For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾಕ್ಕೆ ಶುರುವಾಯಿತು ಭಯ: ವಿಂಡೀಸ್‌ ವಿರುದ್ಧ ಗಿಲ್‌ ಶತಕ

ಇಂಗ್ಲೆಂಡ್‌ ವಿರುದ್ಧದ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಶುಭಮನ್‌ ಗಿಲ್‌ ತವರಿನಲ್ಲೂ ಮುಂದುವರೆಸಿದ್ದಾರೆ. ಅಹಮದಾಬಾದ್‌ನಲ್ಲಿ ಅರ್ಧಶತಕ ಬಾರಿಸಿ, ಶತಕ ವಂಚಿತರಾಗಿದ್ದ ಗಿಲ್‌, ನವದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಶತಕ ಬಾರಿಸಿ ಮಿಂಚಿದರು. ಈ ಮೂಲಕ ನಾಯಕನಾಗಿ ತವರಿನಲ್ಲಿ ಮೊದಲ ಶತಕವನ್ನು ಬಾರಿಸಿದರು. ಅಲ್ಲದೆ ಪ್ರಸಕ್ತ ಸರಣಿಯಲ್ಲಿ ಮೊದಲು ಶತಕ ಬಾರಿಸಿ ಮಿಂಚಿದರು. ನಾಯಕನಾಗಿ ಗಿಲ್‌ ಐದನೇ ಶತಕ ಬಾರಿಸಿ ಅಬ್ಬರಿಸಿದರು.

ನವದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ 20 ರನ್‌ಗಳಿಂದ ಶನಿವಾರ ಆಟ ಮುಂದುವರೆಸಿದ ಶುಭಮನ್‌ ಗಿಲ್‌ ತಮ್ಮ ನೈಜ್ಯ ಆಟವನ್ನು ಆಡಿದರು. ಮೈದಾನದಲ್ಲಿ ತಾವು ಹಾಕಿಕೊಂಡ ಯೋಜನೆಯಂತೆ ಬ್ಯಾಟ್ ಮಾಡಿದ ಶುಭಮನ್‌ ಗಿಲ್‌ ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ನಾಯಕತ್ವ ಸಿಕ್ಕ ಮೇಲೆ ಅಮೋಘವಾಗಿ ಬ್ಯಾಟ್ ಮಾಡುತ್ತಿರುವ ಶುಭಮನ್‌ ಗಿಲ್ ಸೊಗಸಾದ ಫಾರ್ಮ್‌ನಲ್ಲಿರುವ ಗಿಲ್‌ ಮತ್ತೊಮ್ಮೆ ಮೂರಂಕಿ ಮುಟ್ಟಿ ಸಂಭ್ರಮಿಸಿದರು. ಈ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

Captain Gill s Maiden Home Century Shines with Dominant Ton in Delhi

ಶುಭಮನ್‌ ಗಿಲ್‌ ನವದೆಹಲಿಯಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಮುಂದುವರೆಸಿದರು. ಇಂಗ್ಲೆಂಡ್‌ನಲ್ಲಿ ಕಂಡುಕೊಂಡಿದ್ದ ಫಾರ್ಮ್‌ನ್ನು ಶುಭಮನ್‌ ಗಿಲ್‌ ತವರಿನಲ್ಲೂ ಮುಂದುವರೆಸಿದರು. ಇವರು 177 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ನಾಯಕತ್ವ ವಹಿಸಿಕೊಂಡ ಮೊದಲ 7 ಟೆಸ್ಟ್‌ ಪಂದ್ಯಗಳಲ್ಲಿ 5 ಶತಕ ಬಾರಿಸಿದ ದಾಖಲೆಯನ್ನು ಬರೆದರು. ಇದರೊಂದಿಗೆ ಗಿಲ್‌, ಡಾನ್‌ ಬ್ರಾಡ್ಮನ್‌, ಸುನಿಲ್ ಗವಾಸ್ಕರ್‌ ಅವರ ದಾಖಲೆಯನ್ನು ಸರಿ ಗಟ್ಟಿದರು. ಈ ಇಬ್ಬರೂ ದಿಗ್ಗಜ ಆಟಗಾರರು ನಾಯಕತ್ವ ವಹಿಸಿಕೊಂಡ ಮೊದಲ 7 ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ.

ರೋಹಿತ್ ದಾಖಲೆ ಪೀಸ್ ಪೀಸ್‌

ವೆಸ್ಟ್ ಇಂಡೀಸ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಶುಭಮನ್‌ ಗಿಲ್‌ ದಾಖಲೆಯ ಪುಟಕ್ಕೆ ಸ್ಥಾನ ಪಡೆದರು. ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಶತಕದ ಮೂಲಕ ಗಿಲ್‌ ರೋಹಿತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಿದರು. ರೋಹಿತ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 9 ಶತಕಗಳನ್ನು ಗಳಿಸಿದ್ದರು. ಗಿಲ್‌ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ನಲ್ಲಿ ಇದು 10ನೇ ಶತಕವಾಗಿದೆ.

ಬಾಬರ್‌ ದಾಖಲೆ ಉಡೀಸ್‌

ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸುತ್ತಲೇ ಗಿಲ್ ಹಲವು ದಾಖಲೆಗಳನ್ನು ಬರೆದರು. ಇವರು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ನಾಯಕ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಅಲ್ಲದೆ ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್‌ ಬಾಬರ್ ಅಜಮ್‌ ದಾಖಲೆಯನ್ನು ಅಳಿಸಿದರು. ಬಾಬರ್ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ನಲ್ಲಿ ನಾಯಕನಾಗಿ 4 ಶತಕ ಬಾರಿಸಿದ್ದಾರೆ.

Story first published: Saturday, October 11, 2025, 13:05 [IST]
Other articles published on Oct 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+