ಜೂನ್ 04ರ ಸಮರ: ಭಾರತ ಹಾಗೂ ಪಾಕಿಸ್ತಾನ 10 ಸಂಗತಿಗಳು
ಲಂಡನ್, ಜೂನ್ 01: ಐಸಿಸಿ ಆಯೋಜನೆಯ 'ಮಿನಿ ವಿಶ್ವಕಪ್' ಚಾಂಪಿಯನ್ಸ್ ಟ್ರೋಫಿ 2017ಯಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ವಿರುದ್ಧ ಪಾಕಿಸ್ತಾನ ತಂಡ ಜೂನ್ 04ರಂದು ಸೆಣಸಾಡಲಿದೆ. ಈ ಪಂದ್ಯದ ಬಗ್ಗೆ ನಿಮಗೆ ಈ ಸಂಗತಿಗಳು ನಿಮಗೆ ನೆನಪಿರಲಿ..
ಪಂದ್ಯಗಳು ಜೂನ್ 1 ರಿಂದ 18ರ ವರೆಗೆ 18 ದಿನಗಳ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ 3 ಕ್ರಿಕೆಟ್ ಮೈದಾನಗಳಲ್ಲಿ ನಡೆಯಲಿವೆ. ಭಾರತೀಯ ಕಾಲಮಾನ ಪ್ರಕಾರ ಕ್ರಮವಾಗಿ ಹಗಲು ಪಂದ್ಯ ಮಧ್ಯಾಹ್ನ 3 ಗಂಟೆ ಹಾಗೂ ಹಗಲು/ರಾತ್ರಿ ಪಂದ್ಯ ಸಂಜೆ 6 ಗಂಟೆಗೆ ಆರಂಭವಾಗಲಿದೆ.[ಟೀಂ ಇಂಡಿಯಾ ಪಂದ್ಯಗಳಿಗೆ ಫುಲ್ ಗೈಡ್]
ಜೂನ್ 04 (ಭಾನುವಾರ) ಮಧ್ಯಾಹ್ನ 03 ಗಂಟೆಗೆ ಪಂದ್ಯ ಆರಂಭಕ್ಕೂ ಮುನ್ನ ಈ ಅಂಶಗಳನ್ನು ಒಮ್ಮೆ ಓದಿಕೊಳ್ಳಿ
ಈ ಹಿಂದಿನ ಮೂರು ಮುಖಾಮುಖಿ
* ಸೆಪ್ಟೆಂಬರ್ 19, 2004 (ಎಜ್ ಬಾಸ್ಟನ್, ಇಂಗ್ಲೆಂಡ್)- ಪಾಕಿಸ್ತಾನಕ್ಕೆ 3 ವಿಕೆಟ್ ಗಳ ಜಯ.
* ಸೆಪ್ಟೆಂಬರ್ 26, 2009 (ಸೆಂಚೂರಿಯನ್, ದಕ್ಷಿಣ ಆಫ್ರಿಕಾ), ಪಾಕಿಸ್ತಾನಕ್ಕೆ 54ರನ್ ಗಳ ಜಯ.
* ಜೂನ್ 15, 2013(ಎಜ್ ಬಾಸ್ಟನ್, ಇಂಗ್ಲೆಂಡ್) ಭಾರತಕ್ಕೆ 8 ವಿಕೆಟ್ ಗಳ ಜಯ(ಡಕ್ವರ್ಥ್ ಲೂಯಿಸ್ ನಿಯಯದಂತೆ)

ಟಾಪ್ 10 ಸಂಗತಿಗಳು
1. ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ನಾಲ್ಕನೇ ಮುಖಾಮುಖಿ.
2. ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರ ಭಾರತದ ಮೇಲೆ ಪಾಕಿಸ್ತಾನ ಮೇಲುಗೈ ಸಾಧಿಸಿದೆ. 2-1 ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
3. ಪಾಕಿಸ್ತಾನದ ಶೋಯಿಬ್ ಮಲೀಕ್ ಅವರು ಮಾತ್ರ ಎಲ್ಲಾ ಮೂರು ಪಂದ್ಯಗಳಲ್ಲಿ ಆಡಿರುವ ಆಟಗಾರ ಎನಿಸಿಕೊಂಡಿದ್ದಾರೆ.

ಸ್ವಾರಸ್ಯಕರ ಸಂಗತಿ
4. ಒಟ್ಟಾರೆ, 6ನೇ ಚಾಂಪಿಯನ್ಸ್ ಟ್ರೋಫಿ ಆಡುತ್ತಿರುವ ಮಲೀಕ್ ದಾಖಲೆ ಬರೆಯಲಿದ್ದಾರೆ. 2002,2004,2006,2009 ಹಾಗೂ 2013ರಲ್ಲಿ ಆಡಿದ್ದಾರೆ.
5. ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿಯಲ್ಲಿ ಮಲೀಕ್ ಮಾತ್ರ ಶತಕ ಬಾರಿಸಿದ ಆಟಗಾರ. 2009ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಮೈದಾನದಲ್ಲಿ 126 ಎಸೆತಗಳಲ್ಲಿ 128 ರನ್ ಗಳಿಸಿ ಪಾಕಿಸ್ತಾನ ತಂಡವು 54ರನ್ ಗಳ ಜಯ ಗಳಿಸಲು ನೆರವಾದರು.

ಶ್ರೇಷ್ಠ ಬೌಲಿಂಗ್
6. ಎಜ್ ಬಾಸ್ಟನ್ ಒವಲ್ ಮೈದಾನದಲ್ಲಿ ಮೂರನೇ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಹಣಾಹಣಿ ನಡೆಯುತ್ತಿದೆ. 2004 ಹಾಗೂ 2013ರಲ್ಲಿ ಇದೇ ಮೈದಾನದಲ್ಲಿ ಪಂದ್ಯಗಳು ಜರುಗಿತ್ತು.
7. ಉಭಯ ತಂಡಗಳಿಂದ ಯಾವ ಬೌಲರ್ ಕೂಡಾ 5 ವಿಕೆಟ್ ಗಳಿಸಿಲ್ಲ. ಶ್ರೇಷ್ಠ ಬೌಲಿಂಗ್ ಆಶೀಶ್ ನೆಹ್ರಾ( 2009ರಲ್ಲಿ 4/55), ನವೀದ್ ಉಲ್ ಹಸನ್ (2004ರಲ್ಲಿ 4/25), ಶೋಯಿಬ್ ಅಖ್ತರ್ (2004ರಲ್ಲಿ 4/25)

ಯುವ ಪ್ರತಿಭೆಗಳ ಸಮರ
8. ಜೂನ್ 04, 2017(ಭಾನುವಾರ) ರ ಪಂದ್ಯ ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಇಬ್ಬರಿಗೂ ನಾಯಕರಾಗಿ ಐಸಿಸಿ ಆಯೋಜನೆಯಲ್ಲಿ ಮೊದಲ ಬಾರಿ ಮುಖಾಮುಖಿ. ಅಂಡರ್ 19 ಮಟ್ಟದಲ್ಲಿ ಇಬ್ಬರು ಕಪ್ ಗೆಲ್ಲಿಸಿಕೊಟ್ಟಿದ್ದಾರೆ. 2006ರಲ್ಲಿ ಸರ್ಫರಾಜ್ ನಾಯಕತ್ವದಲ್ಲಿ (ಭಾರತ ವಿರುದ್ಧ 38ರನ್ ಗೆಲುವು) ಕಪ್ ಗೆದ್ದಿತ್ತು. 2008ರಲ್ಲಿ ಕೊಹ್ಲಿ ನಾಯಕತ್ವದಲ್ಲಿ (ದಕ್ಷಿಣ ಆಫ್ರಿಕಾವನ್ನು ಡಕ್ವರ್ಥ್ ಲೂಯಿಸ್ ನಿಯಮದಂತೆ 12ರನ್ ಗಳಿಂದ ಮಣಿಸಿ) ಭಾರತ ಕಪ್ ಗೆದ್ದಿತ್ತು.

ಭಾರತಕ್ಕಿದೆ ಅನುಭವ
9. 9 ಭಾರತೀಯರು(ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ದಿನೇಶ್ ಕಾರ್ತಿಕ್,ಎಂಎಸ್ ಧೋನಿ, ರವೀಂದ್ರ ಜಡೇಜ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್). ಪಾಕಿಸ್ತಾನದಿಂದ (ಮಲೀಕ್, ಮೊಹಮ್ಮದ್ ಹಫೀಜ್, ಜುನೈದ್ ಖಾನ್) ಮೂವರು 2013ರಲ್ಲಿ ಆಡಿದ್ದರು.
10. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ವರದಿಯಂತೆ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್ ಗಳು ಮಾರಾಟವಾಗಿವೆ.

ತಂಡಗಳು :
ಭಾರತ: ರೋಹಿತ್ ಶರ್ಮ, ಅಜಿಂಕ್ಯರಹಾನೆ , ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಯುವರಾಜ್ ಸಿಂಗ್ , ಎಂಎಸ್ ಧೋನಿ (ವಿಕೆಟ್ ಕೀಪರ್) , ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ , ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ
ಪಾಕಿಸ್ತಾನ: ಸರ್ಫರಾಜ್ ಅಹ್ಮದ್ (ನಾಯಕ ಹಾಗೂ ವಿಕೆಟ್ ಕೀಪರ್), ಅಜರ್ ಅಲಿ, ಅಹ್ಮದ್ ಶೆಹಜಾದ್, ಮೊಹಮ್ಮದ್ ಹಫೀಜ್, ಬಾಬರ್ ಅಜಂ, ಶೋಯಿಬ್ ಮಲೀಕ್, ಉಮರ್ ಅಕ್ಮಲ್, ಫಖಾರ್ ಜಮಾನ್, ಇಮಾದ್ ವಾಸೀಂ, ಹಸನ್ ಅಲಿ, ಫಹೀಂ ಅಶ್ರಫ್, ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಜುನೈದ್ ಖಾನ್, ಶಬಾದ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications