Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ತೆಂಡೂಲ್ಕರ್ ವಿಶ್ವದಾಖಲೆಯನ್ನು ಭಾರತದ ಈ ಆಟಗಾರ ಹಿಂದಿಕ್ಕುತ್ತಾನೆ: ಸುರೇಶ್ ರೈನಾ

ಸೆಪ್ಟೆಂಬರ್ 11ರಂದು ಪಾಕಿಸ್ತಾನ ತಂಡದ ವಿರುದ್ಧ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 47ನೇ ಏಕದಿನ ಶತಕ ಬಾರಿಸಿದರು ಮತ್ತು ಭಾರತ 228 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿರಾಟ್ ಕೊಹ್ಲಿಯ ಅಜೇಯ 122 ರನ್‌ಗಳ ಶತಕದ ಜೊತೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಕೆಎಲ್ ರಾಹುಲ್ ಕೂಡ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಭಾರತ ತಂಡ ಅಸಾಧಾರಣ 2 ವಿಕೆಟ್‌ಗೆ 356 ರನ್ ಗಳಿಸಲು ಕಾರಣವಾಯಿತು. ಆ ಬಳಿಕ ಕುಲದೀಪ್ ಯಾದವ್ ಸ್ಪಿನ್ ಬಲೆಗೆ ಸಿಲುಕಿದ ಪಾಕಿಸ್ತಾನ ಬ್ಯಾಟರ್‌ಗಳು ಭಾರತದೆದುರು ಶರಣಾದರು,

ಭಾರತದ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್‌ನಲ್ಲಿ ಶತಕದ ದಾಖಲೆಯನ್ನು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮುರಿಯಬಹುದು ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

sachin-tendulkars-world-record

47ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 13000 ರನ್‌ಗಳ ಹೆಗ್ಗುರುತನ್ನು ಸಾಧಿಸಿದ ಅತ್ಯಂತ ವೇಗದ ಆಟಗಾರ ಎನಿಸಿದರು. ವಿರಾಟ್ ಕೊಹ್ಲಿ 267ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರ 321 ಇನ್ನಿಂಗ್ಸ್ ದಾಖಲೆಯನ್ನು ಹಿಂದಿಕ್ಕಿದರು.

ವಿರಾಟ್ ಕೊಹ್ಲಿ ಅವರ 47ನೇ ಏಕದಿನ ಶತಕ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 77ನೇ ಬಾರಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 29 ಶತಕಗಳು ಮತ್ತು ಏಕೈಕ ಟಿ20 ಶತಕ ಸಿಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ

ವಿಶ್ವದಾಖಲೆಯನ್ನು ತಲುಪಲು ವಿರಾಟ್ ಕೊಹ್ಲಿಗೆ ಇನ್ನೂ ಕೆಲವು ವರ್ಷಗಳನ್ನು ಬೇಕಿದ್ದರೂ, ಸದ್ಯ ಏಕದಿನ ಕ್ರಿಕೆಟ್‌ನ 49ನೇ ಶತಕ ಮೀರಿಸುವ ಸನಿಹದಲ್ಲಿದ್ದಾರೆ.

sachin-tendulkars-world-record

ಏಕದಿನ ವಿಶ್ವಕಪ್‌ಗೆ ಮುನ್ನ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತ್ಯದ ವೇಳೆಗೆ ವಿರಾಟ್ ಕೊಹ್ಲಿ ಏಕದಿನ ಶತಕಗಳ ದಾಖಲೆಯನ್ನು ಮುರಿಯುತ್ತಾರೆ ಮತ್ತು ಶತಕಗಳ ಅರ್ಧಶತಕ ಗಳಿಸುತ್ತಾರೆ ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಭವಿಷ್ಯ ನುಡಿದಿದ್ದಾರೆ.

"ವಿರಾಟ್ ಕೊಹ್ಲಿ ಉತ್ತಮ ಸ್ಪರ್ಶದಲ್ಲಿ ಕಾಣುತ್ತಿದ್ದಾರೆ ಮತ್ತು ಅಸಾಧಾರಣವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಚಿನ್ ತೆಂಡೂಲ್ಕರ್ ಪಾಜಿ 49 ಶತಕ ಗಳಿಸಿದ್ದಾರೆ ಮತ್ತು ವಿರಾಟ್ ಕೊಹ್ಲಿ 47 ಶತಕ ಬಾರಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿಯಲ್ಲಿ ತಮ್ಮ ಐವತ್ತನೇ ಶತಕವನ್ನು ಗಳಿಸಬಹುದು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಸಾಕಷ್ಟು ಓವರ್‌ಗಳು ಇರುತ್ತವೆ ಮತ್ತು ಆಸ್ಟ್ರೇಲಿಯಾ ವಿರುದ್ಧ ಆಡಲು ಕೊಹ್ಲಿ ಇಷ್ಟಪಡುತ್ತಾರೆ ಎಂದು ನಮಗೆ ತಿಳಿದಿದೆ," ಎಂದು ಸುರೇಸ್ ರೈನಾ JioCinema ದಲ್ಲಿ ತಿಳಿಸಿದರು.

"ಹೀಗಾಗಿ, ನಾನು ವಿರಾಟ್ ಕೊಹ್ಲಿ ಶತಕಗಳ ಅರ್ಧಶತಕ ಸಾಧಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿಯಬಹುದು. ವಿರಾಟ್ ನಿಜವಾಗಿಯೂ ತಮ್ಮ ಬ್ಯಾಟಿಂಗ್ ಅನ್ನು ಆನಂದಿಸುತ್ತಿದ್ದಾರೆ," ಎಂದು ಮಾಜಿ ಭಾರತೀಯ ಬ್ಯಾಟರ್ ಸುರೇಶ್ ರೈನಾ ಅಭಿಪ್ರಾಯಪಟ್ಟರು.

"ಕೊಹ್ಲಿ ಯಾವಾಗಲೂ ತಮ್ಮ ಕ್ರಿಕೆಟ್ ಮತ್ತು ಫಿಟ್ನೆಸ್‌ಗೆ ಗಮನ ಕೊಡುತ್ತಿರುವ ರೀತಿ ಅದ್ಭುತವಾಗಿದೆ. ವಿರಾಟ್ ಆಸ್ಟ್ರೇಲಿಯಾ ತಂಡವನ್ನು 3-0 ಅಂತರದಿಂದ ಸೋಲಿಸುವ ಬಗ್ಗೆ ಮಾತ್ರ ಯೋಚಿಸುತ್ತಿದ್ದಾರೆ ಮತ್ತು ಸಚಿನ್ ಅವರ ದಾಖಲೆಯ ಬಗ್ಗೆ ಅಲ್ಲ ಎಂದು ನನಗೆ ಖಾತ್ರಿಯಿದೆ," ಎಂದು ಸುರೇಶ್ ರೈನಾ ಹೇಳಿದರು.

Story first published: Tuesday, September 12, 2023, 21:07 [IST]
Other articles published on Sep 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+