ಮಳೆ ಭೀತಿ ಹಿನ್ನೆಲೆ: ಬುಷ್ ಫೈರ್ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ

ಬುಷ್ ಫೈರ್‌ನಿಂದಾಗಿ ನಿರಾಶ್ರಿತರಿಗೆ ನೆರವಾಗುವ ದೃಷ್ಟಿಯಿಂದ ಕ್ರಿಕೆಟ್ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆ ಮಾಡಿದೆ. ವಿಶ್ವ ಕ್ರಿಕೆಟ್‌ನ ದಿಗ್ಗಜರನ್ನು ಒಗ್ಗೂಡಿಸಿ ಕ್ರಿಕೆಟ್ ಪಂದ್ಯವ ನ್ನು ಆಯೋಜನೆ ಮಾಡಲು ಎಲ್ಲಾ ಸಿದ್ಧತೆಗಳೂ ಆಗಿದೆ. ಅಂತಿಮ ಹಂತದಲ್ಲಿ ಪಂದ್ಯದ ಸ್ಥಳ ಬದಲಾವಣೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ ಈ ಟೂರ್ನಿಗೆ 'ಬುಷ್‌ಫೈರ್ ಕ್ರಿಕೆಟ್ ಬ್ಯಾಷ್' ಎಂದು ಹೆಸರಿಡಲಾಗಿದೆ.
ಮೊದಲಿಗೆ ಈ ಪಂದ್ಯವನ್ನು ಸಿಡ್ನಿಯ ಎಸ್‌ಸಿಜಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ ಮಾಡಲು ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳೂ ಆಗಿತ್ತು. ಆದರೆ ಸಿಡ್ನಿಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿರುವ ಕಾರಣ ಇಲ್ಲಿ ಪಂದ್ಯ ನಡೆಸುವುದು ಅಸಾಧ್ಯವಾಗಿದೆ. ಸ್ಥಳ ಮತ್ತು ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಫೆಬ್ರವರಿ 8ಕ್ಕೆ ಪಂದ್ಯ ಮೊದಲು ನಿಗದಿಯಾಗಿತ್ತು.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಿಂದ ಈ ಪಂದ್ಯವನ್ನು ಮೆಲ್ಬೋರ್ನ್‌ನ ಜಂಕ್ಷನ್ ಓವಲ್‌ಗೆ ಶಿಫ್ಟ್ ಮಾಡಲಾಗಿದೆ. ಮತ್ತು ನಿದಿತ ದಿನಾಂಕಕ್ಕಿಂತ ಒಂದು ದಿನ ನಂತರ ಅಂದರೆ ಫೆಬ್ರವರಿ 9ರಂದು ಪಂದ್ಯ ನಡೆಯಲಿದೆ. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಟ್ವೀಟ್ ಮೂಲಕ ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಈ ಬದಲಾವಣೆಯೊಂದಿಗೆ ಒಂದು ತಂಡದಲ್ಲಿ ಮಹತ್ತರ ಬದಲಾವಣೆಯೂ ಆಗಲಿದ ಎಂಬುದು ತಿಳಿದು ಬಂದಿದೆ. ಒಂದು ತಂಡದ ನಾಯಕನಾಗಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮುನ್ನಡೆಸಬೇಕಾಗಿತ್ತು. ಆದರೆ ದಿನಾಂಕ ಬದಲಾವಣೆಯಾದ ಕಾರಣ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾದ ಕಾರಣ ವಾರ್ನ್ ಟೂರ್ನಿಯಿಂದ ತಪ್ಪಿಸಿಕೊಳ್ಳಲಿದ್ದಾರೆ. ಈ ತಂಡದ ನಾಯಕತ್ವವನ್ನು ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ವಹಿಸಿಕೊಳ್ಳಲಿದ್ದಾರೆ. ಮತ್ತೊಂದು ತಂಡದ ನಾಯಕತ್ವವನ್ನು ರಿಕಿ ಪಾಂಟಿಂಗ್ ಮುನ್ನಡೆಸಲಿದ್ದಾರೆ.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಕೂಡ ಈ ಚ್ಯಾರಿಟಿ ಪಂದ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಆಡುವ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಸಚಿನ್ ತೆಂಡೂಲ್ಕರ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಟೀಮ್ ಇಂಡಿಯಾ ದಮಾಜಿ ಆಟಗಾರ ಯುವರಾಜ್ ಸಿಂಗ್ ಒಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications