For Quick Alerts
ALLOW NOTIFICATIONS  
For Daily Alerts
 

T20 World Cup 2024: ರವಿ ಬಿಷ್ಣೋಯಿ ಪ್ರದರ್ಶನದಿಂದ ಕುಲ್ದೀಪ್ ಯಾದವ್‌ಗೆ ಶುರುವಾಗಿದೆ ಟುಕುಟುಕು

ಟೀಮ್ ಇಂಡಿಯಾದಲ್ಲಿ ಸ್ಥಾಣ ಪಡೆಯಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಆಶಯ. ಅದರಂತೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ತಂಡದಲ್ಲಿ ತಮ್ಮ ಸ್ಥಾನವನ್ನು ಖಾಯಂ ಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸ್ಟಾರ್ ಪ್ಲೇಯರ್‌ ಒಬ್ಬ ಟಿ20 ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಪಡೆಯುವ ಕನಸು ಕಾಣುತ್ತಿದ್ದಾನೆ.

ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಲೆಗ್ ಸ್ಪಿನ್ ಬೌಲರ್ ರವಿ ಬಿಷ್ಣೋಯಿ. ಇವರ ಈ ಸ್ಥಿರ ಪ್ರದರ್ಶನದ ಆಧಾರದಲ್ಲೇ ಇವರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.

can ravi Bishnoi take plcae of Kuldeep Yadav inT20 World Cup

ರವಿ ಬಿಷ್ಣೋಯಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ಭಾರತೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಟೀಮ್ ಮ್ಯಾನೇಜ್ಮೆಂಟ್‌ ಮುಂದಿನ ವರ್ಷ ಟಿ 20 ವಿಶ್ವಕಪ್ ದೃಷ್ಟಿಯಿಂದ ಅವರಿಗೆ ಅವಕಾಶವನ್ನು ನೀಡುತ್ತಿದೆ. ವಿಶ್ವಕಪ್‌ಗೂ ಮುನ್ನ ಭಾರತ ಇನ್ನು ಆರು ಟಿ20 ಪಂದ್ಯಗಳನ್ನು ಆಡಬೇಕಿದೆ.

ಮುಂದಿನ ಸರಣಿಗಳಲ್ಲಿ ರವಿ ಬಿಷ್ಣೋಯಿ ಅವರಿಗೆ ಆದ್ಯತೆ ನೀಡಲಾಗುತ್ತಿದೆ. ಇವರಿಗೆ ಯುಜುವೇಂದ್ರ ಚಹಾಲ್‌ಗಿಂತ ಆದ್ಯತೆ ಸಿಗುವುದು ಖಚಿತ ಎಂದು ತಿಳಿದುಬಂದಿದೆ. ಚಾಹಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದಿಲ್ಲ.

can ravi Bishnoi take plcae of Kuldeep Yadav inT20 World Cup

ರವಿ ಬಿಷ್ಣೋಯಿ ಆಸ್ಟ್ರೇಲಿಯಾ ವಿರುದ್ಧದ ನೀಡಿದ ಪ್ರದರ್ಶನವನ್ನು ಗಮನಸಿದರೆ, ಮುಂಬರುವ ಟಿ 20 ವಿಶ್ವಕಪ್‌ನಲ್ಲಿ ಅವರು ಸ್ಪಿನ್‌ ಬೌಲರ್ ಆಗಿ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಆಸೀಸ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಬಿಷ್ಣೋಯಿ ಆಡಿದ 5 ಪಂದ್ಯಗಳಲ್ಲಿ 9 ವಿಕೆಟ್ ಕಬಳಿಸಿದ್ದಾರೆ. ಇವರ ಈ ಪ್ರದರ್ಶನವನ್ನು ನೋಡಿದರೆ, ಇವರು ಕುಲದೀಪ್ ಯಾದವ್ ಅವರ ಸ್ಥಾನವನ್ನು ಕಬಳಿಸ ಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ.

ಕುಲದೀಪ್ ಅವರು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಪಡೆದರೆ ಪರಿಣಾಮಕಾರಿ ಆಟ ಪ್ರದರ್ಶಿಸಬೇಕಿದೆ. ಇಲ್ಲದಿದ್ದರೆ ಆಯ್ಕೆದಾರರು ಬಿಷ್ಣೋಯಿ ಅವರನ್ನು ತಂಡದಲ್ಲಿ ಸ್ಥಾನ ನೀಡಲು ಹಿಂಜರಿಯುವುದಿಲ್ಲ. ಕುಲದೀಪ್ ಈ ವರ್ಷ ಏಳು ಟಿ 20 ಪಂದ್ಯಗಳನ್ನು ಆಡಿದ್ದರೆ, ಚಹಾಲ್ ಒಂಬತ್ತು ಟಿ 20 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಇಬ್ಬರೂ ಕ್ರಮವಾಗಿ 8 ಮತ್ತು 9 ವಿಕೆಟ್ ಪಡೆದಿದ್ದಾರೆ.

can ravi Bishnoi take plcae of Kuldeep Yadav inT20 World Cup

ಬಿಷ್ಣೋಯಿ ಈ ವರ್ಷ 11 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಅವರು ಪೂರ್ಣ ಫಾರ್ಮ್‌ನಲ್ಲಿದ್ದಾರೆ ಎಂದು ಅವರ ಅಂಕಿ ಅಂಶಗಳು ಹೇಳುತ್ತವೆ. ಬಿಷ್ಣೋಯಿ ಅವರು ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ವಿಶಾಖಪಟ್ಟಣಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 54 ರನ್ ನೀಡಿದ್ದಲ್ಲದೆ, ಉಳಿದ ಪಂದ್ಯಗಳಲ್ಲಿ ಬಿಷ್ಣೋಯಿ ಅದ್ಭುತ ಬೌಲಿಂಗ್ ಮಾಡಿದರು. ಬ್ಯಾಟ್ಸ್‌ಮನ್ ಸ್ನೇಹಿ ಪಿಚ್‌ಗಳಲ್ಲಿಯೂ ಬಿಷ್ಣೋಯಿ ಅವರಿಗೆ ಆಡುವುದು ಸುಲಭವಲ್ಲ ಎಂದು ಆಸ್ಟ್ರೇಲಿಯಾದ ನಾಯಕ ಮ್ಯಾಥ್ಯೂ ವೇಡ್ ಒಪ್ಪಿಕೊಂಡಿದ್ದಾರೆ.

ರವಿ ಬಿಷ್ಣೋಯಿ ತವರು ನೆಲದಲ್ಲಿ ನಡೆದ ದ್ವಿಪಕ್ಷೀಯ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ರವಿಚಂದ್ರನ್ ಅಶ್ವಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 2016ರಲ್ಲಿ ಶ್ರೀಲಂಕಾ ವಿರುದ್ಧ ಅಶ್ವಿನ್ 9 ವಿಕೆಟ್ ಪಡೆದಿದ್ದರು. ಐದು ಪಂದ್ಯಗಳಲ್ಲಿ ನಾಲ್ಕು ಇನ್ನಿಂಗ್ಸ್‌ಗಳಲ್ಲಿ, ರವಿ ಬಿಷ್ಣೋಯ್ ತನ್ನ ಮೊದಲ ಓವರ್‌ನಲ್ಲಿ ಒಬ್ಬ ಆಸ್ಟ್ರೇಲಿಯಾದ ಆರಂಭಿಕ ಆಟಗಾರನನ್ನು ಬೌಲ್ಡ್ ಮಾಡಿದರು. ರವಿ ಬಿಷ್ಣೋಯ್ ಅವರು 21 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇಲ್ಲಿಯವರೆಗೆ ಕೇವಲ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.

Story first published: Tuesday, December 5, 2023, 13:54 [IST]
Other articles published on Dec 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+