Champions Trophy 2025: ಭಾರತದ ಪಂದ್ಯಗಳು ಪಾಕಿಸ್ತಾನದಿಂದ ದುಬೈಗೆ ಸ್ಥಳಾಂತರಗೊಳ್ಳುವ ಸಾಧ್ಯತೆ
ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ ವರದಿಯೊಂದು ಹೊರಬಿದ್ದಿದ್ದು, ಮುಂದಿನ ವರ್ಷ ನಡೆಯಲಿರುವ ಈ ಐಸಿಸಿ ಟೂರ್ನಿಯ ಭಾರತದ ಪಂದ್ಯಗಳು ಸ್ಥಳಾಂತರಗೊಳ್ಳವ ಸಾಧ್ಯತೆಯಿದೆ. ಭಾರತಕ್ಕೆ ಅನುಗುಣವಾಗಿ ತನ್ನ ಪಂದ್ಯಗಳ ಸ್ಥಳವನ್ನು ನಿರ್ಧರಿಸುವ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನವು ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಆತಿಥ್ಯ ವಹಿಸಿದೆ. ಈ ಐಸಿಸಿ ಟೂರ್ನಿಯನ್ನು ಯಶಸ್ವಿಗೊಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ತಯಾರಿಯಲ್ಲಿ ನಿರತವಾಗಿದೆ. ಆದರೆ ಪಾಕಿಸ್ತಾನಕ್ಕೆ ಭಾರತ ಟೂರ್ನಿ ಆಡಲು ಹೋಗುವುದು ಬಹುತೇಕ ಅನುಮಾನವಾಗಿದೆ. ಇದರ ಮಧ್ಯೆ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಬರಲಿದೆ ಎಂದು ಪಿಸಿಬಿ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಟೂರ್ನಿಯ ಫೈನಲ್ ಪಂದ್ಯದ ಸ್ಥಳವನ್ನು ಭಾರತದ ಪ್ರಕಾರ ನಿರ್ಧರಿಸಬಹುದು ಎಂದು ಹೇಳಲಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಗುಂಪು ಹಂತದ ಪಂದ್ಯಗಳ ಜೊತೆಗೆ ಒಂದು ವೇಳೆ ಫೈನಲ್‌ಗೆ ಅರ್ಹತೆ ಪಡೆದರೆ, ಅದರ ಪಂದ್ಯವನ್ನು ಪಾಕಿಸ್ತಾನದಿಂದ ಸ್ಥಳಾಂತರಿಸುವ ಸಾಧ್ಯತೆಯಿದೆ. ಫೈನಲ್ ಪಂದ್ಯವನ್ನು ಲಾಹೋರ್‌ನಿಂದ ದುಬೈಗೆ ಸ್ಥಳಾಂತರಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಮಾರ್ಚ್ 9 ರಂದು ಫೈನಲ್ ನಡೆಯಲಿರುವುದರಿಂದ ಪಂದ್ಯದ ಸ್ಥಳವನ್ನು ಖಚಿತಪಡಿಸಲು ಮಾರ್ಚ್ 6 ರವರೆಗೆ ಸಮಯ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದಲ್ಲದೆ, ಸೆಮಿಫೈನಲ್‌ಗಳಿಗೆ ಈ ನಿಯಮ ಅನ್ವಯಿಸಬಹುದು. ಭಾರತ ತನ್ನ ಪಂದ್ಯಗಳನ್ನು ಅಬುಧಾಬಿ ಮತ್ತು ಶಾರ್ಜಾ ಸ್ಟೇಡಿಯಂಗಳಲ್ಲಿ ಆಡುವ ನಿರೀಕ್ಷೆಯಿದೆ.
ಪಾಕಿಸ್ತಾನಕ್ಕೆ ದೊಡ್ಡ ಸವಾಲು
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಪಾಕಿಸ್ತಾನದ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿವೆ. ಈ ಟೂರ್ನಿಯೂ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ವರದಿಯಲ್ಲಿ ಹೇಳಿರುವುದು ನಿಜವಾದರೆ ಪಾಕಿಸ್ತಾನ ದೊಡ್ಡ ಸವಾಲನ್ನು ಎದುರಿಸಲಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೋಮವಾರ ನೀಡಿರುವ ಹೇಳಿಕೆಯಲ್ಲಿ, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿ ಭಾರತ ಸೇರಿದಂತೆ ಎಲ್ಲಾ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಕೊನೆಯದಾಗಿ 1996ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಭಾರತ ಮತ್ತು ಶ್ರೀಲಂಕಾ ಜೊತೆಗೆ ಪಾಕಿಸ್ತಾನವೂ ಆತಿಥ್ಯ ವಹಿಸಿತ್ತು. ಆ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯ ಆತಿಥ್ಯ ಪಡೆದಿರುವುದು ಇದೇ ಮೊದಲು. ಆದರೆ ಈ ಟೂರ್ನಿಯಲ್ಲಿ ಆಡಲು ಟೀಮ್ ಇಂಡಿಯಾ ಪಾಕಿಸ್ತಾನ ಹೋಗಲು ನಿರಾಕರಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications