Champions Trophy 2025: ಪಾಕಿಸ್ತಾನಕ್ಕೆ ಹೋಗಲು ಭಾರತ ಹಿಂದೇಟು; ಇಲ್ಲಿದೆ 1989ರ ಅಸಲಿ ಕಾರಣ!
ಆಗಸ್ಟ್ 17 ಶನಿವಾರ, ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈನಲ್ಲಿ ಆಯೋಜಿಸಲು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ಮನವಿ ಸಲ್ಲಿಸಿದೆ.
2008ರ ಏಷ್ಯಾಕಪ್ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿದ್ದು, ಟೀಮ್ ಇಂಡಿಯಾ ಪಾಕಿಸ್ತಾನದಲ್ಲಿ ಯಾವುದೇ ಕ್ರಿಕೆಟ್ ಟೂರ್ನಿಗಳನ್ನು ಆಡಿಲ್ಲ. ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗದಿರಲು ಭದ್ರತಾ ಸಮಸ್ಯೆಯೇ ದೊಡ್ಡ ಕಾರಣ.

ಅದರಲ್ಲೂ 1989ರಲ್ಲಿ ನಡೆದ ಆ ಒಂದು ಘಟನೆ ಇಂದಿಗೂ ಟೀಮ್ ಇಂಡಿಯಾ ಆಟಗಾರರನ್ನು ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಚಿಂತೆಗೀಡು ಮಾಡಿದೆ. ಹೀಗಾಗಿ ಪಾಕಿಸ್ತಾನ ಪ್ರವಾಸದಿಂದ ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ನೇತೃತ್ವದ ಭಾರತ ತಂಡ ಹಿಂದೆ ಸರಿದಿದೆ.
1989ರ ಭಯಾನಕ ಘಟನೆ
1989ರಲ್ಲಿ ಕರಾಚಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ಇದೇ ಟೆಸ್ಟ್ ಪಂದ್ಯದ ಮೂಲಕ 16 ವರ್ಷ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೃಷ್ಣಮಾಚಾರಿ ಶ್ರೀಕಾಂತ್ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದರು.
ಈ ವೇಳೆ ಪಾಕಿಸ್ತಾನದ ಕೆಲವು ಪ್ರೇಕ್ಷಕರು ಮೈದಾನದೊಳಗೆ ನುಗ್ಗಿ ಕೃಷ್ಣಮಾಚಾರಿ ಶ್ರೀಕಾಂತ್ ಮೇಲೆ ಹಲ್ಲೆ ನಡೆಸಿದ್ದರು. ಪಾಕ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮೈದಾನದೊಳಗೆ ನುಗ್ಗಿದ ದುರ್ಷಮಿಗಳು ಭಾರತದ ಫೀಲ್ಡರ್‌ಗಳಿಗೆ ಬೆದರಿಕೆ ಹಾಕಿದನು.
ಇಂತಹ ಪರಿಸ್ಥಿತಿಯಲ್ಲಿ ಕ್ಯಾಪ್ಟನ್ ಕೃಷ್ಣಮಾಚಾರಿ ಶ್ರೀಕಾಂತ್ ಮಧ್ಯಪ್ರವೇಶಿಸಿದ್ದರು. ಆಗ ಪಾಕ್ ದುರ್ಷಮಿ ಶ್ರೀಕಾಂತ್‌ಗೆ ಹಲ್ಲೆ ಮಾಡಿದ್ದನು. ಘಟನೆ ನಡೆದಾಗ ಮಾಜಿ ನಾಯಕ ಕಪಿಲ್ ದೇವ್ ಕೂಡ ಮೈದಾನದಲ್ಲಿದ್ದರು. ಈ ಘಟನೆ ನಂತರ ಟೀಮ್ ಇಂಡಿಯಾ ಆಟಗಾರರು ಭಯಭೀತರಾಗಿದ್ದರು.
ಮ್ಯಾನೇಜರ್ ಹೇಳಿದ್ದೇನು?
ಅಂದಿನ ಟೀಮ್ ಇಂಡಿಯಾದ ಮ್ಯಾನೇಜರ್ ಚಂದು ಬೋರ್ಡೆ ಈ ಘಟನೆ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಮೇಲೂ ಪಾಕಿಸ್ತಾನದಲ್ಲಿ ಲೋಹದ ಕೊಕ್ಕೆಯಿಂದ ದಾಳಿ ನಡೆಸಲಾಗಿತ್ತು. ಇದಾದ ಬಳಿಕ ಟೀಮ್ ಇಂಡಿಯಾದ ಆಟಗಾರರು ಪಾಕಿಸ್ತಾನದಲ್ಲಿ ಎಲ್ಲಾ ರೀತಿಯ ವಿವಾದಗಳನ್ನು ಎದುರಿಸಿ ಭಾರತಕ್ಕೆ ಮರಳಿದ್ದರು ಎಂದು ಚಂದು ಬೋರ್ಡೆ ತಿಳಿಸಿದ್ದಾರೆ.
ಡಿಸೆಂಬರ್ 2012 ರಿಂದ ಜನವರಿ 2013 ರವರೆಗೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ದ್ವಿಪಕ್ಷೀಯ ಸರಣಿಯಾಗಿದೆ. ಈ ಸರಣಿ ಭಾರತದಲ್ಲಿ ನಡೆದಿತ್ತು. ಅಂದಿನಿಂದ, ಉಭಯ ದೇಶಗಳು ಐಸಿಸಿ ಟೂರ್ನಿಗಳು ಮತ್ತು ಏಷ್ಯಾ ಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications