For Quick Alerts
ALLOW NOTIFICATIONS  
For Daily Alerts
 

IND vs PAK: ಪಾಕಿಸ್ತಾನ ಸೋಲು ಖಚಿತ; ತಂಡದಲ್ಲಿಲ್ಲ ಚಾಂಪಿಯನ್ ಆಟಗಾರರು

ಸುಮಾರು ಒಂದು ವರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ತಂಡಗಳು ಕೆಲವೇ ಗಂಟೆಗಳಲ್ಲಿ ಮುಖಾಮುಖಿಯಾಗಲಿವೆ. ಚಾಂಪಿಯನ್ಸ್ ಟ್ರೋಫಿ 2025ರ ಗುಂಪು ಹಂತದ ಪಂದ್ಯದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2.30 ಗಂಟೆಗೆ ಆರಂಭವಾಗಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ದರೂ, 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡವು ಟೀಮ್ ಇಂಡಿಯಾವನ್ನು ಸೋಲಿಸಿದೆ. ಆದರೆ ಈಗ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಎಂದರೆ ಪಾಕಿಸ್ತಾನದ ಚಾಂಪಿಯನ್ ಆಟಗಾರರು ತಂಡದಲ್ಲಿ ಇಲ್ಲದಿರುವುದು. 2017ರಲ್ಲಿ ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಆ ಐದು ಪಾಕಿಸ್ತಾನ ತಂಡದ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

Champions Trophy Pakistan star players who troubled Team India are out

ಫಖರ್ ಜಮಾನ್: ಪಾಕಿಸ್ತಾನ ತಂಡ ಸ್ಟಾರ್ ಬ್ಯಾಟರ್ ಫಖರ್ ಜಮಾನ್ ಗಾಯದ ಕಾರಣದಿಂದಾಗಿ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಗುಳಿದಿದ್ದಾರೆ. 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಅದ್ಭುತ ಶತಕ ಗಳಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಗಿದ್ದರು. ಅವರ 114 ರನ್‌ಗಳ ಇನ್ನಿಂಗ್ಸ್‌ನ ಆಧಾರದ ಮೇಲೆ, ಪಾಕಿಸ್ತಾನ 338 ರನ್‌ಗಳನ್ನು ಗಳಿಸಿತ್ತು.

ಅಜರ್ ಅಲಿ: ಮತ್ತೊರ್ವ ಆರಂಭಿಕ ಬ್ಯಾಟರ್ ಅಜರ್ ಅಲಿ ಕೂಡ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ ಉತ್ತಮ ಆರಂಭ ನೀಡಿದರು. ಅವರು ಫಖರ್ ಜೊತೆ ಶತಕದ ಜೊತೆಯಾಟ ಆಡುವ ಮೂಲಕ ಉತ್ತಮ ಅಡಿಪಾಯ ಹಾಕಿದ್ದರು. ಆದರೆ ಈಗ ಭಾರತಕ್ಕೆ ನೋವುಂಟು ಮಾಡಿದ್ದ ಅಜರ್ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡದ ಭಾಗವಾಗಿಲ್ಲ.

ಮೊಹಮ್ಮದ್ ಹಫೀಜ್: ಸ್ಟಾರ್ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಪಾಕಿಸ್ತಾನ ಪರ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು ಟೀಮ್ ಇಂಡಿಯಾ ಬೌಲರ್‌ಗಳನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದರು. ಅವರು ಕೇವಲ 37 ಎಸೆತಗಳಲ್ಲಿ 57 ರನ್ ಗಳಿಸಿದರು. ಆದರೆ 2022 ರಲ್ಲಿ ಹಫೀಜ್ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಹೀಗಾಗಿ ಅವರು ತಂಡದ ಭಾಗವಾಗಿಲ್ಲ.

ಮೊಹಮ್ಮದ್ ಆಮಿರ್: ಪಾಕಿಸ್ತಾನ ತಂಡ ವೇಗಿ ಮೊಹಮ್ಮದ್ ಆಮಿರ್ ಕೂಡ ಟೀಮ್ ಇಂಡಿಯಾದಿಂದ ಟ್ರೋಫಿಯನ್ನು ಕಸಿದುಕೊಳ್ಳುವಲ್ಲಿ ಪ್ರಮುಖ ಆಟಗಾರರಾಗಿದ್ದರು. ಅವರು 3 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಮ್ ಇಂಡಿಯಾವನ್ನು ಕಟ್ಟಿ ಹಾಕಿದ್ದರು. ಅವರು ರೋಹಿತ್, ಧವನ್ ಮತ್ತು ಕೊಹ್ಲಿ ವಿಕೆಟ್ ಕಬಳಿಸಿ ಮಿಂಚಿದ್ದರು. ಮಾರ್ಚ್ 2024 ರಲ್ಲಿ, ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದರಯ. ಇದರಿಂದಾಗಿ ಅವರು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ತಂಡದ ಭಾಗವಾಗಿಲ್ಲ.

ಹಸನ್ ಅಲಿ: ಆಮಿರ್ ಜೊತೆಗೆ ಹಸನ್ ಅಲಿ ಕೂಡ ಟೀಮ್ ಇಂಡಿಯಾ ಬ್ಯಾಟರ್‌ಗಳನ್ನು ಕಾಡಿದ್ದರು. ಅವರು 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ತೆಗೆದು ಕೊಟ್ಟಿದ್ದರು. ಆ ಸಮಯದಲ್ಲಿ ಹಾರ್ದಿಕ್ 76 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಪಂದ್ಯಕ್ಕೆ ಜೀವ ತುಂಬಿದ್ದರು. ಇಂತಹ ಸಂದರ್ಭದಲ್ಲಿ ಪಾಂಡ್ಯ ಅವರನ್ನು ಹಸನ್ ಅಲಿ ರನ್ ಔಟ್ ಮಾಡಿದರು. ಇಷ್ಟೇ ಅಲ್ಲ, ಹಸನ್ ಅಲಿ ಎಂಎಸ್ ಧೋನಿ, ಅಶ್ವಿನ್ ಮತ್ತು ಬುಮ್ರಾ ಅವರ ವಿಕೆಟ್ ಉರುಳಿಸಿದ್ದರು. ಈ ವರ್ಷ ಆರಂಭದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

Story first published: Sunday, February 23, 2025, 10:30 [IST]
Other articles published on Feb 23, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+