ಭಾರತ ಕಂಡ ಶ್ರೇಷ್ಟ ವೇಗಿಗಳಲ್ಲಿ ಜಸ್ಪ್ರೀತ್ ಬೂಮ್ರಾ ಒಬ್ಬರು: ಜಾಸನ್ ಗಿಲೆಸ್ಪಿ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಟೀಮ್ ಇಂಡಿಯಾ ಆಸಿಸ್ ನೆಲಕ್ಕೆ ಕಾಲಿಟ್ಟಿದೆ. ಯುಎಇಯಿಮದ 20 ಗಂಟೆಗಳ ಪ್ರಯಾಣದ ಬಳಿಕ ಕ್ವಾರಂಟೈನ್ ಪೂರೈಸಿರುವ ಭಾರತೀಯ ಆಟಗಾರರು ಈಗ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಸರಣಿಗೂ ಮುನ್ನ ಭಾರತೀಯ ವೇಗಿಯೊಬ್ಬರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ವೇಗಿ ಜಾಸನ್ ಗಿಲೆಸ್ಪಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್‌ನ ನೇತೃತ್ವವನ್ನು ಪ್ಯಾಟ್ ಕಮ್ಮಿನ್ಸ್ ವಹಿಸಿಕೊಂಡರೆ ಭಾರತ ತಂಡದಲ್ಲಿ ಬೂಮ್ರಾ ವಹಿಸಿಕೊಳ್ಳಲಿದ್ದಾರೆ. ಅಹ್ಮದಾಬಾದ್ ಮೂಲದ ಈ ವೇಗಿ ಭಾರತೀಯ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡ ಕೆಲವೇ ವರ್ಷಗಳಲ್ಲಿ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಗಿಲೆಸ್ಪಿ ಭಾರತ ಕಂಡ ಶ್ರೇಷ್ಠ ವೇಗಿಗಳಲ್ಲಿ ಜಸ್ಪ್ರೀತ್ ಬೂಮ್ರಾ ಅವರು ಒಬ್ಬರಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ವೇಗದ ಬೌಲಿಂಗ್ ಪಡೆ ಇಗ ಅದ್ಭುತವಾಗಿದೆ. ಶ್ರೇಷ್ಠವಾದ ಪ್ರದರ್ಶನವನ್ನು ಅವರು ನೀಡುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಸುದೀರ್ಘ ಕಾಲದ ಬಳಿಕ ಅತ್ಯುತ್ತಮ ವೇಗದ ಪಡೆಯನ್ನು ಹೊಂದಿದೆ. ಆದರೆ ಭಾರತ ಕಂಡ ಹಿಂದಿನ ಎಲ್ಲಾ ವೇಗಿಗಳನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ ಜಾಸನ್ ಗಿಲೆಸ್ಪಿ.
"ಈಗ ಅವರು ಅತ್ಯುತ್ತ ಮಟ್ಟದಲ್ಲಿದ್ದಾರೆ. ತಮ್ಮ ಕೆರಿಯರ್ ಮುಕ್ತಾಯಗೊಳ್ಳುವಾಗ ಬೂಮ್ರಾ ಸೂಪರ್‌ಸ್ಟಾರ್ ಆಗಿರಲಿದ್ದಾರೆ. ಕ್ರಿಕೆಟ್‌ನ ಮುರು ಮಾದರಿಯಲ್ಲೂ ಅವರು ಶ್ರೇಷ್ಠ ಬೌಲರ್ ಆಗಿ ಅವರು ಗುರುತಿಸಿಕೊಳ್ಳಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ ಜಸ್ಪ್ರೀತ್ ಬೂಮ್ರಾ.
ಇನ್ನು ಇದೇ ಸಂದರ್ಭದಲ್ಲಿ ಜಹೀರ್ ಖಾನ್ ಹಾಗೂ ಜಾವಗಲ್ ಶ್ರೀನಾಥ್ ಯುಗದೊಂದಿಗೆ ಈಗಿನ ಬೌಲಿಂಗ್ ವಿಭಾಗವನ್ನು ಹೋಲಿಕೆ ಮಾಡುವುದು ಕಠಿಣ ಎಂದಿದ್ದಾರೆ ಗಿಲೆಸ್ಪಿ. ಆದರೆ ವೇಗದಲ್ಲಿನ ಆಳವನ್ನು ಅಂದಿಗೂ ಇಂದಿಗೂ ಹೋಲಿಕೆ ಮಾಡಿದರೆ ಈಗಿನ ಆಳದ ಮಟ್ಟಕ್ಕೆ ಅವರಿದ್ದರೋ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications