Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CCL 2023: ಕೃಷ್ಣ ಮೋಹಕ, ಬಚ್ಚನ್ ಆರ್ಭಟ: ಚೆನ್ನೈ ರೈನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್‌ಗೆ ಅಮೋಘ ಗೆಲುವು

CCL 2023: Karnataka Bulldozers Won By 6 Wickets Against Chennai Rhinos

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ ತಂಡದ ಅಬ್ಬರ ಮುಂದುವರಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ರೈನೋಸ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಮಣಿಸಿದೆ. ಎರಡೂ ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಕರ್ನಾಟಕ ಬುಲ್ಡೋಜರ್ಸ್ ಪರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಕೃಷ್ಣ ಅಜೇಯ ಅರ್ಧ ಶತಕ ಸಿಡಿಸಿದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅರುಣ್ ಬಚ್ಚನ್ ಸ್ಪೋಟಕ ಅರ್ಧ ಶತಕ ಸಿಡಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚೆನ್ನೈ ತಂಡ ನಿಗದಿತ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 85 ರನ್ ಮಾತ್ರವೇ ಗಳಿಸಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಕೃಷ್ಣ ಹಾಗೂ ಪ್ರದೀಪ್ ಬೊಗಡಿ ಅಜೇಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೃಷ್ಣ 33 ಎಸೆತಗಳಲ್ಲಿ 62 ರನ್‌ಗಳಿಸಿದರೆ ಪ್ರದೀಪ್ 27 ಎಸೆತಗಳಲ್ಲಿ ಅಜೇಯ 46 ರನ್‌ಗಳಿಸಿದರು. 10 ಓವರ್‌ಗಳಲ್ಲಿ 109 ರನ್‌ಗಳಿಸಿ 24 ರನ್‌ಗಳ ಮುನ್ನಡೆ ಪಡೆಯಿತು.

ಇನ್ನು ಎರಡನೇ ಬಾರಿಗೆ ಬ್ಯಾಟಿಂಗ್‌ಗೆ ಇಳಿದ ಚೆನ್ನೈ ತಂಡ ಈ ಬಾರಿ ಸ್ಪೋಟಕ ಪ್ರದರ್ಶನ ನೀಡಿತು. ವಿಷ್ಣು ವಿಶಾಲ್ 19 ಎಸೆತಗಳಲ್ಲಿ 32 ರನ್‌ಗಳಿಸಿದರೆ ರಮಣ 13 ಎಸೆತಗಳಲ್ಲಿ 20 ರನ್‌ಗಳಿಸಿದರು. ಪೃರ್ಥವಿ 9 ಎಸೆತಗಳಲ್ಲಿ 24 ರನ್ ಸಿಡಿಸಿದರು. ವಿಕ್ರಾಂತ್ 7 ಎಸೆತಗಳಲ್ಲಿ 21 ರನ್‌ ಸಿಡಿಸಿ ತಂಡದ ಮೊತ್ತವನ್ನು 125ಕ್ಕೆ ಏರಿಸಿದರು.

ಆದರೆ ಮೊದಲ ಇನ್ನಿಂಗ್‌ನಲ್ಲಿ 24ರನ್‌ಗಳಿಸಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಗೆಲ್ಲಲು ಕೊನೆಯ ಇನ್ನಿಂಗ್ಸ್‌ನಲ್ಲೊ ಬೇಕಾಗಿದ್ದಿದ್ದು ಭರ್ತಿ 100 ರನ್. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ ಹಿನ್ನಡೆ ಅನುಭವಿಸಿತು. ಅಲ್ಲದೆ ರಾಜೀವ್, ಕಿಚ್ಚ ಸುದೀಪ್ ಅಗ್ಗಕ್ಕೆ ತಮ್ಮ ವಿಕೆಟ್ ಕಳೆದುಕೊಂಡರು. ಆದರೆ ಅರುಣ್ ಬಚ್ಚನ್ ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಲು ಆರಂಭಿಸಿದರು. ಬಳಿಕ ಜಯರಾಮ್ ಕಾರ್ತಿಕ್ ಕೂಡ ಸ್ಪೋಟಕ ಪ್ರದರ್ಶನ ನೀಡಲು ಶುರುಮಾಡಿದರು.

ಅರುಣ್ ಬಚ್ಚನ್ ಈ ಪಂದ್ಯದಲ್ಲಿ ಕೇವಲ 18 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಭರ್ಜರಿ 57 ರನ್ ಬಾರಿಸಿದರು. ಅವರಿಗೆ ಅದ್ಭುತವಾಗಿ ಸಾಥ್ ನಿಡಿದ ಜಯರಾಮ್ ಕಾರ್ತಿಕ್ 23 ಎಸೆತಗಳಲ್ಲಿ 34 ರನ್ ಸಿಡಿಸಿದರು. ಹೀಗಾಗಿ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ಕರ್ನಾಟಕ ಬುಲ್ಡೋಜರ್ಸ್ ತಂಡ 6 ವಿಕೆಟ್‌ಗಲ ಅಂತರದ ಭರ್ಜರು ಗೆಲುವು ಸಾಧಿಸಿದೆ.

ಇನ್ನು ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿಯೂ ಕರ್ನಾಟಕ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿರುವ ಕರ್ನಾಟಕ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ವಿರುದ್ಧ ಸೋಲು ಅನುಭವಿಸಿದ ಚೆನ್ನೈ ತಂಡ ನಾಲ್ಕನೇ ಸ್ಥಾನದಲ್ಲಿದೆ.

Story first published: Sunday, March 5, 2023, 0:06 [IST]
Other articles published on Mar 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+