Champions Trophy 2025: ಐಸಿಸಿಗೆ ಸ್ಪಷ್ಟನೆ ನೀಡಲು ಮುಂದಾದ ಪಾಕಿಸ್ತಾನ ಮಾಡಿದ್ದೇನು?
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನದಲ್ಲಿ ಸಾಕಷ್ಟು ಗೊಂದಲಗಳಿವೆ. ಸ್ಟೇಡಿಯಂ ಕಾಮಗಾರಿ ವಿಳಂಬವಾದ ಕಾರಣ ಆತಿಥ್ಯವನ್ನು ಪಾಕಿಸ್ತಾನದಿಂದ ಕಸಿದುಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಬಗ್ಗೆ ಸ್ಪಷ್ಟನೆ ನೀಡಿದೆ. ಸ್ಟೇಡಿಯಂ ಕಾಮಗಾರಿ ವಿಳಂಬವಾಗಿರುವುದರಿಂದ ಚಾಂಪಿಯನ್ಸ್ ಟ್ರೋಫಿಯ ಉಳಿದ ಆತಿಥ್ಯವೂ ಪಾಕಿಸ್ತಾನದ ಕೈಯಿಂದ ಕೈತಪ್ಪಲಿದೆ ಎಂಬ ಊಹಾಪೋಹಗಳನ್ನು ಪಿಸಿಬಿ ತಳ್ಳಿಹಾಕಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಡಿಸೆಂಬರ್ 31 ರೊಳಗೆ ಎಲ್ಲಾ ಸ್ಟೇಡಿಯಂಗಳನ್ನು ಸಂಪೂರ್ಣವಾಗಿ ಸಿದ್ಧಪಡಿಸಬೇಕಾಗಿತ್ತು. ಆದರೆ ಈ ಐಸಿಸಿ ನೀಡಿದ ಗಡುವು ದಾಟಿದೆ. ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಿಗೆ ಆತಿಥ್ಯ ವಹಿಸುವ ಮೂರು ಸ್ಟೇಡಿಯಂಗಳಲ್ಲಿ ಇನ್ನೂ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ ನಡೆಯಲು ಸುಮಾರು ಒಂದು ತಿಂಗಳು ಬಾಕಿ ಇದ್ದು ಅದಕ್ಕೂ ಮುನ್ನ ಪಿಸಿಬಿ ಸ್ಟೇಡಿಯಂಗಳನ್ನು ರೆಡಿ ಮಾಡಬೇಕಾಗಿದೆ.

ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಲಾಹೋರ್‌ನ ಗಡಾಫಿ ಸ್ಟೇಡಿಯಂ, ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮತ್ತು ಕರಾಚಿಯ ನ್ಯಾಷನಲ್ ಬ್ಯಾಂಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪ್ರಸ್ತುತ ಅಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದೆ. ಇದರ ನಡುವೆಯೇ ಐಸಿಸಿಗೆ ಪಿಸಿಬಿ ಸ್ಪಷ್ಟನೆ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ನಿಗದಿತ ಸಮಯದಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಎಂಬ ಭರವಸೆಯನ್ನು ಪಿಸಿಬಿ ವ್ಯಕ್ತಪಡಿಸಿದೆ.
ಸ್ಪಷ್ಟನೆ
ಪಾಕಿಸ್ತಾನ ಫೆಬ್ರವರಿ 8 ರಿಂದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳೊಂದಿಗೆ ತ್ರಿಕೋನ ಸರಣಿಯನ್ನು ಆಡಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳು ಮುಲ್ತಾನ್‌ನಲ್ಲಿ ನಡೆಯಬೇಕಿತ್ತು. ಆದರೆ ಈಗ ಪಿಸಿಬಿ ಸರಣಿಯ ಪಂದ್ಯಗಳ್ನು ಲಾಹೋರ್ ಮತ್ತು ಕರಾಚಿಗೆ ಸ್ಥಳಾಂತರಿಸಿದೆ. ಪ್ರಸ್ತುತ ಎರಡೂ ಸ್ಟೇಡಿಯಂಗಳಲ್ಲಿಯೂ ನಿರ್ಮಾಣ ಕಾರ್ಯ ನಡೆಯುತ್ತಿದೆ. ತನ್ನನ್ನು ತಾನು ಸಾಬೀತುಪಡಿಸಲು ಪಿಸಿಬಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದಾದ ನಂತರ ಸ್ಟೇಡಿಯಂಗಳು ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳನ್ನು ಆಯೋಜಿಸಲಿವೆ. ಆದರೆ, ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ಟೂರ್ನಿ ಶಿಫ್ಟ್
ಒಂದು ವೇಳೆ ಐಸಿಸಿ ನೀಡಿರುವ ನಿಗದಿತ ಸಮಯದಲ್ಲಿ ಸ್ಟೇಡಿಯಂಗಳಲ್ಲಿ ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳದೇ ಹೋದರೆ ಅಥವಾ ಪಿಸಿಬಿ ಡೆಡ್‌ಲೈನ್‌ಗಳನ್ನು ತಪ್ಪಿಸಿಕೊಂಡರೆ ಚಾಂಪಿಯನ್ ಟ್ರೋಫಿಯ ಪಂದ್ಯಗಳು ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಇಡೀ ಟೂರ್ನಿಯೇ 2ನೇ ಪ್ರಶಸ್ತಸ್ಥಳದ ಪಟ್ಟಿಯಲ್ಲಿರುವ ಯುಎಇಗೆ ಶಿಫ್ಚ್ ಆಗಲಿದೆ. ಇದರ ನಡುವೆಯೇ ತ್ರಿಕೋನ ಸರಣಿಯನ್ನು ಲಾಹೋರ್ ಮತ್ತು ಕರಾಚಿಗೆ ಸ್ಥಳಾಂತರಿಸಲು ಪಿಸಿಬಿ ನಿರ್ಧರಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications