ಸೌರವ್ ಗಂಗೂಲಿ ದಾಖಲೆ ಮುರಿದ ಎಂಎಸ್ ಧೋನಿ
ಪರ್ತ್, ಮಾ. 7: ವಿಶ್ವಕಪ್ ಅಭಿಯಾನದ ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನೊಂದಿಗೆ ಎಂಎಸ್ ಧೋನಿ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ. ಭಾರತದ ಪರ ಯಶಸ್ವಿ ನಾಯಕ ಎಂಬ ಹೆಸರಿನಲ್ಲಿದ್ದ ಸೌರವ್ ಗಂಗೂಲಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಜಯ ಧೋನಿ ನಾಯಕತ್ವದಲ್ಲಿ ಭಾರತಕ್ಕೆ 59ನೇ(ಏಕದಿನ) ಜಯವಾಗಿದ್ದು ಸೌರವ್ ಗಂಗೂಲಿ ನೇತೃತ್ವದಲ್ಲಿ ಭಾರತ 58 ಜಯ ದಾಖಲಿಸಿತ್ತು.[ಭಾರತದ ದಾಖಲೆ ಮೂಲೆಗಟ್ಟಿದ ಆಸ್ಟ್ರೇಲಿಯಾ]

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಭಾರತಕ್ಕೆ ಧೋನಿ ಆಸರೆಯಾದರು. ಅಜೇಯ 45 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಧೋನಿ ನಾಯಕತ್ವದಲ್ಲಿ ಭಾರತ 2007 ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು ಎರಡು ವರ್ಷದ ಹಿಂದೆ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಲು ಧೋನಿ ಕಾರಣವಾಗಿದ್ದರು.
Story first published: Wednesday, January 3, 2018, 10:02 [IST]
Other articles published on Jan 3, 2018
Read in English: Dhoni breaks Ganguly's record
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications