Champions Trophy 2025: ಇಂದಿನಿಂದ ಮಿನಿ ವಿಶ್ವಕಪ್ ಆರಂಭ: ಪಾಕಿಸ್ತಾನ, ನ್ಯೂಜಿಲೆಂಡ್ ಫೈಟ್
ಇಂದಿನಿಂದ ಪಾಕಿಸ್ತಾನದಲ್ಲಿ 9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಕರಾಚಿಯಲ್ಲಿ ಉದ್ಘಟನಾ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಗೆಲುವಿನ ನಗೆ ಬೀರುವ ಕನಸು ಕಾಣುತ್ತಿದೆ. "ಬಿ" ಗುಂಪಿನ ಪಂದ್ಯದಲ್ಲಿ ಯಾರ ಕೊರಳಿಗೆ ಗೆಲುವಿನ ಹಾರ ಸೇರುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಅಂಕಿ ಅಂಶಗಳ ಲೆಕ್ಕಾಚಾರವನ್ನು ನೋಡಿದಾಗ ಈ ಆಟದಲ್ಲಿ ಪಾಕಿಸ್ತಾನ ಕೈ ಮೇಲಾಗುತ್ತದೆ. ಉಭಯ ದೇಶಗಳ ನಡುವೆ ಒಟ್ಟು 118 ಪಂದ್ಯಗಳು ನಡೆದಿದ್ದು, ಪಾಕ್ 61 ಹಾಗೂ ನ್ಯೂಜಿಲೆಂಡ್ 53 ಪಂದ್ಯಗಳನ್ನು ಗೆದ್ದಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಅಂಕಿ ಅಂಶ ಅಮೋಘವಾಗಿವೆ. 2000, 2006, 2009ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ದೇಶಗಳು ಮುಖಾಮುಖಿ ಆಗಿದ್ದವು. ಈ ವೇಳೆ ನ್ಯೂಜಿಲೆಂಡ್ ಆಡಿದ ಮೂರು ಪಂದ್ಯಗಳನ್ನು ಗೆದ್ದ ಹಿರಿಮೆ ಹೊಂದಿದೆ. ಇತ್ತೀಚಿಗೆ ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಕಿವೀಸ್ ತಂಡ ಆತ್ಮ ವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ.

ಅಭಿಮಾನಿಗಳ ಬೆಂಬಲ
23 ವರ್ಷದ ಬಳಿಕ ಪಾಕ್ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ವೇಳೆ ಬಿಗ್ ಈವೆಂಟ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರಿಸಲು ಪಾಕ್ ಆಟಗಾರರು ಸಹ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ದು ಚಿತ್ತ ಕದ್ದಿದ್ದಾರೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಫಖರ್ ಜಮಾನ್ ಹಾಗೂ ಬಾಬರ್ ಅಜಮ್ ಅವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಅನುಭವ ಇದೆ. ಇವರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ತ್ರಿಕೋನ ಸರಣಿಯ ವೇಳೆ ಅಮೋಘ ಲಯವನ್ನು ಕಂಡುಕೊಂಡಿರುವ ನಾಯಕ ಮೊಹಮ್ಮದ್ ರಿಜ್ವಾನ್ ಹಾಗೂ ಉಪನಾಯಕ ಸಲ್ಮಾನ್ ಅಘಾ ಅವರು ಮಧ್ಯಮ ಕ್ರಮಾಂಕದ ಬೆನ್ನೆಲೆಬು. ಇವರಿಗೆ ಸೌದ್ ಶಕೀಲ್ ಉತ್ತಮ ಸಾಥ್ ನೀಡಿದ್ದೇ ಆದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು.
ತವರಿನ ಪಿಚ್‌ಗಳ ಮರ್ಮವನ್ನು ತಿಳಿದಿರುವ ಪಾಕ್ ಬೌಲರ್‌ಗಳಾದ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಬಿಗುವಿನ ದಾಳಿ ನಡೆಸಬೇಕಿದೆ. ಅಲ್ಲದೆ ಲೈನ್ ಹಾಗೂ ಲೆಂಥ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಕಾಡುವ ಅನಿವಾರ್ಯತೆ ಇದೆ.

ಸಂಭಾವ್ಯ ಪಾಕ್ ತಂಡ: ಫಖರ್ ಜಮಾನ್, ಬಾಬರ್ ಆಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ಕ್ಯಾಪ್ಟನ್ & ವಿಕೆಟ್ ಕೀಪರ್), ಸಲ್ಮಾನ್ ಅಘಾ, ತಯ್ಯಬ್ ತಾಹಿರ್, ಖುಷ್ದಿಲ್ ಶಾ, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
ಗೆಲುವಿನ ಆತ್ಮ ವಿಶ್ವಾಸ
ತ್ರಿಕೋನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ನ್ಯೂಜಿಲೆಂಡ್ ಆತ್ಮವಿಶ್ವಾಸದೊಂದಿಗೆ ಕಣಕ್ಕೆ ಇಳಿಯಲಿದೆ. ತ್ರಿಕೋನ ಸರಣಿಯ ವೇಳೆ ಗಾಯಕ್ಕೆ ತುತ್ತಾಗಿದ್ದ ರಚಿನ್ ರವೀಂದ್ರ ಚೇತರಿಸಿಕೊಂಡಿದ್ದು ಇವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಹುದು. ಈ ತಂಡದ ಬ್ಯಾಟಿಂಗ್ ವಿಭಾಗವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ. ಇವರಿಗೆ ಅನುಭವಿಗಳಾದ ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್ ಉತ್ತಮ ಸಾಥ್ ನೀಡಬೇಕಿದೆ.
ಕಿವೀಸ್ ಪರ ಬೌಲಿಂಗ್ ನೊಗವನ್ನು ವಿಲ್ ಒ'ರೂಕ್, ಜಾಕೋಬ್ ಡಫಿ ಹೊರುವ ಸಾಧ್ಯತೆ ಇದೆ. ಇವರಿಗೆ ಮೈಕೆಲ್ ಬ್ರೇಸ್‌ವೆಲ್, ಮ್ಯಾಟ್ ಹೆನ್ರಿ ಉತ್ತಮ ಸಾಥ್ ನೀಡಿದರೆ ಗೆಲುವು ಸಾಧ್ಯ.
ನ್ಯೂಜಿಲೆಂಡ್ ಸಂಭಾವ್ಯ ತಂಡ: ರಚಿನ್ ರವೀಂದ್ರ/ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಜಾಕೋಬ್ ಡಫಿ, ವಿಲ್ ಒ'ರೂಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications