CCL 2023: ಕರ್ನಾಟಕ ಬುಲ್ಡೋಜರ್ಸ್ vs ಚೆನ್ನೈ ರೈನೋಸ್, ಸಂಭಾವ್ಯ ತಂಡಗಳು, ಲೈವ್ ಸ್ಟ್ರೀಮಿಂಗ್, ಅಂಕಪಟ್ಟಿ

2023ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪಂದ್ಯಾವಳಿಯಲ್ಲಿ ಸತತ ಎರಡು ಗೆಲುವಿನೊಂದಿಗೆ ಅದ್ಭುತ ಫಾರ್ಮ್‌ನಲ್ಲಿರುವ ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡವು ಚೆನ್ನೈ ರೈನೋಸ್ ತಂಡದ ವಿರುದ್ಧ ಶನಿವಾರ, ಮಾರ್ಚ್ 4ರಂದು ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣಸಾಡಲಿದೆ.
ಕರ್ನಾಟಕ ಕರ್ನಾಟಕ ಬುಲ್ಡೋಜರ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದರೆ, ತಮ್ಮ ಎರಡನೇ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
2 ಪಂದ್ಯಗಳಲ್ಲಿ 2 ಜಯದ ಮೂಲಕ 4 ಕಲೆ ಹಾಕಿರುವ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಸ್ಥಾನದಲ್ಲಿದ್ದರೆ, ಅಷ್ಟೇ ಪಂದ್ಯಗಳಿಂದ 4 ಅಂಕ ಗಳಿಸಿರುವ ತೆಲುಗು ವಾರಿಯರ್ಸ್ ತಂಡ ನೆಟ್ ರನ್‌ರೇಟ್‌ನಲ್ಲಿನ ವ್ಯತ್ಯಾಸದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ನಾಯಕ ಪ್ರದೀಪ್ ಬೋಗಾಡಿ, ರಾಜೀವ್ ಹನು, ಗಣೇಶ್, ಡಾರ್ಲಿಂಗ್ ಕೃಷ್ಣ, ಚಂದನ್ ಕುಮಾರ್, ನಿರೂಪ್ ಭಂಡಾರಿ ಅವರ ಅತ್ಯುತ್ತಮ ಪ್ರದರ್ಶನದ ಸಹಾಯದಿಂದ ಗೆಲುವಿನ ನಾಗಾಲೋಟ ಮುಂದುವರೆಸುವ ಸಾಧ್ಯತೆ ಇದೆ.

ಅತ್ತ ಆರ್ಯ ನಾಯಕತ್ವದ ಚೆನ್ನೈ ರೈನೋಸ್ ತಂಡವೂ ಬಲಾಢ್ಯವಾಗಿದ್ದು, ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಸೋಲಿನಿಂದಿಗೆ 2 ಅಂಕ ಗಳಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಶನಿವಾರ ಸಂಜೆ 7 ಗಂಟೆಗೆ ನಡೆಯುವ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸೋಲಿಸಲು ಎದುರು ನೋಡುತ್ತಿದೆ.
ಸಿಸಿಎಲ್ 2023ರ ಅಂಕಪಟ್ಟಿ
ತೆಲುಗು ವಾರಿಯರ್ಸ್ - 2 ಪಂದ್ಯ, 2 ಗೆಲುವು, 4 ಅಂಕ
ಕರ್ನಾಟಕ ಬುಲ್ಡೋಜರ್ಸ್ - 2 ಪಂದ್ಯ, 2 ಗೆಲುವು, 4 ಅಂಕ
ಭೋಜಪುರಿ ದಬಾಂಗ್ಸ್ - 2 ಪಂದ್ಯ, 2 ಗೆಲುವು, 4 ಅಂಕ
ಚೆನ್ನೈ ರೈನೋಸ್ - 2 ಪಂದ್ಯ, 1 ಗೆಲುವು, 1 ಸೋಲು, 2 ಅಂಕ
ಮುಂಬೈ ಹೀರೋಸ್ - 2 ಪಂದ್ಯ, 1 ಗೆಲುವು, 1 ಸೋಲು, 2 ಅಂಕ
ಪಂಜಾಬ್ ದೆ ಶೇರ್ - 2 ಪಂದ್ಯ, 2 ಸೋಲು, 0 ಅಂಕ
ಬೆಂಗಾಲ್ ಟೈಗರ್ಸ್ - 2 ಪಂದ್ಯ, 2 ಸೋಲು, 0 ಅಂಕ
ಕೇರಳ ಸ್ಟ್ರೈಕರ್ಸ್ - 2 ಪಂದ್ಯ, 2 ಸೋಲು, 0 ಅಂಕ
2023ರ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಟಿ20 ಸ್ವರೂಪದ ಪಂದ್ಯಾವಳಿ ಎನ್ನಲಾಗಿತ್ತು. ಆದರೆ ಅಂತಿಮವಾಗಿ ಟೆಸ್ಟ್ ಸ್ವರೂಪದಂತೆ ಪ್ರತಿ ತಂಡಕ್ಕೆ 10 ಓವರ್‌ಗಳ 2 ಇನ್ನಿಂಗ್ಸ್‌ಗಳನ್ನು ಅಡಿಸಲಾಗುತ್ತದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಝೀ ನೆಟ್‌ವರ್ಕ್ ಸಿಸಿಎಲ್ ಪಂದ್ಯಾವಳಿಯ ಪ್ರಸಾರ ಪಾಲುದಾರನಾಗಿದೆ. ಕನ್ನಡದಲ್ಲಿ ಝೀ ಪಿಚ್ಚರ್ ಚಾನೆಲ್‌ನಲ್ಲಿ ಸಿಸಿಎಲ್ ಪಂದ್ಯಗಳು ನೇರಪ್ರಸಾರವಾಗಲಿವೆ. ಇದನ್ನು ಲೈವ್ ಸ್ಟ್ರೀಮಿಂಗ್‌ನಲ್ಲಿ Zee5 ಮೂಲಕ ಪಂದ್ಯ ವೀಕ್ಷಿಸಬಹುದು. ಇನ್ನು ಸಿಸಿಎಲ್‌ನ ಅಧಿಕೃತ YouTube ಚಾನೆಲ್‌ನಲ್ಲಿಯೂ ವೀಕ್ಷಿಸಬಹುದು.
ಕರ್ನಾಟಕ ಬುಲ್ಡೋಜರ್ಸ್ ಸಂಭಾವ್ಯ ಆಡುವ 11ರ ಬಳಗ
ಕಿಚ್ಚ ಸುದೀಪ್, ಪ್ರದೀಪ್ ಬೋಗಾಡಿ (ನಾಯಕ), ಕೃಷ್ಣ, ಜಯರಾಂ ಕಾರ್ತಿಕ್, ರಾಜೀವ್ ಹನು, ನಿರೂಪ್ ಭಂಡಾರಿ, ಗಣೇಶ್, ಚಂದನ್ ಕುಮಾರ್, ಪೆಟ್ರೋಲ್ ಪ್ರಸನ್ನ, ಅರುಣ್, ಕರಣ್
ಚೆನ್ನೈ ರೈನೋಸ್ ಸಂಭಾವ್ಯ ಆಡುವ 11ರ ಬಳಗ
ಆರ್ಯ (ನಾಯಕ), ವಿಕ್ರಾಂತ್, ಅಶೋಕ್ ಸೆಲ್ವನ್, ಶಾಂತನು, ಪೃಥ್ವಿ, ವಿಷ್ಣು ವಿಶಾಲ್, ರಮಣ, ಶಿವ, ಭರತ್, ದಸರಾತಿ, ಕಲೈ ಅರಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications