For Quick Alerts
ALLOW NOTIFICATIONS  
For Daily Alerts
 

ENG vs WI: ಕೇಸಿ ಕಾರ್ಟಿ ಶತಕ: ವೆಸ್ಟ್‌ ಇಂಡೀಸ್ ಬೃಹತ್ ಮೊತ್ತ

ವೆಸ್ಟ್‌ ಇಂಡೀಸ್‌ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಗಳನ್ನುಆಡುತ್ತಿದೆ. ಈ ಸರಣಿಯ ಎರಡನೇ ಏಕದಿನ ಪಂದ್ಯ ಕಾರ್ಡಿಫ್‌ನಲ್ಲಿ ನಡೆಯುತ್ತಿದೆ. ಟಾಸ್‌ ಗೆದ್ದ ಇಂಗ್ಲೆಂಡ್‌ ಫೀಲ್ಡಿಂಗ್ ಮಾಡಲು ಮುಂದಾಯಿತು. ವೆಸ್ಟ್‌ ಇಂಡೀಸ್‌ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿ 50 ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ 47.4 ಓವರ್‌ಗಳಲ್ಲಿ 308 ರನ್‌ ಸಿಡಿಸಿ ಆಲೌಟ್ ಆಯಿತು.

ಮೊದಲು ಬ್ಯಾಟ್ ಮಾಡಿದ ವೆಸ್ಟ್‌ ಇಂಡೀಸ್ ತಂಡದ ಜ್ಯುವೆಲ್ ಆಂಡ್ರ್ಯೂ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಆರಂಭಿಕ ಬ್ರಾಂಡನ್ ಕಿಂಗ್ ಹಾಗೂ ಭರವಸೆಯ ಆಟಗಾರ ಕೀಸಿ ಕಾರ್ಟಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮಧ್ಯದ ಓವರ್‌ಗಳಲ್ಲಿ ಎಚ್ಚರಿಕೆಯ ಆಟವನ್ನು ಆಡಿದ ಫಲವಾಗಿ ಉತ್ತಮ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಎರಡನೇ ವಿಕೆಟ್‌ಗೆ ಈ ಜೋಡಿ 141 ಎಸೆತಗಳಲ್ಲಿ 141 ರನ್‌ ಬಾರಿಸಿತು. ಈ ವೇಳೆ ಬ್ರಾಂಡನ್ ಕಿಂಗ್ 10 ಬೌಂಡರಿ ನೆರವಿನಿಂದ 59 ರನ್‌ ಸಿಡಿಸಿ ಔಟ್ ಆದರು.

Carty s Century Powers West Indies to 308 Against England in Cardiff ODI

ಮೂರನೇ ವಿಕೆಟ್‌ಗೆ ಕೀಸಿ ಕಾರ್ಟಿ ಹಾಗೂ ನಾಯಕ ಶಾಯ್‌ ಹೋಪ್‌ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 61 ಎಸೆತಗಳಲ್ಲಿ 58 ರನ್‌ ಸಿಡಿಸಿದರು. ಈ ವೇಳೆ ಕೀಸಿ ಕಾರ್ಟಿ ತಮ್ಮ ವೃತ್ತಿ ಜೀವನದ 36ನೇ ಏಕದಿನ ಪಂದ್ಯದಲ್ಲಿ ನಾಲ್ಕನೇ ಶತಕ ಬಾರಿಸಿದರು. ಇವರು 13 ಬೌಂಡರಿ ನೆರವಿನಿಂದ 103 ರನ್‌ ಸಿಡಿಸಿ ಆರ್ಭಟಿಸಿದರು. ಕೀಸಿ ಕಾರ್ಟಿ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಬಾರಿಸಿ ಮಿಂಚಿದರು.

ವೆಸ್ಟ್‌ ಇಂಡೀಸ್‌ ತಂಡದ ನಾಯಕ ಶಾಯ್‌ ಹೋಪ್‌ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 78 ರನ್‌ ಬಾರಿಸಿದರು. ಜಸ್ಟಿನ್ ಗ್ರೀವ್ಸ್ 22 ರನ್‌ ಸಿಡಿಸಿದರು. ಪರಿಣಾಮ ವಿಂಡೀಸ್‌ ತಂಡ ಬೃಹತ್ ಮೊತ್ತವನ್ನು ಕಲೆ ಹಾಕಿತು.

Story first published: Sunday, June 1, 2025, 20:19 [IST]
Other articles published on Jun 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+