ಐಪಿಎಲ್ 2020: ದುಬೈನಲ್ಲಿ ಚಾಹಲ್ ಮಂಗನಾಟಕ್ಕೆ ಎಬಿಡಿ ಸಾಥ್: ವಿಡಿಯೋ

ಆರ್‌ಸಿಬಿ ತಂಡದ ಪ್ರಮುಖ ಸ್ಪಿನ್ ಬೌಲರ್ ಯುಜುವೇಂದ್ರ ಚಾಹಲ್ ಅತ್ಯಂತ ತಮಾಷೆಯ ವ್ಯಕ್ತಿ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದೇ ಇದೆ. ತನ್ನ ತಮಾಷೆಯ ಪ್ರವೃತ್ತಿಯಿಂದ ಸುತ್ತಮುತ್ತಲಿನವರನ್ನು ಚಾಹಲ್ ನಗಿಸುತ್ತಲೇ ಇರುತ್ತಾರೆ. ಇದೇ ಕಾರಣಕ್ಕೆ ಚಾಹಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.
ಐಪಿಎಲ್‌ಗಾಗಿ ಯುಎಇನಲ್ಲಿರುವ ಯುಜುವೇಂದ್ರ ಚಾಹಲ್ ಅಲ್ಲೂ ತಮ್ಮ ಮಂಗನಾಟವನ್ನು ಮುಂದುವರಿಸಿದ್ದಾರೆ. ಯುಜುವೇಂದ್ರ ಚಾಹಲ್‌ಗೆ ಈ ಬಾರಿ ಆರ್‌ಸಿಬಿಯ ಸ್ಪೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಸಾಥ್ ನೀಡಿದ್ದಾರೆ. ಚಾಹಲ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಐಪಿಎಲ್‌ನ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡದ ಪ್ರೋಮೋ ಶೂಟಿಂಗ್ ಒಂದು ನಡೆಯುತ್ತಿದ್ದು. ಈ ಸಂದರ್ಭದಲ್ಲಿ ಯುಜುವೇಂದ್ರ ಚಾಹಲ್ ಹಾಗೂ ಎಬಿಡಿ ವಿಲಿಯರ್ಸ್ ಅಲ್ಲಿದ್ದ ಟ್ರಾಲಿಯೊಂದರಲ್ಲಿ ತಮಾಷೆಯಾಗಿ ಆಡವಾಡುತ್ತಾ ಸಮಯ ಕಳೆದಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋಗೆ ಚಾಹಲ್ 'ಮನೆಗೆ ಕರೆದುಕೊಂಡು ಹೋಗಿ' ಎಂದು ಎಬಿ ಡಿವಿಲಿಯರ್ಸ್‌ಗೆ ಬರೆದುಕೊಂಡಿದ್ದು ಅದೇ ಅರ್ಥದ ಇಂಗ್ಲೀಷ್‌ನ ಖ್ಯಾತ ಹಾಡು" ಟೇಕ್ ಮಿ ಹೋಮ್" ಅನ್ನು ಎಡಿಟ್ ಮಾಡಿ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಎಬಿಡಿ ಹಾಗೂ ಚಾಹಲ್ ಜೋಡಿಯ ಈ ತುಂಟಾಟವನ್ನು ಎಂಜಾಯ್ ಮಾಡಿದ್ದಾರೆ.
View this post on InstagramTake me home 🏠 @abdevilliers17 🤣🤣👀
A post shared by Yuzvendra Chahal (@yuzi_chahal23) on
ಯುಜುವೇಂದ್ರ ಚಾಹಲ್ ಹಾಗೂ ಎಬಿ ಡಿವಿಲಿಯರ್ಸ್ ಯುಎಇನಲ್ಲಿ ಕಡ್ಡಾಯ ಆರು ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಇದೀಗ ತಂಡದ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಆರ್‌ಸಿಬಿ ತಂಡದ ಎಲ್ಲಾ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದು ಈ ಬಾರಿ ಅತ್ಯುತ್ತಮ ಫಲಿತಾಂಶ ನೀಡುವ ಗುರಿ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications