ಬದಲಾವಣೆಯ ಗಾಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಬೀಸಿದ ಬಳಿಕವೂ ತಂಡದ ಪ್ರದರ್ಶನದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ನೀಡಿದ ಬಳಿಕ ಪಾಕಿಸ್ತಾನ ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಯಿತು. ಮೂರು ಫಾರ್ಮೆಟ್‌ಗೆ ಮೂರು ವಿಭಿನ್ನ ನಾಯಕರು ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುರ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶಾನ್ ಮಸೂದ್ ಅವರನ್ನು ಟೆಸ್ಟ್‌ನಲ್ಲಿ ಮತ್ತು ಶಾಹೀನ್ ಅಫ್ರಿದಿಯನ್ನು ಟಿ 20 ನಲ್ಲಿ ನಾಯಕರನ್ನಾಗಿ ಮಾಡಿತು. ಉಭಯ ನಾಯಕರ ನಾಯಕತ್ವದಲ್ಲಿ ಪಾಕಿಸ್ತಾನ ಕೂಡ 1-1 ಸರಣಿಯಲ್ಲಿ ಆಡಿದೆ. ಉಭಯ ನಾಯಕರಿಗೆ ಮೊದಲ ಸರಣಿಯೇ ಕಬ್ಭಿಣದ ಕಡಲೆಯಂತೆ ಪರಿಣಮಿಸಿದೆ. ಏಕೆಂದರೆ ಹೊರ ನಾಯಕರಿಗೆ ಮೊದಲೇ ಪ್ರವಾಸದ ಪರೀಕ್ಷೆ ಆಗಿತ್ತು. ಶಾನ್ ಮಸೂದ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರೆ, ವೇಗಿ ಶಾಹೀನ್ ಅಫ್ರಿದಿ ಟಿ20ಯಲ್ಲಿ ತಂಡವನ್ನು ಮುನ್ನಡೆಸಿದರು. ಉಭಯ ನಾಯಕರಿಗೆ ಕಹಿ ಅನುಭವವೇ ಕಾದಿತ್ತು.

ಪಾಕಿಸ್ತಾನವು ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತು. ಅಲ್ಲಿ ಅವರು 0-3 ಸೋಲನ್ನು ಅನುಭವಿಸಿತು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 360 ರನ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತು. ಇದಾದ ಬಳಿಕ ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ 79 ರನ್‌ಗಳಿಂದ ಪಾಕಿಸ್ತಾನವನ್ನು ವಿರುದ್ಧ ಜಯ ಸಾಧಿಸಿತು. ನಂತರ ಸಿಡ್ನಿಯಲ್ಲಿ ನಡೆದ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು.
ಈ ಸರಣಿ ಮುಗಿದ ಬಳಿಕ ಪಾಕಿಸ್ತಾನ, ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ. ಈ ವೇಳೆ ನ್ಯೂಜಿಲೆಂಡ್ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ನ್ಯೂಜಿಲೆಂಡ್ ಮೊದಲ ಟಿ20ಯಲ್ಲಿ ಪಾಕಿಸ್ತಾನವನ್ನು 46 ರನ್‌ಗಳಿಂದ, ಎರಡನೇಯಲ್ಲಿ 21 ರನ್‌ಗಳಿಂದ ಮತ್ತು ಮೂರನೇ ಪಂದ್ಯದಲ್ಲಿ 45 ರನ್‌ಗಳಿಂದ ಸೋಲಿಸಿತು.

ಡ್ಯುನೆಡಿನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಈ ನಿರ್ಧಾರವನ್ನು ತಪ್ಪೆಂದು ನ್ಯೂಜಿಲೆಂಡ್ ತಂಡದ ಓಪನರ್ ತಪ್ಪೆಂದು ಸಾಬೀತು ಮಾಡಿದರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 224 ರನ್ ಕಲೆ ಹಾಕಿತು. ಫಿನ್ ಅಲೆನ್ 62 ಎಸೆತಗಳಲ್ಲಿ 5 ಬೌಂಡರಿ ಮತ್ತು 16 ಸಿಕ್ಸರ್‌ಗಳ ಸಹಾಯದಿಂದ 137 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 179 ರನ್ ಗಳಿಸಲಷ್ಟೇ ಶಕ್ತವಾಯಿತು.
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದೆ. ಭಾರತದಲ್ಲಿ ನಡೆದ ಟೂರ್ನಿಯಲ್ಲಿ ತಂಡ ಸೆಮಿಫೈನಲ್‌ಗೂ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯಾವಳಿಯ 9 ಲೀಗ್ ಪಂದ್ಯಗಳಲ್ಲಿ, ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನವು ಕೇವಲ 4 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಯಿತು. ನಂತರ ಅವರು ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದು ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಬೇಕಾಯಿತು.