IND vs PAK: ಟಾಸ್ ಸೋತು ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ ಪಡೆ
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ಪಂದ್ಯದಲ್ಲಿ ಟಾಸ್ ಸೋಲು ಮೂಲಕ ರೋಹಿತ್ ಶರ್ಮಾ ಪಡೆ ಬೇಡವಾದ ವಿಶ್ವ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು. ಭಾರತ ತಂಡ ಈಗ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಟಾಸ್ ಸೋತ ತಂಡವಾಗಿದೆ.
2025 ರ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಫೈಟ್ ಎಲ್ಲರ ಚಿತ್ತ ನೆಟ್ಟಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ಟಾಸ್ ನಡೆಯಿತು. ಈ ಪಂದ್ಯದಲ್ಲೂ ರೋಹಿತ್ ಶರ್ಮಾ ಮಹತ್ವದ ಟಾಸ್ ಗೆಲ್ಲುವಲ್ಲಿ ವಿಫಲರಾದರು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಸತತ ಹೆಚ್ಚು ಪಂದ್ಯಗಳನ್ನು ಸೋತ ತಂಡ ಎಂಬ ಬೇಡವಾದ ದಾಖಲೆಗೆ ರೋಹಿತ್ ಪಡೆ ಪಾತ್ರವಾಗಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಟಾಸ್ ಸೋತ ಹೆಗ್ಗಳಿಕೆ ಇದಕ್ಕೂ ಮೊದಲು ನೆದರ್‌ಲ್ಯಾಂಡ್ಸ್ ಹೆಸರಿನಲ್ಲಿತ್ತು. ಈ ತಂಡ ಸತತ 11 ಬಾರಿ ಟಾಸ್ ಸೋತಿದೆ. ಈಗ ಭಾರತ ಈ ದಾಖಲೆಯನ್ನು ಅಳಿಸಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಟಾಸ್ ಸೋಲು ತ್ತಿದ್ದಂತೆ 12ನೇ ಬಾರಿ ಟಾಸ್ ಸೋತ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟೀಮ್ ಇಂಡಿಯಾ ಕೊನೆಯ ಬಾರಿಗೆ ಟಾಸ್ ಗೆದಿದ್ದು ಯಾವಗಾ?
ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ಪಂದ್ಯದಲ್ಲಿ ಕೊನೆಯ ಬಾರಿಗೆ ಟಾಸ್ ಗೆದ್ದತ್ತು.
ಟಾಸ್ ಸೋಲಿ ಅಭಿಯಾನ ಆರಂಭವಾಗಿದ್ದು ಯಾವಾಗ?
2023 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಮೊದಲ ಟಾಸ್ ಸೋತಿತು. ಬಾಂಗ್ಲಾದೇಶ ವಿರುದ್ಧದ ಕಳೆದ ಪಂದ್ಯದಲ್ಲಿ ಭಾರತ ಟಾಸ್ ಸೋತಿತ್ತು. ಆದರೆ ಟಾಸ್ ಸೋತರೂ ಟೀಮ್ ಇಂಡಿಯಾ ಏನು ಮಾಡಬೇಕು ಎಂದು ಮಾಡಿದ್ದರೋ ಅದನ್ನೇ ಮಾಡುವ ಕಾರ್ಯ ಸಿಕ್ಕಿತು.
ಪಂದ್ಯದ ಚಿತ್ರಣ
ಇನ್ನು ಟಾಸ್ ಗೆದ್ದ ಪಾಕಿಸ್ತಾನ ತಂಡದ ಆರಂಭ ಉತ್ತಮವಾಗಿತ್ತು. ಆದರೆ ಸ್ಟಾರ್ ಆಟಗಾರ ಬಾಬರ್ ಅಜಮ್ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪಂದ್ಯದ ವೇಳೆ ಕೆಲವು ಕ್ಲಾಸಿಕ್ ಶಾಟ್‌ಗಳನ್ನು ಪ್ರಯೋಗಿಸಿದ ಬಾಬರ್ ಅಜಮ್ ಇನಿಂಗ್ಸ್ 23 ರನ್‌ಗಳಿಗೆ ಕೊನೆಯಾಯಿತು. ಇನ್ನು ಆರಂಭಿಕ ಇಮಾಮ್ ಉಲ್ ಹಕ್ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು. ಪಾಕ್ 10 ಓವರ್ ಒಳಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications