Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಆರಂಭ ಯಾವಾಗ?, ತಂಡಗಳು, ನೇರಪ್ರಸಾರ ಎಲ್ಲಿ? ಹೇಗಿದೆ ಕರ್ನಾಟಕ ಬುಲ್ಡೋಜರ್ಸ್ ತಂಡ?

CCL 2023: Celebrity Cricket League Starts Date And Place, 8 Teams, Live Telecast, Karnataka Bulldozers Squad

ಕೋವಿಡ್-19 ಸಾಂಕ್ರಾಮಿಕದ ಮೂರು ವರ್ಷಗಳ ವಿರಾಮದ ಬಳಿಕ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ಗೆ (CCL) ಮತ್ತೆ ಚಾಲನೆ ಸಿಗುತ್ತಿದೆ. ದೇಶದ ವಿವಿಧ ಸಿನಿಮಾ ತಾರೆಯರು ಬ್ಯಾಟ್ ಮತ್ತು ಬಾಲ್‌ನೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ಕ್ರಿಕೆಟ್ ಮತ್ತು ಸಿನಿಮಾ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಸಿಸಿಎಲ್ ಹೊಸ ಸೀಸನ್‌ನೊಂದಿಗೆ ಮರಳುತ್ತಿದೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ ಪಂದ್ಯಾವಳಿಯು 8 ರಾಜ್ಯಗಳನ್ನು ಪ್ರತಿನಿಧಿಸುವ 8 ತಂಡಗಳನ್ನು ಹೊಂದಿದ್ದು, ಈ ತಂಡಗಳು ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲು ಕಠಿಣವಾಗಿ ಹೋರಾಡಲಿವೆ.

ಅಂತಿಮವಾಗಿ ಅಂಕಪಟ್ಟಿಯಲ್ಲಿ ಹೆಚ್ಚು ಅಂಕ ಪಡೆದ ತಂಡ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದ್ದರೆ, ಎರಡು ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯ ಅಂತಿಮ ಪಂದ್ಯ ಮಾರ್ಚ್ 19ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

CCL 2023: Celebrity Cricket League Starts Date And Place, 8 Teams, Live Telecast, Karnataka Bulldozers Squad

ಸಂಘಟಕರ ಪ್ರಕಾರ, ಕ್ರೀಡೆ ಮತ್ತು ಸಿನಿಮಾ ಈ ದೇಶದ ಅತಿ ದೊಡ್ಡ ಮನರಂಜನಾ ಕ್ಷೇತ್ರಗಳು ಮತ್ತು ಸಿಸಿಎಲ್ ಎರಡರ ಸಂಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

ಯುಎಇನ ಇಂಟರ್ನ್ಯಾಷನಲ್ ಟಿ20 ಲೀಗ್ (ILT20 ಲೀಗ್) ಪ್ರಸಾರದ ನಂತರ, Zee ಸಿನಿಮಾ ಮತ್ತೊಂದು ಕ್ರಿಕೆಟ್ ನೇರಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ.

ಇದೇ ಫೆಬ್ರವರಿ 18ರಿಂದ ಪ್ರಾರಂಭವಾಗುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಹಕ್ಕುಗಳನ್ನು ZEE ಪಡೆದುಕೊಂಡಿದೆ. ಸಿಸಿಎಲ್ ಪಂದ್ಯಾವಳಿಯನ್ನು Zee ಟಿವಿ ನೆಟ್‌ವರ್ಕ್‌ನ ಏಳು ವಿಭಿನ್ನ ಚಾನೆಲ್‌ಗಳಲ್ಲಿ ಲೈವ್ ಆಗಿ ಪ್ರಸಾರ ಮಾಡಲಾಗುತ್ತದೆ.

CCL 2023: Celebrity Cricket League Starts Date And Place, 8 Teams, Live Telecast, Karnataka Bulldozers Squad

2023ರ ಸಿಸಿಎಲ್ ಋತುವಿನಲ್ಲಿ ದೇಶದ 8 ವಿವಿಧ ಭಾಗಗಳ ತಂಡಗಳನ್ನು ಒಳಗೊಂಡಿದ್ದು, ಲೀಗ್‌ಗೆ ಪ್ಯಾನ್-ಇಂಡಿಯಾ ಉಪಸ್ಥಿತಿಯನ್ನು ನೀಡಲಾಗಿದೆ. ಬೆಂಗಳೂರು, ಹೈದರಾಬಾದ್, ಜೋಧ್‌ಪುರ, ಚೆನ್ನೈ, ಕೊಚ್ಚಿನ್ ಮತ್ತು ರಾಯ್‌ಪುರ ಸೇರಿದಂತೆ 6 ನಗರಗಳಲ್ಲಿ 19 ಪಂದ್ಯಗಳನ್ನು ಆಡಲಾಗುತ್ತಿದ್ದು, 8 ತಂಡಗಳು ಹೀಗಿವೆ.

* ಕರ್ನಾಟಕ ಬುಲ್ಡೋಜರ್ಸ್

* ಮುಂಬೈ ಹೀರೋಸ್

* ಚೆನ್ನೈ ರೈನೋಸ್

* ತೆಲುಗು ವಾರಿಯರ್ಸ್

* ಭೋಜ್‌ಪುರಿ ದಬಾಂಗ್ಸ್

* ಕೇರಳ ಸ್ಟ್ರೈಕರ್ಸ್

* ಬಂಗಾಳ ಟೈಗರ್ಸ್

* ಪಂಜಾಬ್ ಡಿ ಶೇರ್

200ಕ್ಕೂ ಹೆಚ್ಚು ಸಿನಿಮಾ ಕ್ಷೇತ್ರದ ತಾರೆಯರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ, ಈ ಬಾರಿಯ ಸೀಸನ್ ವೀಕ್ಷಕರಿಗೆ ಹೆಚ್ಚು ಮನರಂಜನೆ ನೀಡುವ ನಿರೀಕ್ಷೆಯಿದೆ.

ಕರ್ನಾಟಕ ಬುಲ್ಡೋಜರ್ಸ್ ತಂಡ ಹೀಗಿದೆ

ಕಿಚ್ಚ ಸುದೀಪ್- ನಾಯಕ (ಆಲ್‌ರೌಂಡರ್), ಶಿವರಾಜಕುಮಾರ್ (ಬೌಲರ್), ಗಣೇಶ್ (ಬೌಲರ್), ಪ್ರದೀಪ್ ಬೊಗಾಡಿ (ಆಲ್‌ರೌಂಡರ್), ಕಾರ್ತಿಕ್ ಜಯರಾಂ (ಆಲ್‌ರೌಂಡರ್), ರಾಜೀವ್ ಹನು (ಬ್ಯಾಟ್ಸ್‌ಮನ್), ಡಾರ್ಲಿಂಗ್ ಕೃಷ್ಣ (ಆಲ್‌ರೌಂಡರ್), ಚಂದನ್ ಕುಮಾರ್ (ಆಲ್‌ರೌಂಡರ್), ನಿರೂಪ್ ಭಂಡಾರಿ (ಆಲ್‌ರೌಂಡರ್), ಪೆಟ್ರೋಲ್ ಪ್ರಸನ್ನ (ಬೌಲರ್), ಸುನಿಲ್ ರಾವ್ (ಬೌಲರ್), ನಂದಕಿಶೋರ್ (ಬೌಲರ್), ಪ್ರತಾಪ್ ನಾರಾಯಣ್(ಆಲ್‌ರೌಂಡರ್), ಕರಣ್ ಆರ್ಯನ್(ವಿಕೆಟ್ ಕೀಪರ್/ ಬ್ಯಾಟ್ಸ್‌ಮನ್), ಅರ್ಜುನ್ ಯೋಗಿ (ಬ್ಯಾಟ್ಸ್‌ಮನ್), ತ್ರಿವಿಕ್ರಮ (ಆಲ್‌ರೌಂಡರ್),

ಕರ್ನಾಟಕ ಬುಲ್ಡೋಜರ್ಸ್ ತಂಡದ ರಾಯಭಾರಿಗಳಾಗಿ ಚಲನಚಿತ್ರ ನಟಿಯರಾದ ಸಪ್ತಮಿ ಗೌಡ ಮತ್ತು ಶಾನ್ವಿ ಶ್ರೀವಾತ್ಸವ್ ಇದ್ದಾರೆ.

Story first published: Sunday, February 12, 2023, 6:37 [IST]
Other articles published on Feb 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+