Champions Trophy 2025: ಇನಿಂಗ್ಸ್‌ನಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿ: ಭಾರತೀಯ ಆಟಗಾರರಿಗೂ ಸ್ಥಾನ
ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿಗೆ ಇನ್ನೇನು ಕೆಲವೇ ದಿನಗಳಲ್ಲಿ ಚಾಲನೆ ಸಿಗಲಿದೆ. ಒಂಬತ್ತನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಹೈಬ್ರೀಡ್ ಮಾಡೆಲ್‌ನಲ್ಲಿ ನಡೆಯಲಿದೆ. ಈ ಬಾರಿಯೂ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಪ್ರತಿ ತಂಡಕ್ಕೂ ಗುಂಪು ಹಂತದಲ್ಲಿ ತಲಾ ಮೂರು ಪಂದ್ಯಗಳು ಸಿಗಲಿವೆ. ಈ ಲೀಗ್‌ನಲ್ಲಿ ಗರಿಷ್ಠ ಅಂಕ ಪಡೆದ ಎರಡು ತಂಡಗಳು ಸೆಮಿಫೈನಲ್ ತಲುಪುತ್ತವೆ.
ಚಾಂಪಿಯನ್ಸ್ ಟ್ರೋಫಿ ಶುರುವಾದಾಗಿನಿಂದಲೂ ಈ ವರೆಗೆ ಉತ್ತಮ ಪ್ರದರ್ಶನ ಕಂಡಿದೆ. ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಆರ್ಭಟ ನಡೆಸಿ ತಮ್ಮ ತಮ್ಮ ತಂಡಕ್ಕೆ ನೆರವಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅದೇಷ್ಟೋ ಆಟಗಾರರು ಮಿಂಚಿದ್ದಾರೆ. ಆದರೆ ನಾವು ಇಂದು ಟೂರ್ನಿಯಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರನ್ನು ತಿಳಿಸಲಿದ್ದೇವೆ.

ನಾಥನ್ ಆಸ್ಟಲ್
ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ನಾಥನ್ ಆಸ್ಟಲ್, 2004ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಧಮಾಕೆದಾರ್ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಯುಎಇ ವಿರುದ್ಧ ಬ್ಯಾಟ್ ಮಾಡಿದ ಇವರು 96ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದಾರೆ. ಇವರು ಎದುರಿಸಿದ 151 ಎಸೆತಗಳಲ್ಲಿ ಅಜೇಯ 145 ರನ್ ಸಿಡಿಸಿದ್ದಾರೆ. ಈ ವೇಳೆ 13 ಬೌಂಡರಿ, 6 ಸಿಕ್ಸರ್ ಸಹ ಸೇರಿವೆ.
ಆಂಡಿ ಫ್ಲವರ್
ಈ ಟೂರ್ನಿಯಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಿಂಬಾಬ್ವೆ ತಂಡದ ಆಂಡಿ ಫ್ಲವರ್ ಭಾರತದ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದ್ದಾರೆ. ಇವರು 164 ಎಸೆತಗಳಲ್ಲಿ 13 ಬೌಂಡರಿ ಸೇರಿದಂತೆ 145 ರನ್ ಸಿಡಿಸಿದ್ದಾರೆ.

ಸೌರವ್ ಗಂಗೂಲಿ
ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಿಸಿದವರ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಸೌರವ್ ಗಂಗೂಲಿಗೂ ಸ್ಥಾನ. ಇವರು 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗಂಗೂಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರ ಈ ಪಂದ್ಯದಲ್ಲಿ 142 ಎಸೆತಗಳಲ್ಲಿ ಅಜೇಯ 141 ರನ್ ಸಿಡಿಸಿದ್ದಾರೆ. ಈ ವೇಳೆ 11 ಬೌಂಡರಿ, 6 ಸಿಕ್ಸರ್ ಸೇರಿವೆ.
ಸಚಿನ್ ತೆಂಡೂಲ್ಕರ್
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ಸಹ ಈ ಟೂರ್ನಿಯಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು 128 ಎಸೆತಗಳಲ್ಲಿ 13 ಬೌಂಡರಿ, 3 ಸಿಕ್ಸರ್ ಸಹಾಯದಿಂದ 141 ರನ್ ಬಾರಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 110 ಆಗಿತ್ತು.
ಗ್ರೇಮ್ ಸ್ಮಿತ್
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಆಟಗಾರ ಗ್ರೇಮ್ ಸ್ಮಿತ್ ಇದ್ದಾರೆ. ಇವರು ಸಹ 2009ರಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ. ಸ್ಮಿತ್ 16 ಬೌಂಡರಿ ನೆರವಿನಿಂದ 141 ರನ್ ಸಿಡಿಸಿ ಸ್ಫೋಟಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications