Viral Video: ಸಿಟ್ಯಾಕೋ ಸಿಡುಕ್ಯಾಕೋ ನನ್ನ ಜಾಣ: ವಿವಾದಾತ್ಮಕ ತೀರ್ಪಿಗೆ ವಿಂಡೀಸ್ ಸ್ಟಾರ್ ಕೆಂಡ
ವೆಸ್ಟ್ ಇಂಡೀಸ್‌ದ ದೈತ್ಯ ಆಟಗಾರ ಕಾರ್ಲೋಸ್ ಬ್ರಾಥ್ ವೈಟ್ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಹೆಸರುವಾಸಿ. ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಅವರಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಕಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡ ಅವರಿಗೆ ಮಣೆ ಹಾಕಿತ್ತು. ಆದರೆ ಈಗ ಕಾರ್ಲೋಸ್ ಬ್ರಾಥ್ ವೈಟ್ ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ಕಾರ್ಲೋಸ್ ಬ್ರಾಥ್‌ವೈಟ್ ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದಲೇ ಸದ್ದು ಮಾಡಿಲ್ಲ. ಬದಲಿಗೆ ಅವರಲ್ಲಿನ ಕೋಪದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇವರು ಲೀಗ್ ಒಂದರಲ್ಲಿ ಔಟ್ ಆದ ಮೇಲೆ ತೋರಿಸಿದ ಹಾವ ಭಾವದಿಂದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಆಗಿದ್ದೇನು?
ಕಾರ್ಲೋಸ್ ಬ್ರಾಥ್‌ವೈಟ್ ಸದ್ಯ ಕೆರೆಬಿಯನ್ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಮ್ಯಾಕ್ಸ್-60 ಕೆರಿಬಿಯನ್ ಲೀಗ್‌ನ ಪಂದ್ಯದಲ್ಲಿ ಕಾರ್ಲೋಸ್ ವಿವಾದಾತ್ಮಕ ತೀರ್ಪಿಗೆ ಔಟ್ ಆದರು. ಇದಾದ ಬಳಿಕ ಕಾರ್ಲೋಸ್ ಸಿಟ್ಟಿನಿಂದಲೇ ಪೆವೆಲಿಯನ್ ನತ್ತ ಹೆಜ್ಜೆ ಹಾಕಿದರು. ಬ್ರಾಥ್‌ವೈಟ್ ತಮ್ಮ ಸಿಟ್ಟನ್ನು ಹೊರ ಹಾಕಲು ಹೆಲ್ಮೆಟ್ ಆಯ್ಕೆ ಮಾಡಿಕೊಂಡರು.
ವಿವಾದಾತ್ಮಕ ತೀರ್ಪಿನಿಂದ ಔಟ್ ಆದ ಬೆನ್ನಲ್ಲೆ ಬ್ರಾಥ್‌ವೈಟ್ ಹೆಲ್ಮೆಟ್‌ಅನ್ನು ಗಾಳಿಯಲ್ಲಿ ತೂರಿ , ಶರವೇಗದಿಂದ ಬ್ಯಾಟ್ ಬೀಸಿದರು. ಇವರ ಸಿಟ್ಟಿಗೆ ಹೆಲ್ಮೆಟ್ ಸಹ ಬಹಳು ದೂರ ಹೋಗಿ ಬಿದ್ದಿತು. ಇವರು ಹೆಲ್ಮೆಟ್‌ನ್ನು ಚೆಂಡಿನಂತೆ ಬಾರಿಸಿದ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿವಾದಾತ್ಮಕ ತೀರ್ಪು?
ಈ ಪಂದ್ಯದಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ ಬ್ಯಾಟ್ ಮಾಡುವ ವೇಳೆ, ಜೋಶ್ ಲಿಟಲ್ ಶಾರ್ಟ್ ಒಂದು ಎಸೆತವನ್ನು ಬಿಗ್ ಶಾಟ್ ಬಾರಿಸಲು ಎತ್ನಿಸಿದ್ದರು. ಬೌಲರ್ ಶಾರ್ಟ್ ಎಸೆತವನ್ನು ಹಾಕಿದ್ದರಿಂದ ಚೆಂಡು ಬ್ರಾಥ್‌ವೈಟ್ ಭುಜಕ್ಕೆ ಬಡಿದು, ವಿಕೆಟ್ ಕೀಪರ್ ಕೈ ಸೇರಿತು. ಇದನ್ನು ಔಟ್ ಎಂದು ನೀಡಲಾಯಿತು. ಕಾರ್ಲೋಸ್ ಸಿಟ್ಟಿನಿಂದ, ಒಲ್ಲದ ಮನಸ್ಸಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಬ್ರಾಥ್‌ವೈಟ್ 5 ಎಸೆತಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತರಾದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಯಾರ್ಕ್ ಸ್ಟ್ರೈಕರ್ಸ್ 10 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ಗ್ರ್ಯಾಂಡ್ ಕೇಮನ್ ಜಾಗ್ವಾರ್ 10 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 96 ರನ್ ಗಳಿಸಲಷ್ಟೇ ಶಕ್ತವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications