Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೆಪ್ಟೆಂಬರ್‌ನಿಂದ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ!

Byjus to replace Oppo on Team India jersey

ನವದೆಹಲಿ, ಜುಲೈ 25: ಮುಂಬರಲಿರುವ ಸೆಪ್ಟೆಂಬರ್‌ನಿಂದ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಭಾರತ ತಂಡದ ಜೆರ್ಸಿಯ ಮೇಲೆ ನೂತನ ಬ್ರ್ಯಾಂಡ್‌ ನೇಮ್ ಕಾಣಿಸಿಕೊಳ್ಳಲಿದೆ. ಚೈನೀಸ್ ಮೊಬೈಲ್ ತಯಾರಕ ಕಂಪನಿ 'ಒಪ್ಪೋ' ಬದಲಾಗಿ, ಬೈಜುಸ್ ವ್ಯವಹಾರ ಸಂಸ್ಥೆಯ ಹೆಸರು ಜೆರ್ಸಿಯನ್ನಾವರಿಸಲಿದೆ.

2017ರ ಮಾರ್ಚ್‌ನಲ್ಲಿ ಒಪ್ಪೋ ಕಂಪನಿ, 1,079 ಕೋಟಿ ರೂ.ಗೆ 5 ವರ್ಷಗಳಿಗೆ ಜೆರ್ಸಿ ಹಕ್ಕುಗಳ ಬಿಡ್‌ ಗೆದ್ದಿತ್ತು. ಆದರೆ ಇನ್ಮುಂದೆ ಒಪ್ಪೋ ಸಂಸ್ಥೆಯು ಬೆಂಗಳೂರು ಮೂಲದ ವಿದ್ಯಾಭ್ಯಾಸ ತಂತ್ರಜ್ಞಾನ ಮತ್ತು ಆಲ್‌ಲೈನ್ ಬೋಧನಾ ಸಂಸ್ಥೆ ಬೈಜುಸ್‌ಗೆ ಜೆರ್ಸಿ ಹಕ್ಕುಗಳನ್ನು ಬಿಟ್ಟುಕೊಡಲಿದೆ.

ಒಪ್ಪೋ ಯಾಕೆ ಜೆರ್ಸಿ ಹಕ್ಕುಗಳನ್ನು ಬೈಜುಸ್‌ಗೆ ಕೊಡುತ್ತಿದೆ ಎಂಬುದಕ್ಕೆ ಇಲ್ಲೊಂದಿಷ್ಟು ಮಾಹಿತಿಯಿದೆ.

ಹಕ್ಕುಗಳ ಮೌಲ್ಯ ಭಾರೀ ದೊಡ್ಡದು

ಹಕ್ಕುಗಳ ಮೌಲ್ಯ ಭಾರೀ ದೊಡ್ಡದು

2017ರಲ್ಲಿ ಪಡೆದುಕೊಂಡ ಜೆರ್ಸಿ ಹಕ್ಕುಗಳ ಮೌಲ್ಯ (1,079 ಕೋಟಿ ರೂ.) ಭಾರೀ ದೊಡ್ಡ ಪ್ರಮಾಣದ್ದು ಮತ್ತು ಅಸ್ಥಿತವಾದದು ಎಂದು ಒಪ್ಪೋಗೆ ಅನಿಸಲಾರಂಬಿಸಿದೆ. ಹೀಗಾಗಿ ಒಪ್ಪೋ, ಜೆರ್ಸಿ ಹಕ್ಕುಗಳನ್ನು ಬೈಜುಸ್‌ಗೆ ಮರು ಹಂಚಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವಿಂಡೀಸ್ ಪ್ರವಾಸ ಸರಣಿಯೇ ಕೊನೆ

ವಿಂಡೀಸ್ ಪ್ರವಾಸ ಸರಣಿಯೇ ಕೊನೆ

ಜೆರ್ಸಿ ಬ್ರ್ಯಾಂಡ್‌ ಬದಲಾವಣೆಗೆ ಸಂಬಂಧಿಸಿ ಈ ಬೆಳವಣಿಗೆ ಕಳೆದೆರಡು ವಾರಗಳಲ್ಲಿ ನಡೆದಿತ್ತು. ಅಂತೂ ಆಗಸ್ಟ್ 3ರಿಂದ ಆರಂಭಗೊಳ್ಳುತ್ತಿರುವ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾ ಜೆರ್ಸಿ ಮೇಲೆ ಒಪ್ಪೋ ಬ್ರ್ಯಾಂಡ್‌ ಹೆಸರು ಕಡೆಯದಾಗಿ ಕಾಣಿಸಿಕೊಳ್ಳಲಿದೆ.

2022ರ ವರೆಗೆ ಬೈಜುಸ್ ಹೆಸರು

2022ರ ವರೆಗೆ ಬೈಜುಸ್ ಹೆಸರು

ಬಿಸಿಸಿಐಯು ಯಾವುದೇ ನಷ್ಟವಿಲ್ಲದೆ ಬೈಜುಸ್‌ನಿಂದ ಅದೇ ಮೌಲ್ಯವನ್ನು ಪಡೆದುಕೊಳ್ಳಲಿದೆ. ಬೈಜುಸ್‌ಗೆ ಜೆರ್ಸಿ ಹಕ್ಕುಗಳು ಮಾರ್ಚ್ 31, 2022ರ ವರೆಗೆ ಲಭಿಸಲಿದೆ. ಹೀಗಾಗಿ ವೆಸ್ಟ್ ಇಂಡೀಸ್ ಸರಣಿಯ ಬಳಿಕ ಅಂದರೆ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾದ ಪ್ರವಾಸದ ವೇಳೆ ಭಾರತದ ಜೆರ್ಸಿಯಲ್ಲಿ ಬೈಜುಸ್ ಬ್ರ್ಯಾಂಡ್‌ ನೇಮ್ ಕಾಣಿಸಿಕೊಳ್ಳಲಿದೆ.

ಬೈಜುಸ್ ವ್ಯವಹಾರಿಕ ಸಂಸ್ಥೆ

ಬೈಜುಸ್ ವ್ಯವಹಾರಿಕ ಸಂಸ್ಥೆ

ಕೇರಳ ಮೂಲಕ ಉದ್ಯಮಿ ಬೈಜು ರವೀಂದ್ರನ್ ಅವರ ಬೈಜುಸ್ ವ್ಯವಹಾರಿಕ ಉದ್ಯಮ ಸಂಸ್ಥೆಯ ಮೌಲ್ಯ ಸುಮಾರು 38,000 ಕೋ.ರೂ.. ಹೀಗಾಗಿ ಸಂಸ್ಥೆಯು ಟೀಮ್ ಇಂಡಿಯಾ ಜೆರ್ಸಿ ಹಕ್ಕುಗಳನ್ನು ಖರೀದಿಸಲು ಆಸಕ್ತಿ ವಹಿಸಿದೆ ಎಂದು ಉದ್ಯಮ ಮೂಲವೊಂದು ಮಾಹಿತಿ ನೀಡಿದೆ.

Story first published: Friday, July 26, 2019, 10:13 [IST]
Other articles published on Jul 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+