For Quick Alerts
ALLOW NOTIFICATIONS  
For Daily Alerts
 

MS Dhoni: 2010ರಲ್ಲಿ ಮಾಡಿದ ಚಮತ್ಕಾರ ಮತ್ತೆ ಮಾಡ್ತಾರಾ ಧೋನಿ

ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡ. ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಸಿಎಸ್‌ಕೆ ಇತಿಹಾಸ ಬರೆದಿದೆ. ಆದರೆ ಈ ಬಾರಿಯ ತಂಡದ ಸಾಧನೆ ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಚೆನ್ನೈನ ಚೆಪಾಕ್‌ ಅಂಗಳವನ್ನು ಸಿಎಸ್‌ಕೆ ತಂಡದ ಭದ್ರ ಕೋಟೆ ಎಂದೇ ಭಾವಿಸಲಾಗಿತ್ತು. ಆದರೆ ಈ ಕೋಟಿ ಈಗ ಛಿದ್ರವಾಗಿದೆ. ಈ ಕೋಟೆಯಲ್ಲಿ ಈ ಹಿಂದೆ ಮಾಡಲಾಗದ ಸಾಧನೆಯನ್ನು ಈಗ ತಂಡಗಳು ಮಾಡುತ್ತಿವೆ. ಆಡಿದ 7 ಪಂದ್ಯಗಳಲ್ಲಿ 2 ಜಯ ಸಾಧಿಸಿರುವ ಚೆನ್ನೈ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಅಸಲಿಗೆ ಚೆನ್ನೈ ಟೂರ್ನಿಯ ಆರಂಭದಲ್ಲಿಈ ರೀತಿಯಾದ ಪ್ರದರ್ಶನ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಪ್ರದರ್ಶನವನ್ನು ಸಿಎಸ್‌ಕೆ ಮಾಡಿದೆ. 2010ರಲ್ಲೂ ಸಿಎಸ್‌ಕೆ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿ ಮೇಲೆ ಬಂದಿದ್ದು ಎಲ್ಲರಿಗೂ ತಿಳಿದಿದೆ. 2010ರ ಐಪಿಎಲ್‌ ಆರಂಭದಲ್ಲಿ ಆಡಿದ 7 ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದ ತಂಡ ಕೊನೆಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರ ಕಮಾಲ್‌ ಕೆಲಸ ಮಾಡಿತ್ತು.

Can MS Dhoni Recreate CSK s 2010 Miracle and Lead the Team to IPL Glory Again

ಈ ವರ್ಷದಲ್ಲಿ ಚೆನ್ನೈ ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ, ಅಇತ ಉತ್ಸಾಹ ತೋರಿಸಿತ್ತು. ಆದರೆ ಚೆನ್ನೈನಲ್ಲಿ ಸತತ ಪಂದ್ಯಗಳನ್ನು ಸೋಲುವು ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿತು. ರುತುರಾಜ್ ಗಾಯಕ್ವಾಡ್‌ ಗಾಯದಿಂದ ಟೂರ್ನಿಯಿಂದ ಹೊರ ನಡೆದ ಬಳಿಕ ಧೋನಿ ಸಾರಥ್ಯ ವಹಿಸಿದರು. ಇವರ ಮುಂದಾಳತ್ವದಲ್ಲೂ ಸಿಎಸ್‌ಕೆ ತವರಿನಲ್ಲಿ ಸೋಲು ಕಂಡಿತು. ಈ ಮೂಲಕ ತವರಿನಲ್ಲಿ ಹ್ಯಾಟ್ರಿಕ್ ಸೋಲನ್ನು ಕಂಡಿತು.

2010ರಲ್ಲೂ ಇದೇ ಸ್ಥಿತಿ

15 ವರ್ಷಗಳ ಹಿಂದೆಯೂ ಚೆನ್ನೈ ಈ ರೀತಿಯ ಪ್ರದರ್ಶನ ನೀಡಿತ್ತು. 2010ರಲ್ಲಿ ಚೆನ್ನೈ ಮೊದಲ ಏಳು ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯ ಕಂಡಿತ್ತು. ಉಳಿದೆಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಆ ಬಳಿಕ ತಂಡ ನೀಡಿದ್ದ ಪ್ರದರ್ಶನ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಲೀಗ್‌ ಹಂತದ ಪಂದ್ಯಗಳು ಮುಗಿದಾಗ ಸಿಎಸ್‌ಕೆ ಆಡಿದ 7 ಪಂದ್ಯಗಳಲ್ಲಿ 7 ಜಯ ಸಾಧಿಸಿ 14 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿತ್ತು.

Can MS Dhoni Recreate CSK s 2010 Miracle and Lead the Team to IPL Glory Again

2010ರಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಚೆನ್ನೈ ಮುಂಬೈ ತಂಡವನ್ನು ಎದುರಿಸಿತು. ಈ ವೇಳೆ ಮುಂಬೈ ತಂಡವನ್ನು 22 ರನ್‌ಗಳಿಂದ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಆ ಸಮಯದಲ್ಲೂ ತಂಡದ ನಾಯಕತ್ವ ಎಂಎಸ್ ಧೋನಿ ಕೈಯಲ್ಲಿತ್ತು.

ಹೇಗಿದೆ ಮುಂದಿನ ಹಾದಿ

ಈ ಬಾರಿಯೂ ತಂಡದ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿ ಆಗಿದೆ. ಆದರೂ ಸಹ ಚೆನ್ನೈ ಪ್ಲೇ ಆಫ್‌ ರೇಸ್‌ನಿಂದ ಇನ್ನು ಹೊರ ಬಿದ್ದಿಲ್ಲ. ಚೆನ್ನೈ ತಂಡ ಉಳಿದ ಏಳು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಪ್ಲೇ ಆಫ್‌ ಆಸೆ ನನಸಾಗುತ್ತದೆ. ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಸಿಎಸ್‌ಕೆ 18 ಅಂಕ ಗಳಿಸಬಹುದು. ಆದರೆ ಮುಂದಿನ ಪಂದ್ಯಗಳಲ್ಲಿ ಸಿಎಸ್‌ಕೆ ಒಂದೇ ಒಂದು ಪಂದ್ಯ ಸೋತರೂ ಪ್ಲೇ ಆಫ್‌ ಆಸೆ ಕ್ಷೀಣಿಸುತ್ತದೆ. ಅಸಾಧ್ಯವಾದದನ್ನು ಸಾಧಿಸುವ ಕ್ಷಮತೆ ಧೋನಿ ಅವರದ್ದಾಗಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ತಂಡ ಸ್ಥಿರ ಪ್ರದರ್ಶನ ನೀಡಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ. ಮುಂದಿನ ಪಂದ್ಯಗಳಲ್ಲಿ ಸೋಲನ್ನು ಮೆಟ್ಟಿನಿಂತಾಗ ಮಾತ್ರ ಈ ಸಾಧನೆ ಸಾಧ್ಯ.

Story first published: Wednesday, April 16, 2025, 11:08 [IST]
Other articles published on Apr 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+