Champions Trophy 2025: ಇದೇ ಅಂಗಳದಲ್ಲಿ ನಡೆಯಲಿದೆ ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್
ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲಾಗಿದೆ. ಬಹು ದಿನಗಳ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಿಯನ್ನು ಆಯೋಜಿಸುತ್ತಿದೆ. ಆದರೆ ಭಾರತ ಈ ಟೂರ್ನಿಗೆ ಪಾಕ್‌ಗೆ ಪ್ರವಾಸವನ್ನು ಬೆಳೆಸುವುದಿಲ್ಲ ಎಂದು ತಿಳಿಸಿದೆ. ಅಲ್ಲಿನ ಭದ್ರತಾ ವಿಚಾರಗಳನ್ನು ಮುಂದಿಟ್ಟು ಪ್ರವಾಸದಿಂದ ಹಿಂದೆ ಸರಿಯುವುದಾಗಿ ಟೀಮ್ ಇಂಡಿಯಾ ತಿಳಿಸಿತ್ತು. ಹೀಗಾಗಿ ಭಾರತ ತಟಸ್ಥ ಸ್ಥಳದಲ್ಲಿ ನಡೆಯಲಿದೆ. ಇನ್ನು ಭಾರತ, ಪಾಕಿಸ್ತಾನ ನಡುವಣ ಪಂದ್ಯಯಲ್ಲಿ ನಡೆಯುತ್ತದೆ ಎಂಬ ಪ್ರಶ್ನೆಗಳು ಬಹುದಿನಗಳ ಇತ್ತು.ಇದಕ್ಕೆ ಈಗ ಉತ್ತರ ಸಿಕ್ಕಿದೆ.
ಈ ಎರಡೂ ದೇಶಗಳಿಗೆ ಶ್ರೀಲಂಕಾ ಮತ್ತು ಯುಎಇ ಆಯ್ಕೆ ಇತ್ತು. ಈ ಎರಡೂ ದೇಶಗಳು ಪಾಕ್ ಹಾಗೂ ಭಾರತಕ್ಕೆ ಹತ್ತಿರವಾಗಿದೆ. ಇನ್ನುಈಗ ಬರುತ್ತಿರುವ ಪ್ರಕಾರ ನೆರೆಯ ಯುಎಇನಲ್ಲಿ ಆಡುವ ಸಾಧ್ಯತೆ ಇದ್ದ, ಇದೇ ನಗರಕ್ಕೆ ಅನುಮೋದಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕ್ರಿಕ್ ಬಜ್ ವರದಿಯ ಪ್ರಕಾರ ಪಿಸಿಬಿ ಯುಎಇನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ನಡೆಸುವ ಆಸಕ್ತಿಯನ್ನು ತೋರುತ್ತಿದೆ. ಈ ಬಗ್ಗೆ ಪಿಸಿಬಿ ಐಸಿಸಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶೇಖ್ ಮುಬಾರಕ್ ಅಲ್ ನಹ್ಯಾನ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಯುಎಇನಲ್ಲಿ ಭಾರತ, ಪಾಕ್ ಹೈವೋಲ್ಟೇಜ್ ಪಂದ್ಯ ನಡೆಸಲು ಅನುಮೋದಿಸಲಾಗಿದೆ. ಆದರೆ ಈ ಬಗ್ಗೆ ಐಸಿಸಿಯಿಂದ ಇನ್ನು ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ.
ಪಂದ್ಯ ನಡೆಯುವುದು ಎಲ್ಲಿ?
ಯುಎಇನಲ್ಲಿ ಒಟ್ಟು ಮೂರು ಕ್ರೀಡಾಂಗಣಗಳಿವೆ. ಇದರಲ್ಲಿ ದುಬೈನ ಕ್ರೀಡಾಂಗಣ ತುಂಬ ಜನಪ್ರೀಯಾವಾಗಿದೆ. ಹೀಗಾಗಿ ವಿಶ್ವವೇ ಕಾದು ನೋಡುತ್ತಿರುವ ಪಂದ್ಯವನ್ನು ಈ ಅಂಗಳದಲ್ಲಿ ನಡೆಸಲು ನಿರ್ಧರಿಸಲಾಗಿದೆ. ದುಬೈ ಜೊತೆಗೆ ಶಾರ್ಜ್, ಅಬುಧಾಬಿಗಳು ಸಹ ಈ ಲೀಸ್ಟ್‌ನಲ್ಲಿ ಕಾಣಿಸಿಕೊಳ್ಳುವ ಮೈದಾನಗಳಾಗಿವೆ. ಈ ಎರಡೂ ಮೈದಾನಕ್ಕಿಂತಲೂ ದುಬೈ ಮೈದಾನ ಗಾತ್ರದಲ್ಲಿ ದೊಡ್ಡದಾಗಿದ್ದು, ಈ ಮೈದಾನ ಸಾಂಪ್ರದಾಯಿಕ ಎದುರಾಳಿಗಳ ಕಾಳಗಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸ್ಥಳದಲ್ಲಿ ದೊಡ್ಡ ಪಂದ್ಯ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಬಿಡುಗಡೆ ಆಗಿಲ್ಲ ವೇಳಾ ಪಟ್ಟಿ
ಚಾಂಪಿಯನ್ಸ್ ಟ್ರೋಫಿಗೆ ಇನ್ನು ದಿನಗಣನೆ ಆರಂಭವಾಗಿದೆ. ಆದರೆ ಈ ಟ್ರೋಫಿ ವೇಳಾ ಪಟ್ಟಿ ಮಾತ್ರ ಬಿಡುಗಡೆ ಆಗಿಲ್ಲ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಫೆಬ್ರವರಿ 23 ರಂದು ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನು ಈ ಸರಣಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡುವ ಸಾಧ್ಯತೆ ಇದೆ.
ತಟಸ್ಥ ಸ್ಥಳದಲ್ಲಿ ಭಾರತ ಪಂದ್ಯ
ಭಾರತ ಕ್ರಿಕೆಟ್ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ತಿಳಿಸಿತ್ತು. ಇದಕ್ಕೆ ಸರ್ಕಾರದ ಒಪ್ಪಿಗೆ ಬೇಕಿತ್ತು. ಕೇಂದ್ರ ಸರ್ಕಾರ ಸಹ ತನ್ನ ಆಟಗಾರರನ್ನು ಭಧ್ರತೆಯ ನೆಪ ಒಡ್ಡಿ ಕಳಿಸದಿರಲು ತಿಳಿಸಿತು. ಇನ್ನು ಹೀಗಾಗಿ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಯನ್ನು ತಟಸ್ಥ ಸ್ಥಳದಲ್ಲಿ ಮಾಡುವಂತೆ ಒತ್ತಾಯಿಸಿತು. ಆದರೆ ಪಿಸಿಬಿ ಮಾತ್ರ, ತನಗೆ ಬಹು ವರ್ಷಗಳ ಬಳಿಕ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ಹಠ ಹಿಡಿದಿತ್ತು. ಕೊನೆಗೆ ಐಸಿಸಿ ಮಟ್ಟದಲ್ಲಿ ಚರ್ಚೆಗಳು ನಡೆದು ತಟಸ್ಥ ಸ್ಥಳದಲ್ಲಿ ಪಂದ್ಯಗಳು ನಡೆಯಲು ಅನುಮತಿ ನೀಡಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications