CT 2017 ಫೈನಲಿಗೂ ಮುನ್ನ ಎಂಎಸ್ ಧೋನಿ ಚಿತ್ರ ಫೇಮಸ್!
ಲಂಡನ್, ಜೂನ್ 18: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮಗುವಿನೊಂದಿಗಿನ ಫೋಟೊ ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಧೋನಿ ಅವರ ಪುಟ್ಟ ಮಗಳು ಝೀವಾ ಇತ್ತೀಚೆಗೆ ಪಿಯಾನೋ ಬಾರಿಸುವ ಚಿತ್ರ/ದೃಶ್ಯ ಸಾಕಷ್ಟು ಸದ್ದು ಮಾಡಿತ್ತು. ಆದರೆ,ಈಗ ವೈರಲ್ ಆಗುತ್ತಿರುವ ಚಿತ್ರದಲ್ಲಿ ಧೋನಿ ಜತೆಗಿರುವುದು ಝೀವಾ ಅಲ್ಲ, ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಅವರ ಮಗು.
ಚಾಂಪಿಯನ್ಸ್ ಟ್ರೋಫಿ : ಗ್ಯಾಲರಿ
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪುತ್ರನನ್ನು ಧೋನಿ ಅವರು ಎತ್ತಿಕೊಂಡಿರುವ ಫೋಟೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಐಸಿಸಿ ಚಾಂಪಿಯನ್ಸ್ 2017ರ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೆಣಸಾಟಕ್ಕೂ ಮುನ್ನ ಧೋನಿ ಅವರ ಚಿತ್ರ ಸಾಕಷ್ಟು ಚರ್ಚೆಗೊಳಗಾಗಿದೆ. ಜನಪ್ರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರು ಈ ಚಿತ್ರವನ್ನು ಟ್ವೀಟ್ ಮಾಡಿದ್ದು, ಗಡಿ ಮೀರಿದ ಕ್ರೀಡಾ ಪ್ರೇಮ ಎಂದು ಬರೆದುಕೊಂಡಿದ್ದಾರೆ.

ಧೋನಿ ಜತೆ ಸರ್ಫರಾಜ್ ಅಹ್ಮದ್ ಪುತ್ರ
ಕಳೆದ ಜನವರಿ ತಿಂಗಳಿನಲ್ಲಿ ಜನಿಸಿರುವ ಅಬ್ದುಲ್ಲಾ ಸರ್ಫರಾಜ್ ಅಹ್ಮದ್ ನನ್ನು ನೋಡಿದ ಧೋನಿ ಅವರು ಫೋಟೋ ತೆಗೆಸಿಕೊಂಡಿದ್ದಾರೆ. ಈ ಚಿತ್ರ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.
ಎಲ್ಲರ ಹೃದಯ ಗೆದ್ದ ಧೋನಿ
ಧೋನಿ ಅವರು ಸರ್ಫರಾಜ್ ಅಹ್ಮದ್ ಪುತ್ರ ಅಬ್ದುಲ್ಲಾನನ್ನು ಎತ್ತಿಕೊಂಡಿರುವ ಫೋಟೋವನ್ನು ಜನಪ್ರಿಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
ಧೋನಿ ಕ್ಲಾಸ್
ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಎಂಎಸ್ ಧೋನಿ ಎಂದರೆ ಕ್ಲಾಸ್ ಎಂದ ಅಭಿಮಾನಿಗಳು.
ಕ್ರಿಕೆಟ್ ರಾಯಭಾರಿ
ಸಭ್ಯರ ಆಟ ಕ್ರಿಕೆಟ್ ನ ನಿಜವಾದ ರಾಯಭಾರಿ ಎಂಎಸ್ ಧೋನಿ ಎಂದು ಹೊಗಳಿದ ಅಭಿಮಾನಿಗಳು.
ಮಗು ಜತೆ ಧೋನಿ
ಮೈದಾನದಲ್ಲಿ ಮಾತ್ರ ವೈರತ್ವ, ಹೊರಗಡೆ ಎಲ್ಲರ ಜತೆ ಮಿತ್ರತ್ವ, ಇದಕ್ಕೆ ಒಂದು ಸಣ್ಣ ಉದಾಹರಣೆ ಈ ಚಿತ್ರ ಎಂದು ಅನೇಕರು ಹೊಗಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications