Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions trophy 2025: ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ ಭಾರತ; ಬಿಸಿಸಿಐ ಮುಂದೆ ವಿಶಿಷ್ಟ ಬೇಡಿಕೆ ಇಟ್ಟ ಪಿಸಿಬಿ

ಜುಲೈ 15 ಸೋಮವಾರ, ಮುಂದಿನ ವರ್ಷ ನಡೆಯಲಿರುವ 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಹೀಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಹೋಗಲಿದೆಯೇ ಅಥವಾ ಇಲ್ಲವೇ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ ಪಾಕಿಸ್ತಾನಕ್ಕೆ ಟೀಮ್‌ ಇಂಡಿಯಾ ಪ್ರವಾಸ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಆದರೆ, ಇದಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ) ಮುಂದೆ ವಿಶಿಷ್ಟ ಬೇಡಿಕೆಯನ್ನಟ್ಟಿದೆ.

champions trophy 2025 Pakistan made unique demand before BCCI

ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನಕ್ಕೆ ತೆರಳಲು ಭಾರತ ಸರ್ಕಾರ ಭದ್ರತಾ ಕಾರಣಗಳಿಗಾಗಿ ತಂಡಕ್ಕೆ ಅನುಮತಿ ನಿರಾಕರಿಸಿದೆ ಎಂಬುದಕ್ಕೆ ಲಿಖಿತ ಸಾಕ್ಷ್ಯವನ್ನು ಬಿಸಿಸಿಐ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಯಸಿದೆ. ಈ ಬಗ್ಗೆ ಪಿಸಿಬಿ ಮೂಲವೊಂದರಿಂದ ಮಾಹಿತಿ ಲಭ್ಯವಾಗಿದೆ.

2025ರಲ್ಲಿ ಫೆಬ್ರುವರಿ-ಮಾರ್ಚ್‌ನಲ್ಲಿ ಚಾಂಪಿಯನ್‌ ಟ್ರೋಫಿ ಟೂರ್ನಿಯನ್ನು ನಡೆಯಲಿರುವುದರಿಂದ ಆತಿಥೇಯ ಪಾಕಿಸ್ತಾನವು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕೆಂದು ಬಯಸಿದೆ. ಐಸಿಸಿಯ ವಾರ್ಷಿಕ ಸಮ್ಮೇಳನವು ಜುಲೈ 19 ರಂದು ಕೊಲಂಬೊದಲ್ಲಿ ನಡೆಯಲಿದೆ.

ಇದರಲ್ಲಿ 'ಹೈಬ್ರಿಡ್ ಮಾದರಿ' ಕುರಿತು ಚರ್ಚೆಯು ಅಜೆಂಡಾದಲ್ಲಿಲ್ಲ. ಆದರೆ ಇದರ ಅಡಿಯಲ್ಲಿ ಭಾರತ ತಂಡ ಯುಎಇಯಲ್ಲಿ ತನ್ನ ಪಂದ್ಯಗಳನ್ನು ಆಡಲು ಬಯಿಸಿದೆ.

ಪಿಸಿಬಿ ಮೂಲಗಳು, 'ಭಾರತ ಸರ್ಕಾರವು ಅನುಮತಿ ನೀಡದಿದ್ದರೆ ಅದನ್ನು ಲಿಖಿತವಾಗಿ ನೀಡಬೇಕಾಗುತ್ತದೆ ಮತ್ತು ಬಿಸಿಸಿಐ ತಕ್ಷಣವೇ ಆ ಪತ್ರವನ್ನು ಐಸಿಸಿಗೆ ನೀಡಬೇಕು' ಎಂದು ಹೇಳಿದೆ.

ಚಾಂಪಿಯನ್‌ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗುವ ತಂಡವನ್ನು ಐದು-ಆರು ತಿಂಗಳ ಮುಂಚಿತವಾಗಿ ಬಿಸಿಸಿಐ ಲಿಖಿತವಾಗಿ ಐಸಿಸಿಗೆ ತಿಳಿಸಬೇಕು. ಆದರೆ ಪಾಕಿಸ್ತಾನದಲ್ಲಿ ಆಡುವ ನಿರ್ಧಾರ ಸರ್ಕಾರದ್ದಾಗಿದೆ ಎಂದು ಬಿಸಿಸಿಐ ಯಾವಾಗಲೂ ಹೇಳುತ್ತಿದೆ. 2023ರ ಏಕದಿನ ಏಷ್ಯಾಕಪ್‌ನಲ್ಲಿಯೂ ಸಹ ಭಾರತದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಡಲಾಯಿತು.

ಪಿಸಿಬಿ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯ ಕರಡನ್ನು ಐಸಿಸಿಗೆ ಸಲ್ಲಿಸಿದೆ. ಇದರಲ್ಲಿ ಭಾರತದ ಎಲ್ಲಾ ಪಂದ್ಯಗಳು ಹಾಗು ಸೆಮಿಫೈನಲ್ ಮತ್ತು ಫೈನಲ್ ಲಾಹೋರ್‌ನಲ್ಲಿ ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮಾರ್ಚ್ 1 ರಂದು ನಡೆಯಲಿದೆ. ಪಂದ್ಯಾವಳಿಯು ಫೆಬ್ರವರಿ 19 ರಂದು ಕರಾಚಿಯಲ್ಲಿ ಪ್ರಾರಂಭವಾಗಲಿದೆ. ಫೈನಲ್ ಪಂದ್ಯ ಮಾರ್ಚ್ 9 ರಂದು ಲಾಹೋರ್‌ನಲ್ಲಿ ನಡೆಯಲಿದೆ. ಫೈನಲ್‌ ಪಂದ್ಯಕ್ಕಾಗಿ ಒಂದು ದಿನ ಮೀಸಲು ಇಡಲಾಗಿದೆ.

Story first published: Monday, July 15, 2024, 20:08 [IST]
Other articles published on Jul 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+