ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)202ರ ಚಾಂಪಿಯನ್ಸ್ ಟ್ರೋಫಿಯ ಗುಂಪು ಪಂದ್ಯಗಳಿಗೆ ಅಂಪೈರ್‌ಗಳನ್ನು ಪ್ರಕಟಿಸಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರೀ ಕುತೂಹಲ ಮೂಡಿಸಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೂ ಅಂಪೈರ್‌ಗಳನ್ನು ಘೋಷಣೆ ಮಾಡಲಾಗಿದೆ. ಪಾಲ್ ರೀಫೆಲ್ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ನೇಮಿಸಿರುವ ಬಗ್ಗೆ ಐಸಿಸಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಫೆಬ್ರವರಿ 23 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮೈಕೆಲ್ ಗೌಫ್ ಟಿವಿ ಅಂಪೈರ್ ಆಗಿದ್ದರೆ, ಆಡ್ರಿಯನ್ ಹೋಲ್ಡ್‌ಸ್ಟಾಕ್ ನಾಲ್ಕನೇ ಅಂಪೈರ್ ಆಗಿರುತ್ತಾರೆ. ಡೇವಿಡ್ ಬೂನ್ ಮ್ಯಾಚ್ ರೆಫರಿ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ ಎಲ್ಲಾ 12 ಲೀಗ್ ಪಂದ್ಯಗಳಿಗೆ ಅಧಿಕಾರಿಗಳನ್ನು ಪ್ರಕಟಿಸಿದ ಐಸಿಸಿ, ಫೆಬ್ರವರಿ 19 ರಂದು ಕರಾಚಿಯಲ್ಲಿ ನಡೆಯಲಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ ಮತ್ತು ಶರ್ಫುದ್ದೌಲಾ ಇಬ್ನೆ ಶಾಹಿದ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೋಯಲ್ ವಿಲ್ಸನ್ ಟಿವಿ ಅಂಪೈರ್, ಅಲೆಕ್ಸ್ ವಾರ್ಫ್ ನಾಲ್ಕನೇ ಅಂಪೈರ್ ಮತ್ತು ಆಂಡ್ರ್ಯೂ ಪೈಕ್ರಾಫ್ಟ್ ಮ್ಯಾಚ್ ರೆಫರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿರುವ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಪಂದ್ಯಕ್ಕೆ ಫೀಲ್ಡ್ ಅಂಪೈರ್‌ಗಳಾಗಿ ಆಡ್ರಿಯನ್ ಹೋಲ್ಡ್‌ಸ್ಟಾಕ್ ಮತ್ತು ಪಾಲ್ ರೀಫೆಲ್ಟಿವಿ ಅವರನ್ನು ನೇಮಿಸಲಾಗಿದೆ. ಟಿವಿ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್, ನಾಲ್ಕನೇ ಅಂಪೈರ್ ಮೈಕೆಲ್ ಗೌಫ್ ಮತ್ತು ಮ್ಯಾಚ್ ರೆಫರಿ ಡೇವಿಡ್ ಬೂನ್ ಆಗಿದ್ದಾರೆ.
ಮಾರ್ಚ್ 2 ರಂದು ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಗೌಫ್ ಮತ್ತು ಇಲ್ಲಿಂಗ್‌ವರ್ತ್ ಆನ್-ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಹೋಲ್ಡ್‌ಸ್ಟಾಕ್ ಟಿವಿ ಅಂಪೈರ್ ಮತ್ತು ರೀಫೆಲ್ ನಾಲ್ಕನೇ ಅಂಪೈರ್ ಆಗಿರುತ್ತಾರೆ. ಬೂನ್ ಮ್ಯಾಚ್ ರೆಫರಿಯಾಗಿರುತ್ತಾರೆ.
ಎರಡು ವಾರಗಳ ಕಾಲ ನಡೆಯುವ ಈ ಮೆಗಾ ಟೂರ್ನಿಯಲ್ಲಿ ಅಗ್ರ ಎಂಟು ತಂಡಗಳು ಪಾಕಿಸ್ತಾನ ಮತ್ತು ಯುಎಇಯಲ್ಲಿ 19 ದಿನಗಳಲ್ಲಿ 15 ಪಂದ್ಯಗಳನ್ನು ಆಡಲಿವೆ. ಗ್ರೂಪ್ ಎ ನಲ್ಲಿ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸ್ಥಾನ ಪಡೆದಿದ್ದರೆ, ಗ್ರೂಪ್ ಬಿ ನಲ್ಲಿ ಅಫ್ಘಾನಿಸ್ತಾನ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.