರಿಯಾನ್ ಲಾರಾ ಹೇಳಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರ ಹಿತದ ದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಬೇರೆ ಲೀಗ್‌ನಲ್ಲಿ ಆಡುವ ಆಟಗಾರರೊಂದಿಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟ್ ಆಡಳಿತವು ತನ್ನ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಬದ್ಧವಾಗಿಡಲು ಅಗತ್ಯವಾದ ಪ್ರಯತ್ನಗಳನ್ನು ಎಂದಿಗೂ ಮಾಡಿಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತದಂತಹ ದೇಶಗಳ ಕ್ರಿಕೆಟ್ ಮಂಡಳಿಗಳು ಈ ದಿಕ್ಕಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತವೆ. ವಿಶ್ವದ ಬೇರೆ ದೇಶಗಳ ಆಟಗಾರರು ತಮ್ಮ ವೃತ್ತಿ ಜೀವದ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಕುಟುಂಬದ ಆರ್ಥಿಕ ಅಗತ್ಯಗಳನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಲಾರಾ ಹೇಳಿದ್ದಾರೆ.
ನಿಕೋಲಸ್ ಪೂರನ್ ನಿವೃತ್ತಿ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಇವರು ಇತ್ತೀಚಿಗೆ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಎಂಐ ನ್ಯೂಯಾರ್ಕ್ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ಆರಂಭವಾಗುವ ಮುನ್ನವೇ ನಿಕೋಲಸ್ ಪೂರನ್, ಆಂಡ್ರೆ ರಸೆಲ್ ನಿವೃತ್ತಿ ನಿರ್ಧಾರ ತಂಡಕ್ಕೆ ಪೆಟ್ಟು ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications