Champions Trophy 2025: ಪಾಕಿಸ್ತಾನಕ್ಕೆ ಐಸಿಸಿ ನಿಯೋಗ ಭೇಟಿ!; ಏನೆಲ್ಲಾ ಬದಲಾವಣೆಯಾಗಲಿವೆ?
2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಪಾಕಿಸ್ತಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಏಕೆಂದರೆ ಬಹುನಿರೀಕ್ಷಿತ ಐಸಿಸಿ ಟೂರ್ನಿಯನ್ನು ಪಾಕಿಸ್ತಾನ ಆಯೋಜನೆ ಮಾಡುತ್ತಿದೆ.
ಈ ಐಸಿಸಿ ಟೂರ್ನಿಯ ಮೊದಲ ಪಂದ್ಯವು 2025ರ ಫೆಬ್ರವರಿ 19 ರಂದು ನಡೆಯಲಿದ್ದು, ಫೈನಲ್ ಪಂದ್ಯಯನ್ನು ಮಾರ್ಚ್ 19 ಕ್ಕೆ ನಿಗದಿಪಡಿಸಲಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಹಲವು ವರ್ಷಗಳಿಂದ ಉತ್ತಮ ಸಂಬಂಧವಿಲ್ಲ. ಹೀಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ನಿರ್ಧಾರವಾಗಿಲ್ಲ.

ಪಾಕಿಸ್ತಾನಕ್ಕೆ ಹೋಗಲು ಭಾರತ ಸರ್ಕಾರ ಅನುಮತಿ ನೀಡಿದರೆ ಟೀಮ್ ಇಂಡಿಯಾ ಹೋಗಬಹುದು. ಯಾವುದೇ ತೊಂದರೆ ಇಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಸ್ಪಷ್ಟಪಡಿಸಿದೆ.
ಐಸಿಸಿ ನಿಯೋಗ ಭೇಟಿ
ಚಾಂಪಿಯನ್ಸ್ ಟ್ರೋಫಿ 2025ರ ಸಿದ್ಧತೆಗಳನ್ನು ಪರಿಶೀಲಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಈ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಆ ಬಳಿಕವಷ್ಟೇ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲು ಪಾಕಿಸ್ತಾನ ಗ್ರೀನ್ ಸಿಗ್ನಲ್ ಸಿಗಲಿದೆ. ಏಕೆಂದರೆ ನಿಯೋಗವು ಪಾಕಿಸ್ತಾನದಲ್ಲಿ ಟೂರ್ನಿಯ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಐಸಿಸಿಗೆ ವರದಿ ಸಲ್ಲಿಸಲಿದ್ದು, ಐಸಿಸಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಬಿಸಿಸಿಯ ಕಾರ್ಯದರ್ಶಿ ಜಯ್ ಶಾ ಅವರು ಡಿಸೆಂಬರ್ 1 ರಂದು ಐಸಿಸಿ ನೂತನ ಅಧ್ಯಕ್ಷರಾಗ ಅಧಿಕಾರವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಐಸಿಸಿ ನಿಯೋಗ ಪಾಕಿಸ್ತಾನಕ್ಕೆ ಹೋಗಲಿದೆ. ಮಾಧ್ಯಮ ವರದಿಗಳ ಪ್ರಕಾರ, ಐಸಿಸಿ ನೀಯೊಗ ಈಗಾಗಲೇ ಪಿಚ್ ಸಲಹೆಗಾರರು, ಭದ್ರತಾ ಮುಖ್ಯಸ್ಥರು ಮತ್ತು ಟೂರ್ನಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ಪ್ರತ್ಯೇಕವಾಗಿ ಮೂರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದೆ.
ಏನೆಲ್ಲಾ ಪರಿಶೀಲನೆ?
ಐಸಿಸಿ ನಿಯೋಗವು ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ತಿಳಿಯಲಿದೆ. ವೇಳಾಪಟ್ಟಿ, ಅಭ್ಯಾಸ ಪಂದ್ಯಗಳು, ಅಭ್ಯಾಸ ಸ್ಥಳಗಳು ಮತ್ತು ಟಿಕೆಟ್‌ಗಳಂತಹ ಅಗತ್ಯ ವಿವರಗಳ ಬಗ್ಗೆ ಪಿಸಿಬಿ ಅಧಿಕಾರಿಗಳ ಜೊತೆ ಐಸಿಸಿ ನಿಯೋಗ ಚರ್ಚಿಸಲಿದೆ.
ಪ್ರಸ್ತುತ ಪಾಕಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಉತ್ತಮವಾಗಿಲ್ಲ. ಅಲ್ಲಿನ ಅತಿದೊಡ್ಡ ರಾಜಕೀಯ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಈಗಿನ ಸರ್ಕಾರದ ಆಡಳಿತ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಏಕೆಂದರೆ ಆ ಪಕ್ಷದ ನಾಯಕ ಹಾಗು ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಅವರು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ.
ಏನಿಲ್ಲಾ ಬದಲಾವಣೆ?
ಐಸಿಸಿ ತನ್ನ ಟೂರ್ನಿಯನ್ನು ಆಯೋಜಿಸುತ್ತಿರುವ ದೇಶವು ಭದ್ರತೆಯ ದೃಷ್ಟಿಯಿಂದ ಉತ್ತಮವಾಗಿದೆಯೇ? ಅಥವಾ ಇಲ್ಲವೇ? ಎಂಬುದನ್ನು ಮೊದಲ ನೋಡುತ್ತದೆ. ಏಕೆಂದರೆ ಪಾಕಿಸ್ತಾನದಲ್ಲಿ ಆಟಗಾರರ ಸುರಕ್ಷತೆಯೇ ದೊಡ್ಡ ಸಮಸ್ಯೆಯಾಗಿದೆ. ಬಾಂಗ್ಲಾದೇಶ ರೀತಿಯಲ್ಲೇ ಪಾಕಿಸ್ತಾನದಲ್ಲಿ ಭದ್ರತೆಗೆ ಅಡ್ಡಿಯಾದರೆ, ಮಹಿಳಾ ಟಿ20 ವಿಶ್ವಕಪ್‌ನಂತೆ ಚಾಂಪಿಯನ್ಸ್ ಟ್ರೋಫಿ ಕೂಡ ಸ್ಥಳಾಂತರ ಮಾಡುವ ತಕ್ಷಣದ ನಿರ್ಧಾರವನ್ನು ಐಸಿಸಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಅರ್ಹತಾ ಪಡೆದ ತಂಡಗಳು
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಒಟ್ಟು ಎಂಟು ತಂಡಗಳು ಅರ್ಹತಾ ಪಡೆದಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ (ಆತಿಥೇಯ) ಟೂರ್ನಿಯಲ್ಲಿ ಭಾಗವಹಿಸಲು ಆರ್ಹತೆ ಪಡೆದಿದ್ದು, ಶ್ರೀಲಂಕಾ ತಂಡವು ಈ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications