Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್ ಹಿಂದಿಕ್ಕಿರುವ ಕೊಹ್ಲಿ ಈಗ ಟ್ವಿಟ್ಟರ್ ನಲ್ಲಿ ಕಿಂಗ್

ಬೆಂಗಳೂರು, ಸೆ.07: ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಪ್ರತಿಭಾವಂತ ಕ್ರಿಕೆಟರ್ ಈಗ ಜನಪ್ರಿಯತೆಯ ವಿಷಯದಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾರೆ. ಸಚಿನ್ ಅವರ ಶತಕಗಳ ದಾಖಲೆ ಹಿಂದೆ ಬಿದ್ದಿರುವ ಕೊಹ್ಲಿ ಅವರು ಈಗ ಟ್ವಿಟ್ಟರ್ ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದಾರೆ.

ಮೈದಾನದ ಹೊರಗೂ ಸಚಿನ್ ಅವರ ಬೆನ್ನು ಬಿದ್ದಿರುವ ಕೊಹ್ಲಿ ಈಗ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದೆ ಹಾಕಿ ವರ್ಷ ಕಳೆದಿದೆ. ಈಗ ವಿರಾಟ್ ಕೊಹ್ಲಿ ಅವರು 8 ಮಿಲಿಯನ್ ಟ್ವಿಟ್ಟರ್ ಫಾಲೋವರ್ಸ್ ಹೊಂದಿದ್ದಾರೆ.

ಕೊಹ್ಲಿ ಸೆಪ್ಟೆಂಬರ್ 2009ರಲ್ಲಿ ಟ್ವಿಟ್ಟರ್ ಖಾತೆ ಆರಂಭಿಸಿದ್ದರೆ, ಸಚಿನ್ ತೆಂಡೂಲ್ಕರ್ ಅವರು 2010ರ ಏಪ್ರಿಲ್ ನಲ್ಲಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ ಕಾಲಿಟ್ಟಿದ್ದರು.

Virat Kohli Popularity Twitter 8 million followers

ಸೆ.07, 2015ರ ಜನಪ್ರಿಯತೆ ಹೀಗಿದೆ:
ಸಚಿನ್ ತೆಂಡೂಲ್ಕರ್
* 621 ಟ್ವೀಟ್ಸ್ 15 ಜನರನ್ನು ಹಿಂಬಾಲಿಸುತ್ತಿದ್ದಾರೆ, 7.73 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.
ವಿರಾಟ್ ಕೊಹ್ಲಿ
* 673 ಟ್ವೀಟ್ಸ್ 24 ಜನರನ್ನು ಹಿಂಬಾಲಿಸುತ್ತಿದ್ದಾರೆ, 8.01 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.


(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+