For Quick Alerts
ALLOW NOTIFICATIONS  
For Daily Alerts
 

AFG vs AUS: ಆಫ್ಘಾನ್‌, ಆಸ್ಟ್ರೇಲಿಯಾ ಪಂದ್ಯ ರದ್ದು: ಸ್ಮಿತ್‌ ಪಡೆ ಸೆಮೀಸ್‌ಗೆ

ಚಾಂಪಿಯನ್ಸ್ ಟ್ರೋಫಿ "ಬಿ" ಗುಂಪಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಲೀಗ್‌ ಹಂತದ ಪಂದ್ಯ ಮಳೆಗೆ ಹಾನಿಯಾಗಿದೆ. ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ 1 ವಿಕೆಟ್‌ಗೆ 109 ರನ್‌ ಸಿಡಿಸಿದ್ದಾಗ ಮಳೆ ಜೋರಾಯಿತು. ಪರಿಣಾಮ ಪಂದ್ಯವನ್ನು ನಿಲ್ಲಿಸಲಾಯಿತು. ಕೊನೆಗೆ ಪಂದ್ಯದ ನಿಗದಿತ ಸಮಯದೊಳಗೆ ಮಳೆ ನಿಲ್ಲದೇ ಇದ್ದಾಗ ಪಂದ್ಯವನ್ನು ರದ್ದಾಗಿಸಿತು. ಪರಿಣಾಮ ಉಭಯ ತಂಡಗಳಿಗೂ ತಲಾ ಒಂದು ಪಾಯಿಂಟ್‌ಗಳನ್ನು ನೀಡಲಾಯಿತು. ಅಫ್ಘಾನಿಸ್ತಾನ ಸದ್ಯ ಎರಡನೇ ಸ್ಥಾನದಲ್ಲಿದೆ.

ಶನಿವಾರ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡದ ಪಂದ್ಯಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಸುಲಭಾವಾಗಿ ಸೆಮಿಫೈನಲ್‌ ಹಂತವನ್ನು ತಲುಪುತ್ತದೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧ ಸೋಲು ಕಂಡಲ್ಲಿ ರನ್‌ ರೆಟ್‌ ನಿರ್ಣಾಯಕವಾಗಲಿದೆ. ಸದ್ಯ ದಕ್ಷಿಣ ಆಫ್ರಿಕಾ ಭರ್ಜರಿ ರನ್‌ ರೇಟ್‌ ಹೊಂದಿದೆ. ಆದರೆ ನಾಳೆಯ ಪಂದ್ಯ ಮುಗಿದ ಬಳಿಕದ ರನ್‌ ರೇಟ್‌ ಮಹತ್ವ ಪಡೆಯುತ್ತದೆ. ಆಸ್ಟ್ರೇಲಿಯಾ 4 ಅಂಕಗಳೊಂದಿಗೆ ಸೆಮಿಫೈನಲ್ ಹಂತವನ್ನು ತಲುಪಿದೆ.

Champions Trophy 2025 Rain Forces Abandonment of Afghanistan vs Australia Match

ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾ ತಂಡದ ಆರಂಭ ಕಳಪೆಯಾಗಿತ್ತು. ರಹಮತ್ತುಲ್ಲಾ ಗರ್ಬಾಜ್‌ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದರು. ಎರಡನೇ ವಿಕೆಟ್‌ಗೆ ಕಳೆದ ಪಂದ್ಯದ ಶತಕ ವೀಕರ್ ಇಬ್ರಾಹಿಂ ಜರ್ದಾನ್‌ ಹಾಗೂ ಸೆಡಿಕುಲ್ಲಾ ಅಟಲ್ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. 2ನೇ ವಿಕೆಟ್‌ಗೆ ಈ ಜೋಡಿ 76 ಎಸೆತಗಳಲ್ಲಿ 67 ರನ್‌ ಸೇರಿಸಿತು. ಇಬ್ರಾಹಿಂ ಜರ್ದಾನ್‌ 22 ರನ್‌ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ರಹಮತ್ ಶಾ 12 ರನ್‌ ಸಿಡಿಸಿ ನಿರಾಸೆ ಅನುಭವಿಸಿದರು.

ಉತ್ತಮ ಜೊತೆಯಾಟ

ಆರನೇ ವಿಕೆಟ್‌ಗೆ ಹಶ್ಮತುಲ್ಲಾ ಶಾಹಿದಿ (20) ಹಾಗೂ ಸೇದಿಕುಲ್ಲಾ ಅಟಲ್ ಜೋಡಿ ಉತ್ತಮ ಜೊತೆಯಾಟ ನೀಡಿತು. ಈ ಜೋಡಿ 78 ಎಸೆತಗಳಲ್ಲಿ 68 ರನ್‌ ಸಿಡಿಸಿತು. ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಸೇದಿಕುಲ್ಲಾ ಅಟಲ್ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ 85 ರನ್‌ ಸಿಡಿಸಿ ಔಟ್ ಆದರು.

Champions Trophy 2025 Rain Forces Abandonment of Afghanistan vs Australia Match

ಮಧ್ಯಮ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್ಜೈ ಅಬ್ಬರಿಸಿದರು. ಇವರು 1 ಬೌಂಡರಿ, 5 ಸಿಕ್ಸರ್ ಸಹಾಯದಿಂದ 67 ರನ್‌ ಸಿಡಿಸಿದರು. ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 273 ರನ್‌ ಸೇರಿಸಿತು.

ಆಸ್ಟ್ರೇಲಿಯಾ ಪರ ವೇಗಿ ಬೆನ್ ದ್ವಾರ್ಶುಯಿಸ್ 3 ಹಾಗೂ ಸ್ಪೆನ್ಸರ್ ಜಾನ್ಸನ್, ಆಡಂ ಜಂಪಾ ತಲಾ ಎರಡು ವಿಕೆಟ್‌ ಕಬಳಿಸಿದರು.

ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯ ಆರಂಭ ಉತ್ತಮವಾಗಿತ್ತು. ಮ್ಯಾಥ್ಯೂ ಶಾರ್ಟ್‌ (20) ಹಾಗೂ ಟ್ರಾವಿಸ್ ಹೆಡ್‌ (ಅಜೇಯ 59) ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು. ಈ ಜೋಡಿ ತಂಡಕ್ಕೆ 44 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಹೆಡ್‌ ಜೊತೆಗೂಡಿ ಇನಿಂಗ್ಸ್‌ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಸ್ಟೀವನ್‌ ಸ್ಮಿತ್ (ಅಜೇಯ 19) ಉತ್ತಮವಾಗಿ ಆಡುತ್ತಿದ್ದರು. ಆದರೆ ಇದೇ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದು ಗೊಳಿಸಲಾಯಿತು.

Story first published: Friday, February 28, 2025, 22:58 [IST]
Other articles published on Feb 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+