For Quick Alerts
ALLOW NOTIFICATIONS  
For Daily Alerts
 

ಹೇರ್‌ಸ್ಟೈಲ್‌ ಬಗ್ಗೆ ಚಿಂತೆ ಮಾಡ್ತೀರಾದ್ರೆ ಫಿಲ್ಮ್‌ ಮಾಡಿ: ಪಾಕ್ ಕ್ರಿಕೆಟಿಗರಿಗೆ ಮಿಯಾಂದಾದ್ ತರಾಟೆ

Care About Hairstyle? Go Do Movies: Javed Miandad

ಪಾಕಿಸ್ತಾನದ ಯುವ ಆಟಗಾರರು ಆಟದ ಗಮನವನ್ನು ನೀಡದೆ ತಮ್ಮ ಹೇರ್‌ಸ್ಟೈಲ್ ಮುಂತಾದ ಅನಗತ್ಯ ವಿಚಾರಗಳ ಕಡೆಗೆ ಗಮನ ಹರಿಸುತ್ತಿದ್ದಾರೆ ಎಂದು ಪಾಕ್ ಬಗ್ಗೆ ಮಾಜಿ ನಾಯಕ ಮಿಯಾಂದಾದ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹೇರ್‌ ಸ್ಟೈಲ್‌ನತ್ತ ಗಮನ ನೀಡುವ ಬದಲು ಆಟದ ಕಡೆಗೆ ಗಮನ ನೀಡಿ ಎಂದು ಹೇಳಿದ್ದಾರೆ.

ಕ್ರಿಕೆಟ್ ಆಟಗಾರರು ತಮ್ಮ ಮೊದಲ ಗಮನವನ್ನು ಕ್ರಿಕೆಟ್‌ನತ್ತ ನೆಟ್ಟಿರಬೇಕು. ಸಂಪೂರ್ಣ ಪ್ರದರ್ಶನ ನೀಡುವ ಕಡೆಗೆ ತಮ್ಮ ಚಿತ್ತ ನೆಟ್ಟಿರಬೇಕು. ತಲೆಗೂದಲ ಬಗ್ಗೆ ಚಿಂತಿಸುವ ಬದಲು ಆಟದ ಪ್ರದರ್ಶನದ ಬಗ್ಗೆ ಚಿಂತಿಸಿದರೆ ಪ್ರದರ್ಶನ ಉತ್ತಮವಾಗಿ ಬರಲಿದೆ ಎಂದು ಮಿಯಾಂದಾದ್ ಹೇಳಿದ್ದಾರೆ.

ಆಟದ ಬಗ್ಗೆ ಗಮನ ನೀಡದೆ ಹೇರ್‌ಸ್ಟೈಲ್ ಬಗ್ಗೆ ಗಮನಹರಿಸುವುದಾದರೆ ಅಂತವರು ಕ್ರಿಕೆಟ್ ಆಟದ ಬದಲು ಚಲನಚಿತ್ರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ. ಅದು ಉತ್ತಮವಾದ ವೇದಿಕೆ. ಆದರೆ ಕ್ರಿಕೆಟ್‌ನಲ್ಲಿ ಸಾಧನೆಯನ್ನು ಮಾಡಬೇಕಾದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ಬಗ್ಗೆ ಗಮನಹರಿಸಬೇಕು ಎಂದು ಮಿಯಾಂದಾದ್ ಹೇಳಿದ್ದಾರೆ.

"ಕ್ರಿಕೆಟ್‌ ಅಂಗಣದಲ್ಲಿ ನಾವು ಯಾವ ರೀತಿ ಕಾಣಿಸಿಕೊಳ್ಳುತ್ತೇವೆ ಎಂಬುದರ ಕಡೆಗೆ ನಾವೆಂದೂ ತಲೆ ಕೆಡಿಸಿಕೊಂಡವರಲ್ಲ. ಆದರೆ ಪಂದ್ಯ ಮುಗಿದ ಬಳಿಕ ನೀವು ಏನು ಬೇಕಾದರೂ ಮಾಡಿ. ಕ್ರೀಡಾ ಪಟುಗಳು ಯುವ ಪೀಳಿಗೆಗೆ ಆದರ್ಶ. ಹೀಗಾಗಿ ನಾವು ಯಾವ ರೀತಿಯ ಮಾದರಿ ಮುಂದಿಡುತ್ತಿದ್ದೇವೆ ಎಂಬುದರ ಬಗ್ಗೆ ಅರಿವು ಇರಬೇಕು," ಎಂದಿದ್ದಾರೆ.

Story first published: Tuesday, March 31, 2020, 19:48 [IST]
Other articles published on Mar 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+