ವಿರಾಟ್ ಕೊಹ್ಲಿ ಶತಕ, ಸೌರವ್ ಗಂಗೂಲಿ ದಾಖಲೆ ಧ್ವಂಸ
ಚೆನ್ನೈ, ಅ.22: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರು ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿರುವ ಕೊಹ್ಲಿ ಅವರು ಈಗ ಹೆಚ್ಚು ಶತಕ ಗಳಿಸಿದ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ.
ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ಆರಂಭಿಕ ಆಘಾತ ಅನುಭವಿಸಿತು. ನಂತರ ವಿರಾಟ್ ಕೊಹ್ಲಿ 122 ರನ್ (124 ಎಸೆತ, 6x4, 4x6) ಬಾರಿಸಿದರು. ರಹಾನೆ 45ರನ್ ಗಳಿಸಿ ಔಟಾದರು.ರೈನಾ ಅರ್ಧಶತಕದ ಬಾರಿಸಿದ್ದಾರೆ.[ಕೊಹ್ಲಿ ಈಗ ಟ್ವಿಟ್ಟರ್ ನಲ್ಲಿ ಕಿಂಗ್]

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರ(ಅಕ್ಟೋಬರ್ 22) ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 26 ವರ್ಷ ವಯಸ್ಸಿನ ಕೊಹ್ಲಿ ಅವರು 23ನೇ ಶತಕ ಬಾರಿಸಿದರು. ಈ ಮೂಲಕ ಪಟ್ಟಿಯಲ್ಲಿ ಗಂಗೂಲಿ ಅವರಿಗಿಂತ ಮೇಲಕ್ಕೇರಿದ್ದಾರೆ. ಎಲ್ಲಾ ಆಟಗಾರರ ಪಟ್ಟಿಯಲ್ಲಿ ಕೊಹ್ಲಿಗಿಂತ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಹಿಂದಿದ್ದಾರೆ.
165ನೇ ಪಂದ್ಯವಾಡುತ್ತಿರುವ ಕೊಹ್ಲಿ ಅವರು ತ್ವರಿತಗತಿಯಲ್ಲಿ ಈ ಸಾಧನೆ ಮಾಡಿದ್ದಾರೆ. ಗಂಗೂಲಿ ಅವರು 311 ಪಂದ್ಯಗಳು, ತೆಂಡುಲ್ಕರ್ 463 ಪಂದ್ಯಗಳನ್ನಾಡಿದ್ದಾರೆ. ಕೊಹ್ಲಿಗಿಂತ ಮುಂದಿರುವ ತೆಂಡೂಲ್ಕರ್, ರಿಕಿ ಪಾಂಟಿಂಗ್ ಸನತ್ ಜಯಸೂರ್ಯ, ಕುಮಾರ್ ಸಂಗಕ್ಕಾರ ಎಲ್ಲರೂ ನಿವೃತ್ತರಾಗಿದ್ದಾರೆ.
ಟಾಪ್ 10 ಶತಕ ವೀರರು
* ಸಚಿನ್ ತೆಂಡೂಲ್ಕರ್ (ಭಾರತ) - 49
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 30
* ಸನತ್ ಜಯಸೂರ್ಯ ( ಶ್ರೀಲಂಕಾ)- 28
* ಕುಮಾರ್ ಸಂಗಕ್ಕಾರ (ಶ್ರೀಲಂಕಾ)-25
* ವಿರಾಟ್ ಕೊಹ್ಲಿ (ಭಾರತ) -23
* ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್), ತಿಲಕರತ್ನೆ ದಿಲ್ಶನ್ (ಶ್ರೀಲಂಕಾ), ಸೌರವ್ ಗಂಗೂಲಿ (ಭಾರತ)- 22
* ಹಶೀಂ ಅಮ್ಲಾ, ಎಬಿ ಡಿವಿಲೆಯರ್ಸ್, ಹರ್ಷಲ್ ಗಿಬ್ಸ್ (ಎಲ್ಲರೂ ದಕ್ಷಿಣ ಆಫ್ರಿಕಾದವರು)- 21
* ಸಯೀದ್ ಅನ್ವರ್ (ಪಾಕಿಸ್ತಾನ)-20
* ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್), ಮಹೇಲ ಜಯವರ್ದನೆ (ಶ್ರೀಲಂಕಾ)- 19
* ಮಾರ್ಕ್ ವಾ( ಆಸ್ಟ್ರೇಲಿಯಾ) -18
(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications