Champions Trophy 2025: ಚಾಂಪಿಯನ್ಸ್ ಟ್ರೋಫಿಯಲ್ಲಿ ನೋಡಲೇ ಬೇಕಾದ ಮೂರು ಪಂದ್ಯಗಳು
ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯ ನಡೆಯಲಿದೆ. ಈ ಐಸಿಸಿ ಮೆಗಾ ಟೂರ್ನಿಯ ಮೇಲೆ ವಿಶ್ವದ ಚಿತ್ತ ನೆಟ್ಟಿದೆ. ಏಳು ವರ್ಷಗಳ ಮೇಲೆ ನಡೆಯುತ್ತಿರುವ ಟೂರ್ನಿ ಕುತೂಹಲ ಹೆಚ್ಚಿಸಿದೆ. ಟೂರ್ನಿಯಲ್ಲಿ ಒಟ್ಟಾರೆ 15 ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿವೆ. ಇದೇ ಮೊದಲ ಬಾರಿಗೆ ಟೂರ್ನಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಭಾರತವನ್ನು ಹೊರತು ಪಡಿಸಿದರೆ ಉಳಿದ ಎಲ್ಲ ದೇಶಗಳು ಪಾಕ್‌ನಲ್ಲಿ ಪಂದ್ಯ ಆಡಲಿವೆ.
ಭಾರತ ಪಾಕಿಸ್ತಾನ ಪ್ರವಾಸ ಬೆಳೆಸುತ್ತಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಹಲವು ಪಂದ್ಯಗಳ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಆದರೆ ಈ ಮೂರು ಪಂದ್ಯಗಳನ್ನು ಮಾತ್ರ ವಿಶ್ವವೇ ಎದುರು ನೋಡುತ್ತಿದೆ. ಆ ಪಂದ್ಯಗಳು ಯಾವವು? ಎಂಬ ಬಗ್ಗೆ ವರದಿ ಇಲ್ಲಿದೆ.

ಭಾರತ v/s ಪಾಕಿಸ್ತಾನ
ನಾಕೌಟ್ ಸ್ಟೇಜ್‌ಗೂ ಮೊದಲೇ ಲೀಗ್ ಹಂತದಲ್ಲಿ ಹೈ ವೋಲ್ಟೇಜ್ ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳು ಟೂರ್ನಿಯ ಚಿತ್ತವನ್ನು ಕದ್ದಿವೆ. ಈ ರೋಚಕ ಪಂದ್ಯಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕ್ಲ್ಯಾಶ್‌ಗೂ ಹೆಚ್ಚಿನ ಮಹತ್ವವಿದೆ. ಉಭಯ ತಂಡಗಳು ದುಬೈನಲ್ಲಿ ಫೆ.23 ರಂದು ಕಾದಾಟ ನಡೆಸಲಿವೆ. ಈಗಾಗಲೇ ಈ ಪಂದ್ಯಕ್ಕಾಗಿ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ.
ಇತ್ತೀಚಿನ ದಿನಗಳ ಪ್ರದರ್ಶನವನ್ನು ನೋಡಿದರೆ ಭಾರತದ ಕೈ ಮೇಲಾಗುತ್ತಿದೆ. ಐಸಿಸಿ ಈವೇಂಟ್‌ಗಳಲ್ಲಿ ಟೀಮ್ ಇಂಡಿಯಾ ಉತ್ತಮ ಅಂಕಿ ಅಂಶ ಹೊಂದಿದೆ. ಉಭಯ ದೇಶಗಳು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕೊನೆಯದಾಗಿ ಏಕದಿನ ಫಾರ್ಮೆಟ್‌ನಲ್ಲಿ ಆಡಿದ್ದವು. ಆದರೆ 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕ್ ಭಾರತವನ್ನು ಸೋಲಿಸಿತ್ತು. ಹೀಗಾಗಿ ಈ ಬಾರಿ ಸೇಡಿ ತೇರಿಸಿಕೊಳ್ಳುವ ಕಾತುರದಲ್ಲಿದೆ.
ಇಂಗ್ಲೆಂಡ್ v/s ಆಸ್ಟ್ರೇಲಿಯಾ
ಭಾರತ ಹಾಗೂ ಪಾಕ್ ನಡುವಿನ ಕಾಳಗ ಹೇಗೆ ವಿಶ್ವದ ಚಿತ್ತವನ್ನು ಕದ್ದಿದೆಯೋ ಹಾಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದ ಫೈಟ್ ಸಹ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಈ ಉಭಯ ತಂಡಗಳು ನಡುವಿನ ಕಾದಾಟ ಫೆ.22 ರಂದು ನಡೆಯಲಿದೆ. ಕಳೆದ ಬಾರಿ ಚಾಂಪಿಯನ್ಸ್ ಟ್ರೋಫಿನಲ್ಲಿ ಇಂಗ್ಲೆಂಡ್ 40 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಹೀಗಾಗಿ ಈ ಬಾರಿ ಆಸೀಸ್ ತನ್ನ ಕ್ಷಮತೆಯನ್ನು ಬಳಸಿ ಗೆಲ್ಲುವ ಪ್ಲ್ಯಾನ್ ಮಾಡಿಕೊಂಡಿದೆ.

ಅಫ್ಘಾನಿಸ್ತಾನ v/s ದಕ್ಷಿಣ ಆಫ್ರಿಕಾ
ಅಫ್ಘಾನಿಸ್ತಾನ ಇದೇ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಆಡಲು ಸಿದ್ಧವಾಗಿದೆ. ಈ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಇಳಿದಾಗ ನಿಶ್ಚಿತವಾಗಿ ಎಲ್ಲರ ಗಮನ ಸೆಳೆಯುತ್ತದೆ. ಅದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಆಫ್ಘಾನಿಸ್ತಾನ ನೀಡಿರುವ ಪ್ರದರ್ಶನ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅಫ್ಘಾನ್ ಅಮೋಘ ಆಟವನ್ನು ಆಡಿ ಸೈ ಎನಿಸಿಕೊಂಡಿದೆ. ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಆಡಿದ ರೀತಿಗೆ ವಿಶ್ವವೇ ಮೆಚ್ಚಿಗೆ ವ್ಯಕ್ತ ಪಡಿಸಿದೆ. ಇನ್ನು 2023ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಟಫ್ ಫೈಟ್ ನೀಡಿತ್ತು. ಹೀಗಾಗಿ ಈ ಪಂದ್ಯದ ಮೇಲೂ ಎಲ್ಲರ ದೃಷ್ಟಿ ನೆಟ್ಟಿರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications