CCL 2023: ಕರ್ನಾಟಕ ಬುಲ್ಡೋಜರ್ಸ್ vs ಕೇರಳ ಸ್ಟ್ರೈಕರ್ಸ್ ಪಂದ್ಯದ ವಿವರ, ಆಡುವ ಬಳಗ, ಟಿವಿ ನೇರಪ್ರಸಾರ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2023ರ ಆವೃತ್ತಿಗೆ ಕಳೆದ ವಾರ ಚಾಲನೆ ದೊರೆತಿದೆ. ದೇಶದ ವಿವಿಧ ಪ್ರಾದೇಶಿಕ ಚಲನಚಿತ್ರ ಉದ್ಯಮಗಳ ಎಂಟು ತಂಡಗಳನ್ನು ಒಳಗೊಂಡ ಸಿಸಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ನಟರು ಮತ್ತು ಚಲನಚಿತ್ರ ಸೆಲೆಬ್ರಿಟಿಗಳು ಕ್ರಿಕೆಟ್ ಮೈದಾನಕ್ಕಿಳಿದು ಪರಸ್ಪರ ಸ್ಪರ್ಧಿಸಲು ಒಂದು ವೇದಿಕೆಯಾಗಿ ಸಿಸಿಎಲ್ ಮಾರ್ಪಟ್ಟಿದೆ. ಲೀಗ್‌ನಲ್ಲಿ ಈಗಾಗಲೇ ಆರು ಪಂದ್ಯಗಳು ನಡೆದಿದ್ದು, ಭಾನುವಾರ, ಫೆಬ್ರವರಿ 26ರಂದು ರೋಚಕ ಹಣಾಹಣಿ ಏರ್ಪಡಲಿದೆ.
ಭಾನುವಾರ, ಫೆಬ್ರವರಿ 26ರಂದು ಜೈಪುರದಲ್ಲಿ ನಡೆಯುವ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ತಂಡವು ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಎದುರಿಸಲಿದೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತದೆ.
ಕಳೆದ ಶನಿವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಬೆಂಗಾಲ್ ಟೈಗರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಪಂದ್ಯಾವಳಿಯನ್ನು ಶುಭಾರಂಭ ಮಾಡಿದರು. ಇದಕ್ಕೆ ವ್ಯತಿರಿಕ್ತವಾಗಿ ತೆಲುಗು ವಾರಿಯರ್ಸ್ ವಿರುದ್ಧ ಸೋತ ನಂತರ ಕೇರಳ ಸ್ಟ್ರೈಕರ್ಸ್ ಪ್ರಸ್ತುತ ಲೀಗ್‌ನಲ್ಲಿ ಮೊದಲ ಜಯವನ್ನು ಗಳಿಸಲು ಪ್ರಯತ್ನಿಸಲಿದೆ.

2023ರ ಆವೃತ್ತಿಯ ಎಲ್ಲಾ ಸಿಸಿಎಲ್ ಪಂದ್ಯಗಳನ್ನು Zee ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಟಿವಿಯಲ್ಲಿ Zee Anmol ಸಿನಿಮಾ ಚಾನೆಲ್‌ನಲ್ಲಿ ಸಿಸಿಎಲ್ ಪಂದ್ಯಗಳನ್ನು ನೇರಪ್ರಸಾರ ಮಾಡಲಾಗುತ್ತದೆ. ಅಲ್ಲದೆ, 9 ಚಾನಲ್‌ಗಳಲ್ಲಿ 9 ವಿವಿಧ ಭಾಷೆಗಳಲ್ಲಿ ಸಿಸಿಎಲ್ ಪಂದ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕನ್ನಡದಲ್ಲಿ ಝೀ ಪಿಚ್ಚರ್‌ನಲ್ಲಿ ನೇರಪ್ರಸಾರವಾಗಿ ವೀಕ್ಷಿಸಬಹುದು.
ಕರ್ನಾಟಕ ಬುಲ್ಡೋಜರ್ಸ್ ಸಂಭಾವ್ಯ ಆಡುವ 11ರ ಬಳಗ
ಕಿಚ್ಚ ಸುದೀಪ್, ಪ್ರದೀಪ್ ಬೋಗಾಡಿ, ಕೃಷ್ಣ, ಜಯರಾಂ ಕಾರ್ತಿಕ್, ರಾಜೀವ್ ಹನು, ನಿರೂಪ್ ಭಂಡಾರಿ, ಗಣೇಶ್, ಚಂದನ್ ಕುಮಾರ್, ಸುನೀಲ್, ತ್ರಿವಿಕ್ರಮ, ಕರಣ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications