Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs PAK: ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಪತರುಗುಟ್ಟಿದೆ. ಪರಿಣಾಮ ಪಾಕಿಸ್ತಾನ 49.4 ಓವರ್‌ಗಳಲ್ಲಿ 10 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿದೆ. ಪಾಕಿಸ್ತಾನ ವಿರುದ್ಧ ಗೆಲ್ಲಲು ಭಾರತ 242 ರನ್‌ಗಳ ಗುರಿಯನ್ನು ತಲುಪಬೇಕಾಗಿದೆ. ಈ ಪಂದ್ಯದಲ್ಲಿ ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದು ಮಿಂಚಿದರು.

ಪಾಕಿಸ್ತಾನ ಪರ ಬಾಬರ್ ಅಜಮ್ ಮತ್ತು ಇಮಾಮ್ ಉಲ್ ಹಕ್ ಇನ್ನಿಂಗ್ಸ್ ಆರಂಭಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 41 ರನ್‌ಗಳನ್ನು ಸೇರಿಸಿದರು. ಭಾರತವು ತನ್ನ ಮೊದಲ ಯಶಸ್ಸನ್ನು ಹಾರ್ದಿಕ್ ಪಾಂಡ್ಯ ಮೂಲಕ ಗಳಿಸಿತು.

Champions Trophy 2025 Pakistan has set target of 242 runs for Team India

ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಬಾಬರ್ 23 ರನ್ ಗಳಿಸಿ ವಿಕೆಟ್ ಕೀಪಪ್‌ಗೆ ಕ್ಯಾಚ್ ನೀಡಿ ಔಟಾದರು. ಇದಾದ ನಂತರ, ಕುಲದೀಪ್ ಯಾದವ್ ಅವರ ಬೌಲಿಂಗ್‌ನಲ್ಲಿ ರನ್ ಕದಿಯಲು ಪ್ರಯತ್ನಿಸುತ್ತಿದ್ದಾಗ, ಅಕ್ಸರ್ ಪಟೇಲ್ ಅವರ ನೇರ ಹಿಟ್ ಥ್ರೋಗೆ ಇಮಾಮ್ 10 ರನ್ ಗಳಿಸಿ ರನೌಟ್ ಆದರು.

ಇದಾದ ನಂತರ ಒಂದಾದ ಸೌದ್ ಶಕೀಲ್ ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ ಮೂರನೇ ವಿಕೆಟ್‌ಗೆ 144 ಎಸೆತಗಳಲ್ಲಿ 104 ರನ್‌ಗಳ ಅದ್ಭುತ ಜೊತೆಯಾಟ ಆಡಿದರು. ರಿಜ್ವಾನ್ 46 ರನ್ ಗಳಿಸಿ ಅಕ್ಸರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸೌದ್ ಶಕೀಲ್ 62 ರನ್ ಗಳಿಸಿದ್ದಾಗ ಹಾರ್ದಿಕ್ ಎಸೆತದಲ್ಲಿ ಅಕ್ಸರ್ ಅವರಿಗೆ ಕ್ಯಾಚ್ ನೀಡಿ ಔಟಾದರು.

ಸ್ಪಿನ್ ದಾಳಿಗಿಳಿದ ಕುಲದೀಪ್ ಯಾದವ್ ಪಾಕಿಸ್ತಾನವನ್ನು ಕಾಡಿದರು. ಪಾಕಿಸ್ತಾನ ಒಂದರ ನಂತರ ಒಂದರಂತೆ ವಿಕೆಟ್‌ಗಳನ್ನು ಕಳೆದುಕೊಂಡಿತು. ತಯ್ಯಬ್ ತಾಹಿರ್ (4), ಸಲ್ಮಾನ್ ಅಘಾ (19) ಮತ್ತು ಶಾಹೀನ್ ಅಫ್ರಿದಿ (0) ಔಟಾದರು. ಕುಲದೀಪ್ ಯಾದವ್ ಸತತ ಎರಡು ಎಸೆತಗಳಲ್ಲಿ ಸಲ್ಮಾನ್ ಆಘಾ ಮತ್ತು ಶಾಹೀನ್ ಅಫ್ರಿದಿ ಅವರನ್ನು ಔಟ್ ಮಾಡಿದರು. ಬಳಕ ಖುಸ್ದಿಲ್ ಷಾ (38) ಕೆಳ ಕ್ರಮಾಂಕದಲ್ಲಿ ಪಾಕಿಸ್ತಾನದ ಪರವಾಗಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು.

ನಸೀಮ್ ಶಾ ಜೊತೆಗೂಡಿ ಖುಸ್ದಿಲ್ ಶಾ ಪಾಕಿಸ್ತಾನ ತಂಡದ ಮೊತ್ತವನ್ನು 220 ದಾಟಿಸಿದರು. 14 ರನ್ ಗಳಿಸಿದ್ದಾಗ ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ನಸೀಮ್ ಶಾ ಕ್ಯಾಚಿತ್ತು ಔಟಾದರು. ಹ್ಯಾರಿಸ್ ರೌಫ್ 8 ರನ್ ಗಳಿಸಿದ್ದಾಗ ರನ್ ಆಕ್ಸರ್ ಎಸೆತದಲ್ಲಿ ಕೆಎಲ್ ರಾಹುಲ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಪಾಕಿಸ್ತಾನ ಪರ ಖುಸ್ದಿಲ್ ಶಾ 38 ರನ್ ಮತ್ತು ಅಬ್ರಾರ್ ಅಹ್ಮದ್ 0 ರನ್ ಗಳಿಸಿದರು. ಇದರೊಂದಿಗೆ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ಆಲೌಟಾಯಿತು.

ಸಂಘಟಿತ ಬೌಲಿಂಗ್ ದಾಳಿ

ಟೀಮ್ ಇಂಡಿಯಾ ಪರ ಕುಲದೀಪ್ ಯಾದವ್ 9 ಓವರ್ ಗಳಲ್ಲಿ 40 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರೆ, ಹಾರ್ದಿಕ್ ಪಾಂಡ್ಯ 8 ಓವರ್‌ಗಳಲ್ಲಿ 31 ರನ್‌ಗಳಿಗೆ 2 ವಿಕೆಟ್ ಪಡೆದರು. ಈ ಇಬ್ಬರಲ್ಲದೆ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಹರ್ಷಿತ್ ರಾಣಾ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಒಂದೇ ಒಂದು ವಿಕೆಟ್ ಪಡೆಯಲಿಲ್ಲ.

Story first published: Sunday, February 23, 2025, 18:43 [IST]
Other articles published on Feb 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+