Champions Trophy: ಪುಷ್ಪಾ-2 ಚಿತ್ರದ ಟಿಕೆಟ್‌ಗಿಂತ, ಟಿಕೆಟ್ ದರ ಕಡಿಮೆ: ಅಭಿಮಾನಿಗಳಿಗೆ ಸುವರ್ಣ ಅವಕಾಶ
ಭಾರತದಲ್ಲಿ ಇತ್ತೀಚಿಗೆ ಧೂಳೆಬ್ಬಿಸಿದ ಚಿತ್ರಗಳಲ್ಲಿ ಪುಷ್ಪಾ-2 ಸಹ ಒಂದು. ಈ ಚಿತ್ರದ ಟಿಕೆಟ್ ದರಗಳ ಎಲ್ಲರ ಹುಬ್ಬೇರಿಸಿದ್ದವು. ಸುಮಾರು 3 ಗಂಟೆ 15 ನಿಮಿಷ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕ್ಷಮತೆ ಹೊಂದಿದ್ದ ಫಿಲ್ಮ್‌ಗೆ, ದೇಶದಲ್ಲಿ ಒಂದೊಂದು ಚಿತ್ರ ಮಂದಿರಗಳಲ್ಲಿ ಒಂದೊಂದು ರೇಟ್. ಈ ಫಿಲ್ಮ್ ನೋಡಲೇ ಬೇಕು ಎಂದು ಅದೆಷ್ಟೋ ಜನ ನೂರಾರು ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಕನಿಷ್ಠ 6 ಗಂಟೆ ಮನೋರಂಜನೆ ನೀಡಲಿರುವ ಕ್ರಿಕೆಟ್ ದರಗಳು, ಪುಷ್ಪಾ 2 ಚಿತ್ರಗಳಿಗಿಂತಲೂ ಕಡಿಮೆ.
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಮೆಗಾ ಟೂರ್ನಿಯ ಪಂದ್ಯಗಳನ್ನು ಸ್ಟೇಡಿಯಂನಲ್ಲಿ ವೀಕ್ಷಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (ಪಿಸಿಬಿ) ಟಿಕೆಟ್ ದರಗಳನ್ನು ನಿಗದಿಪಡಿಸಿದೆ. ಪಿಸಿಬಿಯೂ ಒಂದು ಟಿಕೆಟ್‌ನ ಕನಿಷ್ಠ ಬೆಲೆಯನ್ನು ಒಂದು ಸಾವಿರ ಪಾಕಿಸ್ತಾನ ರೂಪಾಯಿ ಎಂದು ನಿಗದಿಪಡಿಸಿದೆ. ಇದು ಭಾರತದ ಕರೆನ್ಸಿಯಲ್ಲಿ 310 ರೂಪಾಯಿ ಆಗಿದೆ.

ಪಿಸಿಬಿ ಪ್ರಕಟಿಸಿರುವ ಟಿಕೆಟ್ ದರವು ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ಮಾತ್ರ ಅನ್ವಯವಾಗಲಿದೆ. ಆದರೆ, ಭಾರತ ಆಡಲಿರುವ ತಟಸ್ಥ ಸ್ಥಳಕ್ಕೆ ಈ ಟಿಕೆಟ್ ದರ ಅನ್ವಯಿಸುವುದಿಲ್ಲ. ಚಾಂಪಿಯನ್ ಟ್ರೋಫಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.
ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಪಂದ್ಯಗಳಿಗೆ 2000 ಪಿಕೆಆರ್ (620 ರೂ.) ಹಾಗು ಸೆಮಿಫೈನಲ್ ಪಂದ್ಯಕ್ಕೆ 2500 ಪಿಕೆಆರ್ (776 ರೂ.) ದರವನ್ನು ಪಿಸಿಬಿ ನಿಗದಿಪಡಿಸಿದೆ. ಇದರ ಜೊತೆಗೆ ವಿಐಪ ಟಿಕೆಟ್‌ಗಳು ಸಹಾ ಲಭ್ಯವಿರಲಿವೆ. ಈ ಟಿಕೆಟ್‌ಗಳ ಬೆಲೆ 12 ಸಾವಿರ ಪಿಕೆಆರ್ (3726 ರೂ.) ಆದರೆ, ಸೆಮಿಫೈನಲ್ ಪಂದ್ಯವನ್ನು ವೀಕ್ಷಿಸಲು ಟಿಕೆಟ್ ಒಂದರ ಬೆಲೆಯೂ 25 ಸಾವಿರ ಪಿಕೆಆರ್ (7764 ರೂ.) ನಿಗದಿಪಡಿಸಲಾಗಿದೆ.
ಕರಾಚಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಪ್ರೀಮಿಯಂ ಟಿಕೆಟ್ ದರವು 3500 ಪಿಕೆಆರ್ (1086 ರೂ.) ಆಗಿದೆ. ಇನ್ನೂ ಲಾಹೋರ್‌ನಲ್ಲಿ ನಡೆಯಲಿರುವ ಪಂದ್ಯಗಳ ವೀಕ್ಷಣೆಗೆ ಒಂದು ಟಿಕೆಟ್ ಬೆಲೆ 5000 ಪಿಕೆಆರ್ (1550 ರೂ.) ಹಾಗು ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಬೆಲೆ 7000 ಪಿಕೆಆರ್ ನಿಗದಿಪಡಿಸಲಾಗಿದೆ.
ಪಿಸಿಬಿ ಒಟ್ಟು ಚಾಂಪಿಯನ್ ಟ್ರೋಫಿಯ 18 ಸಾವಿರ ಸಾಮಾನ್ಯ ಟಿಕೆಟ್‌ಗಳನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ ಒಬ್ಬ ವ್ಯಕ್ತಿ ಎಷ್ಟು ಟಿಕೆಟ್ ಖರೀದಿಸಬಹುದು. ಸ್ಟೇಡಿಯಂ ಬೂತ್‌ಗಳಲ್ಲೇ ಟಿಕೆಟ್ ಪಡೆಯಬೇಕೇ? ಅಥವಾ ಆನ್‌ಲೈನ್ ಮೂಲಕ ಟಿಕೆಟ್ ಖರಿದೀಸಬೇಕೇ? ಎಂಬುದುರ ಬಗ್ಗೆ ಪಿಸಿಬಿ ಮಾಹಿತಿಯನ್ನು ನೀಡಿಲ್ಲ.
ಸುವರ್ಣ ಅವಕಾಶ
ಅತ್ಯಂತ ಕಡಿಮೆ ದರದಲ್ಲಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳ ಟಿಕೆಟ್‌ಗಳನ್ನು ಪಾಕಿಸ್ತಾನ ಮಾರಾಟಕ್ಕೆ ಇಡುವ ಮೂಲಕ ಸುದ್ದಿಯಾಗಿದೆ. ಕ್ರಿಕೆಟ್ ಅಭಿಮಾನಿಗಳನ್ನು ಪಾಕಿಸ್ತಾನ ಕಡೆ ಸೆಳೆಯಲು ಟಿಕೆಟ್ ದರವನ್ನು ಪಿಸಿಬಿ ಕಡಿಮೆ ಮಾಡಿದೆ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಭಾರತದಿಂದ ಎಷ್ಟು ಜನರು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಪಾಕಿಸ್ತಾನಕ್ಕೆ ಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕಳೆದ ಬಾರಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟಿಕೆಟ್ ದರ ಹೆಚ್ಚಿತ್ತು. ಆದರೂ ಸ್ಟೇಡಿಯಂ ತುಂಬೆಲ್ಲಾ ಕ್ರಿಕೆಟ್ ಪ್ರೇಕ್ಷಕರು ಕಾಣಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications