
ಯಶಸ್ಸು ಶೇ. 41.7ರಷ್ಟು
1978ರಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಕ್ರಿಕೆಟ್ ಏಕದಿನ ಪಂದ್ಯವನ್ನಾಡಿದ್ದು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 132 ಪಂದ್ಯಗಳಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ. ಇವುಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವುದು ಪಾಕಿಸ್ತಾನವೇ. 72 ಪಂದ್ಯಗಳನ್ನು ಅದು ಗೆದ್ದಿದ್ದರೆ, ಭಾರತ 51 ಪಂದ್ಯಗಳನ್ನು ಗೆದ್ದಿದೆ. ಅಷ್ಟೇ ಅಲ್ಲ, ಪಾಕಿಸ್ತಾನದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾರತದ ಯಶಸ್ಸು ಶೇ. 41.7ರಷ್ಟು ಮಾತ್ರ.

ಪಾಕ್ ಪರವಾಗಿ ನಾಸಿರ್ ಶಾ ಉತ್ತಮ
ಇನ್ನು, ಪಾಕಿಸ್ತಾನದ ಪರವಾಗಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬ್ಯಾಟ್ಸ್ ಮನ್ ಗಳ ಪಟ್ಟಿ ಇಲ್ಲಿದೆ. ಭಾರತದ ಆಟಗಾರರಲ್ಲಿ ವಿರಾಟ್ ಕೊಹ್ಲಿ ಈವರೆಗೆ ಪಾಕಿಸ್ತಾನದ ವಿರುದ್ಧ 357 ರನ್ ಗಳಿಸಿದ್ದಾರೆ. ಎಂ.ಎಸ್. ಧೋನಿ 306, ಸುರೇಶ್ ರೈನಾ 248 ರನ್ ಗಳಿಸಿದ್ದಾರೆ. ಇನ್ನು, ಪಾಕಿಸ್ತಾನದ ಪರವಾಗಿ, ನಾಸಿರ್ ಜೆಮ್ಷೆಡ್ 355 ರನ್, ಮೊಹಮ್ಮದ್ ಹಫೀಸ್ 347, ಮಿಸ್ಬಾ ಉಲ್ ಹಕ್ 216 ರನ್ ಗಳಿಸಿದ್ದಾರೆ.

ಘಟನುಘಟಿಗಳ ಮುಖಾಮುಖಿ
ಬೌಲಿಂಗ್ ನಲ್ಲಿ ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಜುನೈದ್ ಖಾನ್, ರವೀಂದ್ರ ಜಡೇಜಾ ಉತ್ತಮ ಸಾಧನೆ ತೋರಿದ್ದಾರೆ. ಪಾಕಿಸ್ತಾನದ ಪರವಾಗಿ, ಸಯೀದ್ ಅಜ್ಮಲ್ ಹೆಚ್ಚು ಮಿಂಚಿದ್ದಾರೆ.

2010ರಿಂದೀಚೆಗೆ ಭಾರತ ತಂಡ ಬಲಿಷ್ಠ
ಪಾಕಿಸ್ತಾನದೊಂದಿಗೆ ಈವರೆಗೆ ಆಡಿರುವ ಒಟ್ಟಾರೆ ಏಕದಿನ ಪಂದ್ಯಗಳಲ್ಲಿ ಭಾರತದ ಯಶಸ್ಸು ಕಡಿಮೆ ಇರಬಹುದು. ಆದರೆ, ಇತ್ತೀಚೆಗಿನ ವರ್ಷಗಳಲ್ಲಿ ಭಾರತ ಹೆಚ್ಚು ಯಶಸ್ಸು ಕಂಡಿದೆ. ಭಾನುವಾರದ ಪಂದ್ಯಕ್ಕೆ ಟೀಂ ಇಂಡಿಯಾ ಪರವಾಗಿರುವ ಏಕೈಕ ಆಶಾ ಕಿರಣ ಇದೊಂದೇ ಅಂಶ. 2010ರಿಂದೀಚೆಗೆ, ಭಾರತವು ಪಾಕಿಸ್ತಾನದ ವಿರುದ್ಧ ಶೇ. 66.67ರಷ್ಟು ಯಶಸ್ಸು ದಾಖಲಿಸಿದೆ. ಪ್ರತಿ ಮೂರರಲ್ಲಿ ಎರಡು ಪಂದ್ಯಗಳನ್ನು ಭಾರತ ಗೆದ್ದಿದೆ. 1974-1989ರ ಅವಧಿಯಲ್ಲಿ ಭಾರತದ ಯಶಸ್ಸು 33.33ರಷ್ಟಿತ್ತು. 1990-99ರ ಅವಧಿಯಲ್ಲಿ ಶೇ. 40ರಷ್ಟಾಯಿತು. 2000-09ರಿಂದ ಇದು ಶೇ. 45ರಷ್ಟಾಯಿತು.

ಭಾರತಕ್ಕೆ ಜಯವಾಗಲೆಂಬುದೇ ನಮ್ಮ ಹಾರೈಕೆ
ಕೊನೆಯದಾಗಿ ಹೇಳಬೇಕೆಂದರೆ, ಈ ಬಾರಿಯ ಬಾರತ ವಿರುದ್ಧದ ಪಂದ್ಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಕೆಲವಾರು ಆಟಗಾರರ ಅನುಪಸ್ಥಿತಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಕಣಕ್ಕಿಳಿಯುತ್ತಿದೆ. ಆದರೆ, ಹಾಗೆಂದ ಮಾತ್ರಕ್ಕೆ ಆ ತಂಡವನ್ನು ಕೊಹ್ಲಿ ಪಡೆ ಲಘುವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ, ಅವರಲ್ಲಿ ಅತ್ಯುತ್ತಮ ಬೌಲರ್ ಗಳ ದೊಡ್ಡ ಪಡೆಯೇ ಇದೆ. ಹಾಗಾಗಿ, ಪಾಕಿಸ್ತಾನವನ್ನು ಮಣಿಸಲು ಭಾರತ ಉತ್ತಮವಾಗಿ ಕೆಲಸ ಮಾಡಲೇಬೇಕಿದೆ.


Click it and Unblock the Notifications











