2025ರ ಚಾಂಪಿಯನ್ಸ್ ಟ್ರೋಫಿ ಅರ್ಹತೆ ನಿರ್ಧರಿಸಲಿದೆ 2023ರ ಏಕದಿನ ವಿಶ್ವಕಪ್; ಹೊರಬೀಳುವ ಭೀತಿಯಲ್ಲಿ ಇಂಗ್ಲೆಂಡ್!
ಸದ್ಯ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಲ್ಲಿಯವರೆಗೆ 29 ಪಂದ್ಯಗಳನ್ನು ಆಡಲಾಗಿದೆ. ಇಲ್ಲಿ ಹತ್ತು ತಂಡಗಳು ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿಯಲು ಪ್ರಯತ್ನ ಮೀರಿ ಪ್ರದರ್ಶನ ನೀಡುತ್ತಿವೆ.
ಆದಾಗ್ಯೂ, ಪ್ರತಿಷ್ಟಿತ ಏಕದಿನ ವಿಶ್ವಕಪ್ ಟ್ರೋಫಿಯ ಹೊರತಾಗಿ, 2025ರ ಚಾಂಪಿಯನ್ ಟ್ರೋಫಿಯಲ್ಲಿ ಭಾಗವಹಿಸುವ ತಂಡಗಳು ಈಗ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯು ನಿರ್ಧರಿಸಲ್ಪಡುವ ಕಾರಣ, ಕ್ರಿಕೆಟ್ ಸಂಭ್ರಮದಲ್ಲಿ ಇನ್ನೂ ಹೆಚ್ಚಿನ ವಿಷಯ ಅಡಗಿದೆ.

ಗಮನಾರ್ಹವೆಂದರೆ, ಸದ್ಯ ನಡೆಯುತ್ತಿರುವ ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ತಂಡಗಳು ಆತಿಥೇಯ ಪಾಕಿಸ್ತಾನದೊಂದಿಗೆ ಚಾಂಪಿಯನ್ಸ್ ಟ್ರೋಫಿಗೆ ನೇರ ಅರ್ಹತೆ ಪಡೆಯುತ್ತವೆ. ವರದಿಗಳ ಪ್ರಕಾರ, ಟೂರ್ನಿಯ ಅರ್ಹತೆಯ ಸನ್ನಿವೇಶವನ್ನು 2021ರಲ್ಲಿ ಐಸಿಸಿ ಮಂಡಳಿಯು ಅಂತಿಮಗೊಳಿಸಿದೆ.
ಆದಾಗ್ಯೂ, ಇಎಸ್‌ಪಿಎನ್ ಕ್ರಿಕ್‌ಇನ್ಫೋ ಪ್ರಕಾರ, ಮುಂದಿನ ಐಸಿಸಿ ಏಕದಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಅರ್ಹತೆಯ ಸನ್ನಿವೇಶದ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ ಹಲವಾರು ಕ್ರಿಕೆಟ್ ಮಂಡಳಿಗಳಿಗೆ ಈ ಬೆಳವಣಿಗೆಯು ಆಶ್ಚರ್ಯವನ್ನುಂಟು ಮಾಡಿದೆ.
ಮತ್ತೊಂದು ಐಸಿಸಿ ಪಂದ್ಯಾವಳಿಗೆ ಅರ್ಹತೆ ಕಳೆದುಕೊಳ್ಳುವ ಅಪಾಯದಲ್ಲಿರುವ ಪ್ರಮುಖ ತಂಡಗಳಲ್ಲಿ ಒಂದಾಗಿರುವ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಆಡಿದ ಆರು ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಹೀಗಾಗಿ, ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು 2023ರ ಐಸಿಸಿ ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಏಕೆಂದರೆ ಅವರು ತಮ್ಮ ಮರ್ಯಾದೆ ಉಳಿಸಲು ಮತ್ತು ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಸ್ಥಾನವನ್ನು ಗಳಿಸಲು ಎದುರು ನೋಡುತ್ತಿದೆ.
ಭಾರತ ವಿರುದ್ಧ ಸೋತ ನಂತರ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ, ನೆದರ್ಲ್ಯಾಂಡ್ಸ್ ಮತ್ತು ಪಾಕಿಸ್ತಾನದ ವಿರುದ್ಧ ಉಳಿದಿರುವ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆಲ್ಲಬೇಕಿದೆ ಮತ್ತು ಅಂಕಪಟ್ಟಿಯಲ್ಲಿ ಅಂತಿಮ ಏಳು ಸ್ಥಾನದೊಳಗೆ ಪ್ರವೇಶಿಸಬೇಕಿದೆ.
2013, 2017ರಲ್ಲಿ ಏಕದಿನ ಶ್ರೇಯಾಂಕಗಳು ಚಾಂಪಿಯನ್ಸ್ ಟ್ರೋಫಿ ಅರ್ಹತೆ ನಿರ್ಧರಿಸಿದವು
ಈ ಮಧ್ಯೆ, ಪ್ರಸ್ತುತ ಚಾಂಪಿಯನ್ಸ್ ಟ್ರೋಫಿ ಅರ್ಹತಾ ಸನ್ನಿವೇಶವು 2013 ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯ ಹಿಂದಿನ ಎರಡು ಆವೃತ್ತಿಗಳಿಗೆ ಬಳಸಲಾದ ಸನ್ನಿವೇಶಕ್ಕಿಂತ ಭಿನ್ನವಾಗಿದೆ.
ಹಿಂದಿನ ಎರಡು ಆವೃತ್ತಿಗಳಿಗೆ ಕಟ್-ಆಫ್ ದಿನಾಂಕದಂದು ಐಸಿಸಿ ಏಕದಿನ ಶ್ರೇಯಾಂಕದ ಮೊದಲ ಎಂಟು ಸ್ಥಾನಗಳನ್ನು ಗಳಿಸಿದ ತಂಡಗಳು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ನೇರ ಅರ್ಹತೆಯನ್ನು ಗಳಿಸಿದ್ದವು.
2017ರ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ ಪಾಕಿಸ್ತಾನ ತಂಡ ಪ್ರಸ್ತುತ ಚಾಂಪಿಯನ್ಸ್ ಟ್ರೋಫಿಯನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications