Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶಿಷ್ಟ ದಾಖಲೆ: ಬೂಮ್ರಾಗೆ ಮೊದಲ ಹಾಗೂ 100ನೇ ಬಲಿಯಾದ ಕೊಹ್ಲಿ

Bumrah become 7th Indian pacer to take 100 IPL wickets

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮತ್ತೊಬ್ಬ ಭಾರತೀಯ ವೇಗಿ 100 ವಿಕೆಟ್ ಗಳ ಕ್ಲಬ್ ಸೇರಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಈ ಸಾಧನೆ ಮಾಡಿದರು. ಐಪಿಎಲ್ ನಲ್ಲಿ 100 ವಿಕೆಟ್ ಪಡೆದ ಭಾರತದ 7ನೇ ವೇಗಿ ಎನಿಸಿಕೊಂಡರು.

ಆರ್ ಸಿಬಿ ಬಾಯಕ ವಿರಾಟ್ ಕೊಹ್ಲಿ ವಿಕೆಟ್ ಗಳಿಸುತ್ತಿದ್ದಂತೆ ಬೂಮ್ರಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ 100ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಗೆ ಸೇರ್ಪಡೆಯಾದರು. ಬೂಮ್ರಾ ಅವರು ಐಪಿಎಲ್ ನಲ್ಲಿ ಪಡೆದ ಮೊದಲ ವಿಕೆಟ್ ಹಾಗೂ 100ನೇ ವಿಕೆಟ್ ಎರಡು ವಿರಾಟ್ ಕೊಹ್ಲಿ ಆಗಿರುವುದು ವಿಶೇಷ.

ಬೂಮ್ರಾ ಅವರು 2013ರಿಂದ ನಿರಂತರವಾಗಿ ಆಡುತ್ತಿದ್ದು, ಇಲ್ಲಿ ತನಕ 89 ಪಂದ್ಯಗಳಲ್ಲಿ 102* ವಿಕೆಟ್ ಪಡೆದಿದ್ದು, 4/20 ಶ್ರೇಷ್ಠ ಪ್ರದರ್ಶನವಾಗಿದೆ. 7.53 ಎಕಾನಾಮಿ ಹೊಂದಿದ್ದು, 20.08 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಐಪಿಎಲ್ ನಲ್ಲಿ 100 ವಿಕೆಟ್ ಪಡೆದ ಭಾರತೀಯ ವೇಗದ ಬೌಲರ್ಸ್
136: ಭುವನೇಶ್ವರ್ ಕುಮಾರ್
119: ಉಮೇಶ್ ಯಾದವ್
106: ಆಶೀಶ್ ನೆಹ್ರಾ
105: ವಿನಯ್ ಕುಮಾರ್
103: ಸಂದೀಪ್ ಶರ್ಮ
102*: ಜಸ್ ಪ್ರೀತ್ ಬೂಮ್ರಾ
102: ಜಹೀರ್ ಖಾನ್

100 ಪ್ಲಸ್ ವಿಕೆಟ್ ಪಡೆದ ಟಾಪ್ ಬೌಲರ್ಸ್ ಪಟ್ಟಿ:
170: ಲಸಿತ್ ಮಾಲಿಂಗ
160: ಅಮಿತ್ ಮಿಶ್ರಾ
156: ಪಿಯೂಷ್ ಚಾವ್ಲಾ
153: ಡ್ವಾಯ್ನೆ ಬ್ರಾವೋ
150: ಹರ್ಭಜನ್ ಸಿಂಗ್
136: ಭುವನೇಶ್ವರ್ ಕುಮಾರ್
134: ಆರ್ ಅಶ್ವಿನ್
127: ಸುನಿಲ್ ನರೇನ್
119: ಉಮೇಶ್ ಯಾದವ್
116: ಯುಜುವೇಂದ್ರ ಚಾಹಲ್
112: ರವೀಂದ್ರ ಜಡೇಜಾ
106: ಆಶೀಶ್ ನೆಹ್ರಾ
105: ವಿನಯ್ ಕುಮಾರ್
103: ಸಂದೀಪ್ ಶರ್ಮ
102*: ಜಸ್ ಪ್ರೀತ್ ಬೂಮ್ರಾ
102: ಜಹೀರ್ ಖಾನ್

Story first published: Thursday, October 29, 2020, 9:42 [IST]
Other articles published on Oct 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+