IND vs WI: ಭಾರತಕ್ಕೆ 121 ರನ್‌ಗಳ ಗುರಿ ನೀಡಿದ ವೆಸ್ಟ್ ಇಂಡೀಸ್
ನವದೆಹಲಿ: ಆರಂಭಿಕ ಆಟಗಾರ ಜಾನ್ ಕ್ಯಾಂಪ್‌ಬೆಲ್ ಹಾಗೂ ಭರವಸೆಯ ಆಟಗಾರ ಶಾಯ್ ಹೋಪ್ ಬಾರಿಸಿದ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ನಲ್ಲಿ 121 ರನ್‌ಗಳ ಗುರಿಯನ್ನು ಟೀಮ್ ಇಂಡಿಯಾಗೆ ನೀಡಿದೆ. ಫಾಲೋ ಆನ್ ಪಡೆದ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 390 ರನ್‌ಗಳಿಗೆ ಆಲೌಟ್ ಆಯಿತು.
ಸೋಮವಾರ ವೆಸ್ಟ್ ಇಂಡೀಸ್ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 173 ರನ್‌ಗಳಿಂದ ಆಟ ಮುಂದುವರೆಸಿತು. ಈ ವೇಳೆ ಜಾನ್ ಕ್ಯಾಂಪ್ ಬೆಲ್ ಹಾಗೂ ಶಾಯ್ ಹೋಪ್ ಜೋಡಿ ಮೂರನೇ ವಿಕೆಟ್‌ಗೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಹೈರಾಣಾದರು. ತಮ್ಮ ವೃತ್ತಿ ಜೀವನದ 25ನೇ ಟೆಸ್ಟ್ ಆಡುತ್ತಿರುವ ಕ್ಯಾಂಪ್ ಬೆಲ್ ಚೊಚ್ಚಲ ಶತಕ ಸಿಡಿಸಿದರು. ಇವರು 199 ಎಸೆತಗಳಲ್ಲಿ 12 ಬೌಂಡರಿ, 3 ಸಿಕ್ಸರ್ ಸಹಾಯದಿಂದ 115 ರನ್ ಬಾರಿಸಿ ರವೀಂದ್ರ ಜಡೇಜಾ ತೋಡಿದ ಖೆಡ್ಡಾಗೆ ಬಲಿಯಾದರು. ಮೂರನೇ ವಿಕೆಟ್‌ಗೆ ಕ್ಯಾಂಪ್‌ಬೆಲ್ ಹಾಗೂ ಶಾಯ್ ಹೋಪ್ ಜೋಡಿ 295 ರನ್‌ಗಳಿಗೆ 177 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು.

31 ವರ್ಷದ ಭರವಸೆಯ ಆಟಗಾರ ಶಾಯ್ ಹೋಪ್ ಎರಡನೇ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 214 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಹಾಯದಿಂದ 103 ರನ್ ಬಾರಿಸಿ ಅಬ್ಬರಿಸಿದರು. ಈ ಮೂಲಕ ತಮ್ಮ ಟೆಸ್ಟ್ ವೃತ್ತಿ ಜೀವನದ ಮೂರನೇ ಶತಕ ಬಾರಿಸಿ ಮಿಂಚಿದರು.
ವೆಸ್ಟ್ ಇಂಡೀಸ್ ಪರ ನಾಯಕ ರೋಸ್ಟನ್ ಚೇಸ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 40 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಟೆವಿನ್ ಇಮ್ಲಾಚ್ 12, ಜಸ್ಟಿನ್ ಗ್ರೀವ್ಸ್ 79 ರನ್‌ಗಳಿಸಿ ತಂಡಕ್ಕೆ ಆಧಾರವಾದರು.
ಭಾರತದ ಪರ ಕುಲ್‌ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ತಲಾ 3ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು.
ಯಶಸ್ವಿ ಔಟ್
121 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 8 ರನ್ ಸಿಡಿಸಿದರು. ಆರಂಭಿಕ ಆಟಗಾರ ಕೆಎಲ್ ರಾಹುಲ್ ಅಜೇಯ 25 ಹಾಗೂ ಸಾಯಿ ಸುದರ್ಶನ್ ಅಜೇಯ 30 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 63 ರನ್ ಕಲೆ ಹಾಕಿದೆ. ಈ ಪಂದ್ಯ ಗೆಲ್ಲಲು ಇನ್ನು 5 ರನ್‌ಗಳ ಅವಶ್ಯಕತೆ ಇದ್ದು, ಕೆಎಲ್ ರಾಹುಲ್ ಮೇಲೆ ಭರವಸೆ ಹೆಚ್ಚಿದೆ. ಎರಡನೇ ಟೆಸ್ಟ್ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಭಾರತ ತಂಡದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications