ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಟೀಮ್ ಇಂಡಿಯಾ ನೀಡಿದ್ದ ಫಾಲೋ ಆನ್ ಪಡೆದು ಎರಡನೇ ಇನಿಂಗ್ಸ್ ಆಡಿದ ವಿಂಡೀಸ್ ತಂಡ ಮೊದಲ ಎರಡು ವಿಕೆಟ್‌ಗಳನ್ನು ಪಟಪಟನೇ ಕಳೆದುಕೊಂಡಿತು. ಆದರೆ ಆರಂಭಿಕ ಜಾನ್ ಕ್ಯಾಂಪ್‌ಬೆಲ್ ಹಾಗೂ ಭರವಸೆಯ ಆಟಗಾರ ಶಾಯ್ ಹೋಪ್ ಜೋಡಿ ಟೀಮ್ ಇಂಡಿಯಾ ಬೌಲರ್‌ಗಳನ್ನು ಕಾಡಿತು. ಅಲ್ಲದೆ ಮೂರನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿದೆ.
ಭಾನುವಾರ ವೆಸ್ಟ್ ಇಂಡೀಸ್ ತಂಡ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 140 ರನ್‌ಗಳಿಂದ ಆಟ ಮುಂದುವರೆಸಿ, 248 ರನ್‌ಗಳಿಗೆ ಆಲೌಟ್ ಆಯಿತು. ಮೂರನೇ ದಿನದಾಟದ ಮುಕ್ತಾಯಕ್ಕೆ ವಿಂಡೀಸ್ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನಿಡಿದ್ದಾರೆ. ಈ ಮೂಲಕ 97 ರನ್‌ಗಳ ಇನಿಂಗ್ಸ್ ಹಿನ್ನಡೆಯನ್ನು ಅನುಭವಿಸುತ್ತಿದೆ. ನಾಲ್ಕನೇ ದಿನದಾಟದಲ್ಲಿ ವಿಂಡೀಸ್ ಭರ್ಜರಿ ಪ್ರದರ್ಶನವನ್ನು ನೀಡಿ ರನ್‌ಗಳನ್ನು ಕಲೆ ಹಾಕುವ ಕನಸು ಕಾಣುತ್ತಿದೆ.

ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ಆರಂಭಿಕ ಬ್ಯಾಟರ್ ಟಗೆನರೀನ್ ಚಂದ್ರಪಾಲ್ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಚಂದ್ರಪಾಲ್ ಎದುರಿಸಿದ 30ನೇ ಎಸೆತದಲ್ಲಿ ಬಿಗ್ ಹಿಟ್ ಬಾರಿಸಲು ಹೋಗಿ ಶುಭಮನ್ ಗಿಲ್ ಹಿಡಿದ ಡೈವಿಂಗ್ ಕ್ಯಾಚ್‌ಗೆ ಬಲಿಯಾದರು. ಅಲಿಕ್ ಅಥನಾಜೆ ಸಹ ವಾಷಿಂಗ್ಟನ್ ಸುಂದರ್ ಅವರ ತೋಡಿದ ಖೆಡ್ಡಾಗೆ ಬಲಿಯಾದರು. 2 ವಿಕೆಟ್‌ಗೆ 35 ರನ್ ಕಲೆ ಹಾಕಿ ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ಯಾಂಪ್‌ಬೆಲ್ ಹಾಗೂ ಶಾಯ್ ಹೋಪ್ ಜೋಡಿ ಆಧಾರವಾಯಿತು. ಈ ಜೋಡಿ 208 ಎಸೆತಗಳಲ್ಲಿ ಅಜೇಯ 138 ರನ್ ಸೇರಿಸಿ ತಂಡಕ್ಕೆ ಆಧಾರವಾದರು.
ಜಾನ್ ಕ್ಯಾಂಪ್‌ಬೆಲ್ 145 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 87 ರನ್ ಸಿಡಿಸಿದರೆ, ಶಾಯ್ ಹೋಪ್ ಅಜೇಯ 66 ರನ್ ಬಾರಿಸಿದ್ದಾರೆ.

ದೆಹಲಿ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ, ಬ್ಯಾಟಿಂಗ್ ಮಾಡುವಾಗ ಒಂದು ಘಟನೆ ನಡೆಯಿತು. ವೆಸ್ಟ್ ಇಂಡೀಸ್ ಪರ 29ನೇ ಓವರ್‌ನಲ್ಲಿ ಜೇಡನ್ ಸೀಲ್ಸ್ ಬೌಲ್ ಮಾಡಿದರು. ಯಶಸ್ವಿ ಜೈಸ್ವಾಲ್ ಕಡೆಗೆ ಚೆಂಡನ್ನು ಎಸೆದರು. ಆ ಚೆಂಡನ್ನು ಅವರೇ ಫೀಲ್ಡ್ ಮಾಡಿದರು. ಬಳಿಕ ಚೆಂಡನ್ನು ಯಶಸ್ವಿ ಇದ್ದ ಕ್ರೀಸ್ ಬಳಿ ಜೇಡನ್ ಸೀಲ್ಸ್ ಥ್ರೋ ಮಾಡಿದರು. ಆಗ ಆರಂಭಿಕ ಆಟಗಾರ ಕ್ರೀಸ್‌ನಲ್ಲೇ ಇದ್ದರು. ಇದೇ ವೇಳೆ ಜೈಸ್ವಾಲ್ ಔಟ್ ಆಗಿದ್ದರೆ ಎಂದು ಜೇಡನ್ ಸೀಲ್ಸ್ ವಾದಿಸಿದರು. ಆದರೆ ಮ್ಯಾಚ್ ರೆಫ್ರಿ ಹಾಗೂ ಅಂಪೈರ್ ಪ್ರಕಾರ ಇಲ್ಲಿ ರನ್‌ಔಟ್‌ಗೆ ಯಾವುದೇ ಚಾನ್ಸ್ ಇರಲೇ ಇಲ್ಲ. ಜೇಡನ್ ಸೀಲ್ಸ್ ಉದ್ದೇಶ ಪೂರಕವಾಗಿ ಈ ರೀತಿ ಮಾಡಿದ್ದು, ಐಸಿಸಿ ತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ 25% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ.